ಕಲ್ಪ ಮೀಡಿಯಾ ಹೌಸ್
ಕಡೂರು: ಯುವತಿಯೊಬ್ಬಳು ತನಗಿಂತ ಕಿರಿಯ ಬಾಲಕನನ್ನು ಮದುವೆಯಾಗಿರು ಘಟನೆ ತಾಲೂಕಿನಲ್ಲಿ ವರದಿತಾಗಿದೆ. ಈ ಸಂಬಂಧ ಯುವತಿ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಪ್ರಕರಣ ದಾಖಲಾಗಿದೆ.
20 ವರ್ಷದ ಯುವತಿಗೆ, ಫೇಸ್‌ಬುಕ್ ಮೂಲಕ 17 ವರ್ಷದ ಹುಡುಗನ ಪರಿಚಯವಾಗಿದೆ. ಈ ಪರಿಚಯ ಪ್ರೇಮಕ್ಕೆ ತಿರುಗಿದ್ದು, ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು. ಆದರೆ, ಹುಡುಗ, ಯುವತಿಗಿಂತ ಮೂರು ವರ್ಷ ಚಿಕ್ಕವನೆಂಬ ವಿಷಯ ತಿಳಿದಿದ್ದರೂ, ಎರಡೂ ಮನೆಯವರು ಪ್ರೇಮವಿವಾಹಕ್ಕೆ ಸಮ್ಮತಿಸಿದ್ದರು. ಹುಡುಗನ ಮನೆಯಲ್ಲೆ ಎರಡೂ ಕಡೆಯ ಹಿರಿಯರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲೇ ಮದುವೆಯೂ ನಡೆದಿದೆ.
ಇದಕ್ಕೆ ಸಂಬಂಧಿಸಿದಂತೆ ಮಕ್ಕಳ ಸಹಾಯವಾಣಿಗೆ ಜೂನ್ 23ರಂದು ಮಾಹಿತಿ ದೊರೆತಿತ್ತು. ಪೊಲೀಸರೊಡನೆ ಅಂಗನವಾಡಿ ಮೇಲ್ವಿಚಾರಕಿ ಜಾಕೀರ್ ತಾಜ್, ಮಕ್ಕಳ ಸಹಾಯವಾಣಿ ಸಿಬ್ಬಂದಿ ಮೇಘರಾಜ್ ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸ್ಥಳಕ್ಕೆ ತೆರಳಿ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post