ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಇವರ ಆಶ್ರಯದಲ್ಲಿ ಹೆಬ್ರಿಯ ಅಮೃತ ಭಾರತಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್‌ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.
Also read: ಬ್ರದರ್ ಗಳ ಹಿನ್ನೆಲೆ ಜಗತ್ತಿಗೇ ಗೊತ್ತಿದೆ: ಡಿ.ಕೆ.ಸುರೇಶ್ ಗೆ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು
ಎಂಟನೇ ತರಗತಿಯ ಶಗುನ್ ವರ್ಮ, ಶೈನಿ ಡಿಸೋಜ, ಅವ್ನಿ, ಕಾರ್ತಿಕಾ ಶೆಟ್ಟಿ, ಒಂಬತ್ತನೇ ತರಗತಿಯ ಕೀರ್ತನಾ ಡಿಸೋಜ, ವಿದ್ಯಾಶ್ರೀ ದೇವಾಡಿಗ, ವಿಲ್ಶಾ ಡಿಸೋಜ, ಹತ್ತನೇ ತರಗತಿಯ ಶ್ರಾವ್ಯ ಶೆಟ್ಟಿ, ವರ್ಣ ಶೆಟ್ಟಿ ತಂಡವನ್ನು ಪ್ರತಿನಿಧಿಸಿದ್ದರು. ಶಗುನ್ ವರ್ಮ ಅತ್ಯುತ್ತಮ ಅಟೇಕರ್ ಪ್ರಶಸ್ತಿ ಪಡೆದರೆ ಶೈನಿ ಡಿಸೋಜ ಅತ್ಯುತ್ತಮ ಪಾಸರ್ ಪ್ರಶಸ್ತಿ ಪಡೆದುಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















