ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಇಲ್ಲಿನ ಕ್ರೈಸ್ಟ್’ಕಿಂಗ್ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಆತ್ಮವಿಶ್ವಾಸ ಬಲವರ್ಧನಾ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ದಿ ಸಂಸ್ಥೆಯಿಂದ ದೃಢೀಕರಿಸಲ್ಪಟ್ಟ ಸಂಸ್ಥೆಯಾದ ಬಲವರ್ಧನಾ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನಡೆಸಿಕೊಟ್ಟರು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವೇ ಅರಿತುಕೊಳ್ಳುವ ಕೌಶಲ್ಯ ಬೆಳೆಸಿಕೊಂಡು ಸೃಜನಾತ್ಮಕ ಯೋಚನೆಯ ವ್ಯಕ್ತಿತ್ವ ಬೆಳೆಸಿಕೊಳ್ಳುವಂತೆ ಅರಿವು ಮೂಡಿಸಲಾಯಿತು.
ಸ್ವಯಂ ಶಿಸ್ತು, ಸಮಯದ ನಿರ್ವಹಣೆ, ಟೀಕೆಗಳನ್ನು ನಿಭಾಯಿಸುವ ರೀತಿ ಹಾಗೂ ವಿಮರ್ಶನಾ ಮನೋಭಾವ ಬೆಳೆಸಿಕೊಂಡು ಆ ಮೂಲಕ ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಕುರಿತಾಗಿ ತರಬೇತಿ ನೀಡಲಾಯಿತು. ಸಂಸ್ಥೆಯ ಏಳರಿಂದ ಒಂಬತ್ತನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದರು.
Also read: ವೇದಾಂತ ಕ್ಷೇತ್ರಕ್ಕೆ ಶ್ರೀ ರಾಜವಂದ್ಯ ತೀರ್ಥರ ಕೊಡುಗೆ ಅನನ್ಯ
ತರಬೇತುದಾರರಾಗಿ ಬಲವರ್ಧನಾ ತರಬೇತಿ ಸಂಸ್ಥೆಯ ಪೌಲ್‌ರಾಜ್ ಶ್ರೀನಿವಾಸನ್, ವಿದ್ಯಾಶ್ರೀ ಎಸ್. ಜುಕ್ತಿ ಹಿರೇಮಠ್, ಡೈನಾ ವಿಜಯನ್, ಸಂದೇಶ್ ಅವರು ಆಗಮಿಸಿದ್ದರು. ಬಲವರ್ಧನಾ ಸಂಸ್ಥೆಯ ಮುಖ್ಯಸ್ಥರಾದ ಆರ್ತಿ ಡೇನಿಯಲ್ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















