ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಂಗಳೂರು: ಎರಡು ದಿನಗಳ ಹಿಂದಷ್ಟೇ ಕದ್ರಿ ಸರ್ಕ್ಯೂಟ್ ಹೌಸ್ ಸಮೀಪದ ಕಾಂಪೌಂಡ್ ಗೋಡೆಯೊಂದರ ಮೇಲೆ ಉಗ್ರರನ್ನು ಕರೆಸುವುದಾಗಿ ಬೆದರಿಕೆ ಹಾಕಿದ ದೇಶದ್ರೋಹಿ ಬರಹವೊಂದು ಕಾಣಿಸಿಕೊಂಡ ಘಟನೆಯ ಬೆನ್ನಲ್ಲೇ ಇಂದು ಬೆಳಗ್ಗೆ ಇಂತಹದೇ ಇನ್ನೊಂದು ಕೃತ್ಯ ಬೆಳಕಿಗೆ ಬಂದಿದೆ.
ನಗರದ ಕೋರ್ಟ್ ಆವರಣದ ಪೊಲೀಸ್ ಹೊರಠಾಣೆಯ ಗೋಡೆಯ ಮೇಲೆ ಇಂಗ್ಲಿಷ್ ಅಕ್ಷರದಲ್ಲಿ ಬರೆದ ಉರ್ದು ಘೋಷಣೆಯೊಂದು ಕಾಣಿಸಿಕೊಂಡಿದೆ.

ಶನಿವಾರ ರಾತ್ರಿ (ನ.28) ಈ ಗೋಡೆ ಬರಹವನ್ನು ಬರೆದಿರಬೇಕು ಎಂದು ನಂಬಲಾಗಿದ್ದು, ಭಾನುವಾರ ಬೆಳಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಿದೆ.

’ಗುಸ್ತಕ್ ಕಿ ಏಕ್ ಹೈ ಸಜಾ, ಸರ್ ತನ್ ಸೇ ಜುಡಾ’ (ಪ್ರವಾದಿಯನ್ನು ಅವಮಾನಿಸುವವರಿಗೆ ಒಂದೇ ಶಿಕ್ಷೆ, ದೇಹದಿಂದ ತಲೆಯನ್ನು ಕತ್ತರಿಸುವುದು) ಎಂದು ಬರೆಯಲಾಗಿದೆ.
ಶುಕ್ರವಾರ ಬೆಳಗ್ಗೆ ಕದ್ರಿ ಸಮೀಪದ ಅಪಾರ್ಟ್‌ಮೆಂಟ್ ಕಾಂಪೌಂಡ್ ಮೇಲೆ ’ಸಂಘ ಪರಿವಾರದ ನಾಯಕರನ್ನು ಮಟ್ಟಹಾಕಲು ಲಷ್ಕರೆ ತಯ್ಬಾ ಉಗ್ರರನ್ನು ಕರೆಸಬೇಕಾದೀತು’ ಎಂಬ ಭಯೋತ್ಪಾದಕರ ಪರ ಘೋಷಣೆ ಪತ್ತೆಯಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















