ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಎಸ್’ಎಸ್’ಎಲ್’ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 11 ವಿದ್ಯಾರ್ಥಿನಿಯರನ್ನು ನ್ಯೂಟೌನ್ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಿಂದ ಅಭಿನಂದಿಸಲಾಯಿತು.
ಈ ವೇಳೆ ಮಾತನಾಡಿದ ಉಪಪ್ರಾಚಾರ್ಯೆ ಟಿ.ಎಸ್. ಸುಮನಾ, ವಿದ್ಯಾ ವಿನಯಂ ದದಾತಿ ಎನ್ನುವಂತೆ ವಿನಯವಂತ, ಸುಶಿಕ್ಷಿಕ ಮತ್ತು ಸುಸಂಸ್ಕೃತ ವಿದ್ಯಾರ್ಥಿಗಳು ಮಾತ್ರವೇ ಆರೋಗ್ಯಕರ ನಾಗರಿಕ ಸಮಾಜ ಮತ್ತು ದೇಶವನ್ನು ನಿರ್ಮಿಸಬಲ್ಲರು. ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸವನ್ನು ಮೊಟಕುಗೊಳಿಸದೇ, ಉನ್ನತ ಸ್ಥಾನಕ್ಕೇರಿ ಈ ಶಾಲೆಗೆ ಕಳಸಪ್ರಾಯರಾಗಬೇಕು. ಜೊತೆಗೆ ಈ ಶಾಲೆಯ ಕಿರಿಯ ವಿದ್ಯಾರ್ಥಿನಿಯರಿಗೆ ಪ್ರೇರಣೆಯಾಗಬೇಕು ಎಂದು ಕರೆ ನೀಡಿದರು.
ಕೊರೋನಾ ಜೀವಭಯದ ನಡುವೆಯೂ ಈ ಬಾರಿಯ ಎಸ್’ಎಸ್’ಎ;ಲ್’ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪಿ. ಸ್ಪರ್ಶ ಎಚ್.ಎಸ್. ಪ್ರೀತಿ, ಸಿ. ವಾತ್ಸಲ್ಯ ಜೋಗಿ, ಕೆ. ಪ್ರೇರಣಾ, ಟಿ.ಎಸ್. ಸುಮನಾ ಅವರನ್ನು ಅಭಿನಂದಿಸಲಾಯಿತು. ಅತಿ ಹೆಚ್ಚು ಅಂಕ ಗಳಿಸಿದ ಸವಿ ನೆನಪಿಗಾಗಿ ಪ್ರತಿ ವಿದ್ಯಾರ್ಥಿನಿಯರಿಂದಲೂ ಶಾಲೆಯಲ್ಲಿ ಗಿಡ ನೆಡಿಸಿ, ಸಾಧಕ ವಿದ್ಯಾರ್ಥಿನಿಯರ ಹೆಸರುಗಳನ್ನೇ ಸಸಿಗಳಿಗೆ ನಾಮಕರಣ ಮಾಡಲಾಯಿತು.
ಉತ್ತಮ ಫಲಿತಾಂಶಕ್ಕೆ ಕಾರಣರಾದ ಶಿಕ್ಷಕರಾದ ಎಂ.ಬಿ. ಮಂಜುನಾಥ್, ಮೆಹಬೂಬ್ ಅಲಿ ಖಾನ್, ಸತ್ಯನಾರಾಯಣ ಭಟ್, ಟಿ.ಎಲ್. ಸುಬ್ರಾಯ, ಗಾಯತ್ರಿ ಹೆಗ್ಗೆಡೆ ಅವರುಗಳನ್ನು ಅಭಿನಂದಿಸಲಾಯಿತು.
Get In Touch With Us info@kalpa.news Whatsapp: 9481252093
Discussion about this post