ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಇಲ್ಲಿನ ಕ್ರೈಸ್ಟ್ಕಿಂಗ್ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಮರುಮೌಲ್ಯಮಾಪನದಲ್ಲಿ ಹೆಚ್ಚುವರಿ ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಗ್ರ ಹತ್ತರೊಳಗೆ ರ್ಯಾಂಕ್ಗಳನ್ನು ಪಡೆದುಕೊಂಡಿದ್ದಾರೆ.
ದ್ವಿತೀಯ ವಿಜ್ಞಾನ ವಿಭಾಗದ ಸಂಹಿತ್ ಆಚಾರ್ಯ ಮರುಮೌಲ್ಯಮಾಪನದಲ್ಲಿ ಜೀವಶಾಸ್ತ್ರ ವಿಷಯದಲ್ಲಿ ಒಂದು ಅಂಕ ಪಡೆದುಕೊಂಡಿದ್ದು ಒಟ್ಟು 590 ಅಂಕಗಳನ್ನು ಪಡೆದುಕೊಂಡು ರಾಜ್ಯಮಟ್ಟದಲ್ಲಿ ಹತ್ತನೇ ರ್ಯಾಂಕ್ ಪಡೆದುಕೊಂಡಿದ್ದಾನೆ.
ವಾಣಿಜ್ಯ ವಿಭಾಗದಲ್ಲಿ ನಾರಾಯಣಿ ಜಿ ಕಿಣಿ ಅರ್ಥಶಾಸ್ತ್ರದಲ್ಲಿ ಹೆಚ್ಚವರಿ ಎರಡು ಅಂಕಗಳನ್ನು ಪಡೆದುಕೊಂಡು ಒಟ್ಟು 592 ಅಂಕಗಳನ್ನು ಪಡೆದುಕೊಂಡು ರಾಜ್ಯಮಟ್ಟದಲ್ಲಿ ಎಂಟನೇ ರ್ಯಾಂಕ್ ಪಡೆದುಕೊಂಡಿದ್ದಾಳೆ. ಅದೇ ರೀತಿ ವಾಣಿಜ್ಯ ವಿಭಾಗದ ಇನ್ನೋರ್ವ ವಿದ್ಯಾರ್ಥಿ ಡ್ಯಾರೆಲ್ ವಿನೋಲ್ ಮೊರಾಸ್ ಇಂಗ್ಲೀಷ್ನಲ್ಲಿ ಐದು ಹಾಗೂ ವ್ಯವಹಾರ ಅಧ್ಯಯನದಲ್ಲಿ ಒಂದು ಅಂಕ ಪಡೆದುಕೊಂಡು ಒಟ್ಟು 591 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ರಾಜ್ಯಮಟ್ಟದಲ್ಲಿ ಒಂಬತ್ತನೇ ರ್ಯಾಂಕ್ ಪಡೆದುಕೊಂಡಿದ್ದಾನೆ. ಈ ಮೂಲಕ ಸಂಸ್ಥೆಯ ಈ ಶೈಕ್ಷಣಿಕ ಸಾಲಿನಲ್ಲಿ ಅಗ್ರ ಹತ್ತರೊಳಗೆ ಒಟ್ಟು ಆರು ರ್ಯಾಂಕ್ಗಳನ್ನು ಪಡೆದುಕೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post