ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ ಇವರ ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆ ಅಜ್ಜರಕಾಡು ಇಲ್ಲಿ ನಡೆದ 17ರ ವಯೋಮಿತಿಯ ಬಾಲಕರ ಉಡುಪಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಕಾರ್ಕಳದ ಕ್ರೈಸ್ಟ್‌ಕಿಂಗ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿಯ ಗಗನ್ ಭಟ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
Also read: ಧರ್ಮನಿಷ್ಠೆಯಿಂದ ಯಮನನ್ನೂ ಗೆಲ್ಲಬಹುದು: ರಾಘವೇಶ್ವರ ಸ್ವಾಮೀಜಿ
ಗಗನ್ ಭಟ್ 200ಮೀ ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಉಳಿದಂತೆ 17ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಎಂಟನೇ ತರಗತಿಯ ಶೈನಿ ಡಿಸೋಜಾ 50ಮೀ ಫ್ರೀ ಸ್ಟೈಲ್ ತೃತೀಯ, 100 ಮೀ ಫ್ರೀ ಸ್ಟೈಲ್ ದ್ವಿತೀಯ ಹಾಗೂ 14ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಎಂಟನೇ ತರಗತಿಯ ಶೋನ್ ಡಿಸೋಜಾ 50 ಮೀ ಬ್ರೆಸ್ಟ್ ಸ್ಟ್ರೋಕ್ ತೃತೀಯ, 100 ಮೀ ಫ್ರೀ ಸ್ಟೈಲ್ ದ್ವಿತೀಯ ಹಾಗೂ 14ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಎಂಟನೇ ತರಗತಿಯ ಶೋನ್ ಡಿಸೋಜಾ 50ಮೀ ಬೇಸ್ಟ್ ಸ್ಟ್ರೋಕ್ ತೃತೀಯ, 100ಮೀ ಫ್ರೀ ಸ್ಟೈಲ್ ದ್ವಿತೀಯ, 50ಮೀ ಫ್ರೀ ಸ್ಟೈಲ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಪ್ರಸಾದ್ ತಂಡದ ನೇತೃತ್ವ ವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post