ಗಂಭೀರವಾದ ಕೌಟುಂಬಿಕ ಸಮಸ್ಯೆಯನ್ನು ಹಾಸ್ಯದ ಜೊತೆ ಬೆರೆಸಿ ತೆರೆಗೆ ತಂದಿರುವ ಸಿನಿಮಾ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’. ಈ ಚಿತ್ರ ಬಿಡುಗಡೆ ದಿನದಂದು ವೀರಯೋಧರ ಮರಣದಿಂದ ತಂಡಕ್ಕೆ ಆತಂಕ ತಂದುಕೊಟ್ಟಿತ್ತು. ನಂತರದ ದಿನಗಳಿಂದ ಗಳಿಕೆಯಲ್ಲಿ ಚೇತರಿಕೆ ಕಂಡು ಬಂತು ಎಂದು ನಿರ್ಮಾಪಕ ಡಾ.ಮಂಜುನಾಥ್.ಡಿ.ಎಸ್ ಸಂತೋಷಕೂಟದಲ್ಲಿ ಹೇಳುತ್ತಿದ್ದರು.
ಭಾನುವಾರ ದಿನದ ಕಲೆಕ್ಷನ್ ಮೊತ್ತವನ್ನು ಯೋಧರ ಕುಟುಂಬಕ್ಕೆ ನೀಡಲಾಗಿದೆ. ಇಲ್ಲಿಯವರೆಗೂ ಮಲ್ಟಿಫ್ಲೆಕ್ಸ್‍ಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ಪತ್ರಿಕೆಗಳಲ್ಲಿ ಉತ್ತಮ ವಿಮರ್ಶೆ ಬಂದ ಕಾರಣ ಜನರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಇದಕ್ಕಾಗಿ ಮಾದ್ಯಮದವರಿಗೆ ಥ್ಯಾಂಕ್ಸ್ ಹೇಳಬೇಕಾಗುತ್ತದೆ. ಮೊದಲ ವಾರ ಒಟ್ಟಾರೆ 80 ಲಕ್ಷ ಬಂದಿದೆ. ಒಂದು ಕಡೆ ಖುಷಿ ಆದರೆ, ನಾಯಕ ಚಂದನ್‍ಆಚಾರ್ ಪ್ರಚಾರಕ್ಕೆ ಬರುತ್ತಿಲ್ಲ. ಚಿತ್ರೀಕರಣದಲ್ಲೂ ಸರಿಯಾದ ಸಮಯಕ್ಕೆ ಬರುತ್ತಿಲ್ಲವೆಂದು ನಿರ್ದೇಶಕರು ಈಗ ಹೇಳುತ್ತಾರೆ. ಯಾವುದೇ ಸಂಭಾವನೆ ಉಳಿಸಿಕೊಳ್ಳದೆ ಚುಕ್ತ ಮಾಡಲಾಗಿದೆ. ಇವರ ವಿರುದ್ದ ಕಲಾವಿದರ ಸಂಘ ಮತ್ತು ವಾಣಿಜ್ಯ ಮಂಡಳಿಗೆ ದೂರ ನೀಡಲು ಚಿಂತನೆ ನಡೆಸಲಾಗಿದೆ. ಮೊದಲೇ ತಿಳಿಸಿದಂತೆ ಸೇಫ್ ಆಗಿದ್ದು, ಕರಿಯಪ್ಪ ನಮ್ಮೆಲ್ಲರನ್ನು ಕೈ ಹಿಡಿದುದಾಗಿ ತಿಳಿಸಿದರು. ಬರವಣಿಗೆಯಿಂದ ಟಾಕೀಸ್‍ನಲ್ಲಿ ಶಿಳ್ಳೆ, ಚಪ್ಪಾಳೆ ಬರುತ್ತಿರುವುದನ್ನು ನೋಡಿದಾಗ ಶ್ರಮ ಸಾರ್ಥಕವಾಗಿದೆ ಎನ್ನುತ್ತಾರೆ ರಚನೆ, ನಿರ್ದೇಶನ ಮಾಡಿರುವ ಕುಮಾರ್.
ಕರ್ನಾಟಕದ ಜನರು ಒಂದು ಬಾರಿಯಾದರೂ ಕರಿಯಪ್ಪನನ್ನು ನೋಡಬೇಕೆಂದು ಹೆಂಡತಿಯಾಗಿ ಕಾಣಿಸಿಕೊಂಡಿರುವ ಅಪೂರ್ವ ಮನವಿ ಮಾಡಿದರು. ನಿರ್ಮಾಪಕರು ಅಪಾಯವನ್ನು ಲೆಕ್ಕಿಸದೆ ಬಿಡುಗಡೆ ಮಾಡಿದ್ದಕ್ಕೆ ಸಕ್ಸಸ್ ಕಂಡಿದ್ದಾರೆ. ಮುಂದಿನವಾರದಿಂದ ಹೆಚ್ಚಿನ ಐದು ಕೇಂದ್ರಗಳಲ್ಲಿ ಬಿಡುಗಡೆಯಾಗಲಿದೆ. ಸ್ಟಾರ್ ನಟರು ಚಿತ್ರ ನೋಡಲು ಬರುವುದಾಗಿ ತಿಳಿಸಿದ್ದಾರೆ. ನಿರ್ಮಾಪಕರ ಮೂಲಕ ಮಾಹಿತಿ ಸಿಗಲಿದೆ ಎಂದು ವಿತರಕ ವಿಜಯ್ ತಿಳಿಸಿದರು. ಮೊದಲ ಸಿನಿಮಾದಲ್ಲೆ ಒಳ್ಳೆ ಪ್ರತಿಭೆ ತೋರಿಸುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದೆ ಎಂದಷ್ಟೇ ಹೇಳಿಕೊಂಡಿದ್ದು ನಾಯಕಿ ಸಂಜನಾ ಆನಂದ್.
ಒಡೆಯ ಚಿತ್ರೀಕರಣದಿಂದ ನೇರವಾಗಿ ಆಗಮಿಸಿದ ಕರಿಯಪ್ಪ ಉರುಫ್ ತಬಲಾನಾಣಿ ಮಾತನಾಡಿ ಜನರು ಅಪ್ಪಿಕೊಂಡು ನಮ್ಮಂತ ಸಣ್ಣ ಕಲಾವಿದರ ಚಿತ್ರಕ್ಕೆ ಆರ್ಶಿವಾದ ಮಾಡಿದ್ದಾರೆ. ಈ ಚಿತ್ರದಿಂದ ನಾಲ್ಕು ಅವಕಾಶಗಳು ಒದಗಿಬಂದಿದೆ. ನಾಯಕನ ಕುರಿತು ಪ್ರಸ್ತಾಪಿಸುತ್ತಾ ಈ ಮಣ್ಣು ಅಹಂಕಾರ ತೋರಿದವರನ್ನು ಎಂದಿಗೂ ಬಿಟ್ಟಿಲ್ಲ. ಅವರ ಜೀವನದ ಜವಬ್ದಾರಿಯನ್ನು ತಿಳಿದುಕೊಂಡರೆ ಮುಂದಕ್ಕೆ ಹೋಗುತ್ತಾರೆ. ಮಿಕ್ಕಿದ್ದು ಅವರಿಗೆ ಬಿಟ್ಟಿದ್ದು. ನಿರ್ದೇಶಕರು ನನ್ನ ಮೇಲೊಂದು ‘ನ್ಯಾನೋ ನಾರಾಯಪ್ಪ’ ಚಿತ್ರ ಮಾಡಲು ಒಂದು ಎಳೆ ಕತೆ ಹೇಳಿದ್ದಾರೆ. ಮಾತೇ ಬಂಡವಾಳ ಆಗಿದ್ದು, ಇದಕ್ಕೆ ಮೂಲ ಕಾರಣವಾಗಿದೆ ಎಂದರು. ಛಾಯಾಗ್ರಾಹಕ ಶಿವಸೀನ ಉಪಸ್ತಿತರಿದ್ದರು.
Discussion about this post