No Result
View All Result
swr vigilance awareness campaign 2026 hubballi dharwad
English Articles

SWR Vigilance Dept Organizes Inter-School Competitions to Promote Integrity & Ethical Values

by kalpa News
September 24, 2026
0

Kalpa Media House  |  Hubballi | The Vigilance Department of South Western Railway (SWR) organized a series of inter-school competitions...

Read moreDetails
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
  • Advertise With Us
  • Grievances
  • About Us
  • Contact Us
Thursday, September 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕಲ್ಪ ನ್ಯೂಸ್ ‘ಲೋಕಾ’ಯಾತ್ರೆ: ಹೊಳೆಹೊನ್ನೂರು ಭಾಗದಲ್ಲಿ ಹೇಗಿದೆ ಮತದಾರನ ಇಂಗಿತ?

kalpa News by kalpa News
April 9, 2019
in Special Articles
0
ಕಲ್ಪ ನ್ಯೂಸ್ ‘ಲೋಕಾ’ಯಾತ್ರೆ: ಹೊಳೆಹೊನ್ನೂರು ಭಾಗದಲ್ಲಿ ಹೇಗಿದೆ ಮತದಾರನ ಇಂಗಿತ?
Share on FacebookShare on TwitterShare on WhatsApp

ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಚಾರ ಕಾರ್ಯಗಳೊಂದಿಗೆ ಸೋಲು ಗೆಲುವಿನ ಚರ್ಚೆಗಳು ಆರಂಭವಾಗಿದ್ದು, ಈಗಲೇ ಮತಗಳ ಅಂತರಗಳ ಕುರಿತಾಗಿಯೂ ಎಲ್ಲೆಡೆ ಚರ್ಚೆಯಾಗುತ್ತಲೇ ಇದೆ.

ಈ ಹಿನ್ನೆಲೆಯಲ್ಲಿ ವಿನೂತನ ಸಾಹಸಕ್ಕೆ ಕೈ ಹಾಕಿರುವ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ, ‘ಕಲ್ಪ ನ್ಯೂಸ್ ಲೋಕಾ ಯಾತ್ರೆ’ ಎಂಬ ಹೆಸರಿನ ಅಡಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡುವ ಸಾಹಸಕ್ಕೆ ಕೈಹಾಕಿದೆ.

ಚುನಾವಣಾ ನೀತಿ ಸಂಹಿತೆಯಿರುವ ಹಿನ್ನೆಲೆಯಲ್ಲಿ ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಎಷ್ಟು ಶೇಕಡಾವಾರು ಮತ ಬೀಳಬಹುದು, ಒಟ್ಟಾರೆ ಯಾರ ಗೆಲುವು ನಿಶ್ಚಿತ ಎಂಬುದನ್ನು ನಾವು ಸ್ಪಷ್ಟವಾಗಿ ಹೇಳುವುದಿಲ್ಲ. ಇಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಅಥವಾ ವಿರೋಧವಾಗಿ ಸಮೀಕ್ಷೆ ನಡೆಸದೇ, ಸದರಿ ಭಾಗದ ಸಮಸ್ಯೆಗಳು, ಜನರ ಮನದಾಳದ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ಸ್ವತಂತ್ರವಾಗಿ ವಾಸ್ತವ ಸಮೀಕ್ಷೆಯನ್ನು ನಡೆಸಲಾಗಿದೆ. ಪ್ರತಿನಿತ್ಯ ನಮ್ಮ ತಂಡ ನೂರಾರು ಮತದಾರರನ್ನು ಮಾತನಾಡಿಸುತ್ತಿದ್ದು, ಇದರಲ್ಲಿ ಆಯ್ದ ಕೆಲವರ ಅನಿಸಿಕೆಗಳನ್ನು ಮಾತ್ರ ಪ್ರಕಟಿಸಿ, ಒಟ್ಟಾರೆಯಾಗಿ ಸದರಿ ಭಾಗದಲ್ಲಿನ ಒಲವು ಯಾರಿಗಿದೆ ಎಂಬುದನ್ನು ಓದುಗರಿಗೆ ತಿಳಿಸಿ, ನಿರ್ಧಾರವನ್ನೂ ಅವರಿಗೇ ಬಿಡುತ್ತೇವೆ.

ಹೊಳೆಹೊನ್ನೂರು ಸನಿಹದ ಸಿದ್ಲಿಪುರ, ನಾಗಸಮುದ್ರ, ಮಂಗೋಟೆ, ಅರಹತೊಳಲು, ಮಾರಶೆಟ್ಟಿಹಳ್ಳಿಗಳಲ್ಲಿ ಮತದಾರರ ಒಲವು-ನಿಲುವು ಹೀಗಿದೆ:

ಪುರದಾಳ್ ಗ್ರಾಮ ಪಂಚಾಯತ್ ಗೆ ಸೇರಿರುವ ಅನುಪಿನ ಕಟ್ಟೆ, ಕಲ್ಲೂರು, ಗೋವಿಂದಪುರ ಹಳ್ಳಿಗಳನ್ನ ಕೂಡಿದೆ. ಪ್ರಸ್ತುತ ಜೆಡಿಎಸ್ ಹಿಡಿತ ಈ ಗ್ರಾಮದಲ್ಲಿದೆ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಸುಮಾರು 1200 ಮತಗಳಲ್ಲಿ ಸಾವಿರ ಮತಗಳು ಚಲಾವಣೆಯಾಗಿವೆ. ಅದರಲ್ಲಿ 600 ಮೈತ್ರಿ ಪಕ್ಷದ ಅಭ್ಯರ್ಥಿಗೆ ಸಂದಿದ್ದರೆ, ಉಳಿದವು ಮತಗಳು ಬಿಜೆಪಿಯ ಪಾಲಾಗಿದ್ದವು. ಸಹಜವಾಗಿಯೇ ಹಿಂದಿನ ಶಾಸಕಿಯಾಗಿ ಸೇವೆ ಸಲ್ಲಿಸಿದ ಶಾರದಾ ಪೂರ್ಯಾನಾಯ್ಕ್‌ ಅವರ ಕೆಲಸದ ಬಗ್ಗೆ ಅವರ ತೃಪ್ತಿ ಇದೆ.
-ಶ್ರೀನಿವಾಸ್, ಸ್ಥಳೀಯ ಕೃಷಿಕ
“““““““““““““`
ಸಾಲಮನ್ನಾ ಘೋಷಣೆ ತುಸು ಇಲ್ಲಿನ ರೈತರಿಗೆ ನೆರವಾಗಿದೆ. ಈಗಿನ ಟ್ರೆಂಡ್ ಪ್ರಕಾರ ಶೇ.75ರಷ್ಟು ಜೆಡಿಎಸ್ ಕಡೆ ಮತ್ತು ಶೇ.25ರಷ್ಟು ಬಿಜೆಪಿ ಕಡೆಗೆ. ಜೊತೆಗೆ ಯುವಜನ ಮೋದೀಜಿ ಪರ.
-ಶ್ರೀನಿವಾಸ್
“““““““““““““`
ನಾವು ಏನನ್ನೂ ಇದುವರೆಗೆ ನಿರ್ಧರಿಸಿಲ್ಲ. ಮತದಾನದ ಹಿಂದಿನ ದಿನ ನಮ್ಮ ಊರಿನ ಮುಖಂಡರು ಯಾರಿಗೆ ಓಟು ನೀಡಬೇಕು ಅಂತ ಸಲಹೆ ನೀಡುತ್ತಾರೋ ಅವರಿಗೆ ನಾವು ಓಟು ಕೊಡುತ್ತೇವೆ. ಊರಂತೆ ನಾವು.

ಯಲ್ಲಮ್ಮ, ಪುಟ್ಟ ಅಂಗಡಿಯ ಮಾಲಕಿ, ಅನುಪಿನಕಟ್ಟೆ

“““““““““““““`
ಶಿವಮೊಗ್ಗದಿಂದ ಅಲ್ಲಿಗೆ ಸರಿಯಾದ ಸಂಪರ್ಕ ರಸ್ತೆಯಿಲ್ಲ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಚಲಾವಣೆಯಾದ ಸಾವಿರ ಮತಗಳಲ್ಲಿ ಆರುನೂರು ಜೆಡಿಎಸ್’ಗೆ ಬಿದ್ದವು. ಮಿಕ್ಕ ನಾನೂರು ಬಿಜೆಪಿಗೆ. ಕಾರ್ಪೋರೇಷನ್’ನಿಂದ ಕುಡಿಯುವ ನೀರು ಸರಬರಾಜಾಗಿಲ್ಲ. ಇಲ್ಲಿ ಜೆಡಿಎಸ್ ಬಲವಾಗಿದೆ. ಸಮಸ್ಯೆಗಳಲ್ಲಿ ವಿದ್ಯುತ್ ಖೋತಾ ಈಗಲೂ ದಿನದಲ್ಲಿ ಎಂಟು ಗಂಟೆಯಷ್ಟಿದೆ.

-ಚೇತನ್, ಪುರದಾಳ್ ಪಂಚಾಯತ್’ಗೆ ಸೇರಿದ ಅನತಿ ದೂರದ ಹನುಮಂತಪುರದ ಅಂಗಡಿ ವ್ಯಾಪಾರಸ್ಥ

“““““““““““““`
ಜೆಡಿಎಸ್-ಬಿಜೆಪಿ ಸಮಸಮ. ಹಿಂದಿನ ಚುನಾವಣೆಯಲ್ಲೂ ಹೀಗೇ ಆಗಿತ್ತು. ಈಗಲೂ ಹಾಗೆ ಆಗತ್ತೆ.
-ಪ್ರಶಾಂತ್ ಮತ್ತು ಅಜಯ್

“““““““““““““`
ಮಂಗೋಟೆ ಪಂಚಾಯತ್‌ಗೆ ಸೇರಿದ ನಾಗಸಮುದ್ರ ಎಂಬ ಗ್ರಾಮ. ಇಲ್ಲಿನ ಪಂಚಾಯತ್ ಕಾಂಗ್ರೆಸ್ ವಶವಾಗಿದೆ. ಅವರಿಂದ ಏನೂ ಪ್ರಗತಿಯಾಗಿಲ್ಲ. ಒಳರಸ್ತೆಗಳು ಸರಿಯಿಲ್ಲ. ಪಕ್ಕದ ಹೊಳೆಗೆ ತಡೆಗೋಡೆ ನಿರ್ಮಿಸಿಲ್ಲ. ಎಲ್ಲ ಜನನಾಯಕರು, ಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು… ಇತ್ಯಾದಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಈವರೆವಿಗೂ ಯಾವುದೇ ನಿಖರ ಯೋಜನೆ ಸಿದ್ಧವಾಗಿಲ್ಲ. ನಿವೇಶನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಆದರೂ ಯಡ್ಯೂರಪ್ಪನವರ ಕಾಲದಲ್ಲಿ ಅಲ್ಲಿಂದ ಹೊಳಲೂರಿಗೆ ಒಂದು ಜಬರ್ದಸ್ತ್‌ ಸೇತುವೆ ಆಗಿದೆ. ಹೀಗಾಗಿ ನಾಗಸಮುದ್ರ ಯಡ್ಯೂರಪ್ಪನವರ ಭದ್ರಕೋಟೆ. ಯಾವಾಗ ಬಂದರೂ ಇಲ್ಲಿಗೆ ಭೇಟಿ ನೀಡದೇ ಹೋಗುವುದು ಅಪರೂಪ. ಬಿಜೆಪಿ ಇಲ್ಲಿ ನಿರಾಯಾಸವಾದ ಲೀಡ್ ಪಡೆಯುತ್ತದೆ.

ಯಂಕಪ್ಪ(85 ವರ್ಷ), ಪರಮೇಶ್ವರಪ್ಪ ಮತ್ತು ಮಂಜುನಾಥ್

“““““““““““““`
ಮೋದಿಯಿಂದಾಗಿ ದೇಶದ ಉದ್ದಾರ ಆಗುವ ಜೊತೆಯಲ್ಲಿ ಹಳ್ಳಿಗಳೂ ಉದ್ದಾರ ಆಗುತ್ತಿವೆ. ಕೇಂದ್ರದ ಯೋಜನೆಗಳು ಮನಸ್ಸಿಗೆ ಮುಟ್ಟುತ್ತಿವೆ. ಮೋದಿಯೇ ಮತ್ತೆ ಪ್ರಧಾನಿಯಾಗಬೇಕು.
-ವಿಜಯ್ ಕುಮಾರ್, ರಾಮು ಹಾಗೂ ಶರತ್,
ಮಾರಶೆಟ್ಟಿಹಳ್ಳಿ, ಕಲ್ಲಿಹಾಳ್ ಪಂಚಾಯತ್‌ಗೆ ಸೇರಿದ ಗ್ರಾಮದ ಯುವಕರು

ಈ ಭಾಗದ ಸಮೀಕ್ಷೆ ಕುರಿತಾಗಿ ನಮ್ಮ ಒಟ್ಟಾರೆ ಅಭಿಪ್ರಾಯ:

ಹೊಳೆಹೊನ್ನೂರು ಸನಿಹದ ಸಿದ್ಲಿಪುರ ಒಂದುರೀತಿ ಅಸಡ್ಡೆಗೊಳಗಾದಂತಿದೆ. ಡಣಾಯಕಪುರದ ತನಕ ಸಂಪರ್ಕ ರಸ್ತೆ ಚೆನ್ನಾಗಿದೆ. ಅಲ್ಲಿಂದ ಸಿದ್ಲಿಪುರಕ್ಕೆ ಕಚ್ಚಾಹಾದಿಯಂತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಅರಹ ತೊಳಲು ಸ್ಥಿತಿವಂತ ಕೃಷಿಕರೂ ಇರುವ ಗ್ರಾಮ. ಏಳು ಗ್ರಾಮಗಳ ಪಂಚಾಯತ್ ಇಲ್ಲಿ ಯಾವಾಗಲೂ ಕಾಂಗ್ರೆಸ್ ಮುಂದೆ. ಮೈತ್ರಿ ಪಕ್ಷಕ್ಕೆ ಸುಲಭದ ತುತ್ತಾಗಿದ್ದು, ಲೀಡ್ ಪಡೆಯಬಹುದು. ಇಲ್ಲಿ ಬಿಜೆಪಿಗೆ ಮೋದಿಯನ್ನು ಮೆಚ್ವುವ ಯುವಜನರೇ ಸ್ವಲ್ಪ ಆಶಾಕಿರಣ ಎನ್ನಬಹುದು.

ಮಂಗೋಟೆ ಪಂಚಾಯತ್ ವಿಚಾರದಲ್ಲಿ ನೋಡುವುದಾದರೆ ಅಲ್ಲಿನ ನದಿ ತಡೆಗೋಡೆ ನಿರ್ಮಾಣವಾಗದಿದ್ದರೆ ಗ್ರಾಮಸ್ಥರು ಬಹಳ ಎಲ್ಲ ಪಕ್ಷಗಳ ರಾಜಕಾರಣಿಗಳೂ ಸ್ಥಳೀಯರ ಕೋಪಕ್ಕೆ ತುತ್ತಾಗುವುದು ಗ್ಯಾರೆಂಟಿ. ಇದರ ನಡುವೆಯೇ ಯಡ್ಯೂರಪ್ಪನವರು ಮುಖ್ಯಮಂತ್ರಿಯಾದಾಗ ನಡೆಸಿದ ಕೆಲವು ಕಾಮಗಾರಿಯಿಂದಾಗಿ ಇಲ್ಲಿ ಬಿಜೆಪಿ ಬಗ್ಗೆ ಒಲವಿದೆ ಎಂದು ಹೇಳಬಹುದು.
-ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಟೀಂ

ವಿಶೇಷ ಸೂಚನೆ: ಈ ಚುನಾವಣಾ ಸಮೀಕ್ಷಾ ವರದಿ ಯಾವುದೇ ಪಕ್ಷಕ್ಕೆ ಅಥವಾ ಅಭ್ಯರ್ಥಿಯ ಪರವಾಗಿ ನಡೆಸಲಾಗಿರುವುದಿಲ್ಲ. ಬದಲಾಗಿ, ನಮ್ಮ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಪ್ರತಿನಿಧಿಗಳು ಜನಸಾಮಾನ್ಯರನ್ನು ಖುದ್ದು ಸಂಪರ್ಕಿಸಿ, ಅವರ ಕಷ್ಟ-ಸುಖ ಹಾಗೂ ಚುನಾವಣೆ ಕುರಿತಾಗಿನ ಅವರ ಮನದಾಳದ ಭಾವನೆ ಹಾಗೂ ಅಭಿಪ್ರಾಯವನ್ನು ಸಂಗ್ರಹಿಸಿ, ಓದುಗರಿಗೆ ವಾಸ್ತವಾಂಶವನ್ನು ತೆರೆದಿಡುವ ಪ್ರಾಮಾಣಿಕ ಸೇವಾ ಕಾರ್ಯವನ್ನಷ್ಟೇ ಮಾಡಿದೆ.
Tags: BJPcongressElection Survey in KannadaKalpa News Digital MediaKannada NewsLoksabha Election2 019Malnad NewsShivamoggaSpecial Articleಕಲ್ಪನ್ಯೂಸ್ ಲೋಕಾಯಾತ್ರೆಚುನಾವಣಾ ಸಮೀಕ್ಷೆಲೋಕಸಭಾ ಚುನಾವಣೆ-2019ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಪಚುನಾವಣೆ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಎಪ್ರಿಲ್ 13: ಕೋಲಾರ ತಂಬಿಹಳ್ಳಿ ಮಾಧವತೀರ್ಥ ಮಠದಲ್ಲಿ ರಾಮನವಮಿ ಮಹೋತ್ಸವ

Next Post

ಆರ್’ಜೆ ನಯನಾ ಶೆಟ್ಟಿ ಬರೆಯುತ್ತಾರೆ: ಮುಂದಿನ ಪೀಳಿಗೆಗೆ ಕೊಡುವ ಅತಿದೊಡ್ಡ ಉಡುಗೊರೆ ಏನು ಗೊತ್ತಾ?

kalpa News

kalpa News

Next Post
ಆರ್’ಜೆ ನಯನಾ ಶೆಟ್ಟಿ ಬರೆಯುತ್ತಾರೆ: ಮುಂದಿನ ಪೀಳಿಗೆಗೆ ಕೊಡುವ ಅತಿದೊಡ್ಡ ಉಡುಗೊರೆ ಏನು ಗೊತ್ತಾ?

ಆರ್’ಜೆ ನಯನಾ ಶೆಟ್ಟಿ ಬರೆಯುತ್ತಾರೆ: ಮುಂದಿನ ಪೀಳಿಗೆಗೆ ಕೊಡುವ ಅತಿದೊಡ್ಡ ಉಡುಗೊರೆ ಏನು ಗೊತ್ತಾ?

Leave a Reply Cancel reply

Your email address will not be published. Required fields are marked *

No Result
View All Result
swr vigilance awareness campaign 2026 hubballi dharwad
English Articles

SWR Vigilance Dept Organizes Inter-School Competitions to Promote Integrity & Ethical Values

by kalpa News
September 24, 2026
0

Kalpa Media House  |  Hubballi | The Vigilance Department of South Western Railway (SWR) organized a series of inter-school competitions...

Read moreDetails
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL