ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಕರಿಮಣಿ ಮಾಲಿಕ ನೀನಲ್ಲ ಎಂದು ಗಂಡನೊಂದಿಗೆ ರೀಲ್ಸ್ ಮಾಡಿದ್ದ ರೀಲ್ಸ್ ರಾಣಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಕೈಹಿಡಿದ ಪತಿಗೆ ವಿಷವುಣಿಸಿ #Wife killed husband ಕೊಂದಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ದೆಪ್ಪುಜೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಬಾಲಕೃಷ್ಣ ಹಾಗೂ ಆರೋಪಿ ಪತ್ನಿಯನ್ನು ಪ್ರತಿಮಾ ಎಂದು ಗುರುತಿಸಲಾಗಿದೆ.
ಈಕೆಗೆ ಕೆಲವು ವರ್ಷಗಳ ಹಿಂದೆ ಬಾಲಕೃಷ್ಣ ಎನ್ನುವವರ ಜೊತೆಗೆ ಮದುವೆಯಾಗಿತ್ತು. ಈಕೆಗೆ ಈ ಹಿಂದಿನಿಂದಲೂ ಹಿರ್ಗಾನದ ದಿಲೀಪದ ಎನ್ನುವವನ ಜೊತೆಗೆ ಸಂಬಂಧವಿತ್ತು ಎಂದು ಹೇಳಲಾಗಿದೆ.
ರೀಲ್ಸ್ ಹುಚ್ಚು ಹಚ್ಚಿಕೊಂಡಿದ್ದ ಪ್ರತಿಮಾಳಿಗೆ ಗಂಡ ಹಲವು ಬಾರಿ ಎಚ್ಚರಿಕೆ ಕೂಡ ಕೊಟ್ಟಿದ್ದರು ಎನ್ನಲಾಗಿದೆ. ಈ ಮಧ್ಯೆ ದಿಲೀಪ್ ಜೊತೆಗಿರುವ ಸಂಬಂಧ ಬಗ್ಗೆ ಗಂಡನಿಗೆ ಸಂಶಯ ಉಂಟಾಗಿತ್ತು. ಹೀಗಾಗಿ ತಮ್ಮಿಬ್ಬರ ಸಂಬಂದಕ್ಕೆ ಅಡ್ಡಿಯಾಗುವ ಗಂಡನನ್ನು ಮುಗಿಸಲು ಇಬ್ಬರು ಸ್ಕೆಚ್ ಹಾಕಿದ್ದಾರೆ.
ಪ್ರಿಯಕರ ದಿಲೀಪ್ ವಿಷ ಪದಾರ್ಥವನ್ನು ಪ್ರತಿಮಾಳ ಕೈಗೆ ಕೊಟ್ಟಿದ್ದು, ಅದನ್ನು ಆಹಾರದಲ್ಲಿ ಬೆರೆಸಿ ಕೊಟ್ಟಿದ್ದಾರೆ. ಆದರೆ, ಸ್ಲೋ ಪಾಯಿಸನ್ ನಿಂದಾಗಿ ಬಾಲಕೃಷ್ಣರಿಗೆ ವಾಂತಿ ಭೇದಿ ಶುರುವಾಗಿದೆ. ಪ್ಲಾನ್ ಪ್ರಕಾರ ಬಾಲಕೃಷ್ಣನ್ನು ಸ್ಥಳೀಯ ಅಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಕಾಮಾಲೆ ರೋಗ ಇದೆ ಎಂದು ಮಣಿಪಾಲ ಅಸ್ಪತ್ರೆ, ಅಲ್ಲಿಂದ ವೆನ್ಲಾಕ್, ಅಲ್ಲಿಂದ ಬೆಂಗಳೂರಿನ ವಿಕ್ಟೋರಿಯ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅ.19 ರಂದು ಮನೆಗೆ ಕರೆದುಕೊಂಡು ಬಂದಿದ್ದಾರೆ.
ಬಳಿಕ ಅ.20 ರಂದು ಬೆಳಗ್ಗೆ ತನ್ನ ಪ್ರಿಯಕರ ಜೊತೆ ಸೇರಿಕೊಂಡು ಬೆಡ್ ಶೀಟ್ ನಿಂದ ಉಸಿರುಗಟ್ಟಿ ಸಾಯಿಸಿದ್ದಾರೆ.ಬಳಿಕ ಬಾಲಕೃಷ್ಣ ಅಸೌಖ್ಯದಿಂದ ಸಾವನ್ನಾಪ್ಪಿದ್ದಾರೆ ಎಂದು ಹೇಳಿ ನಂಬಿಸಿದ್ದರು.
ಅದರೆ ಬಾಲಕೃಷ್ಣ ಕುಟುಂಬಸ್ಥರಿಗೆ ಈ ಬಗ್ಗೆ ಸಂಶಯ ಮೂಡಿದ ಕಾರಣ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದಾಗ ಅಸಲಿ ವಿಚಾರ ಹೊರ ಬಿದ್ದಿದ್ದು, ತಾವು ಸ್ಲೋ ಪಾಯಿಸನ್ ಕೊಟ್ಟು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post