ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಕೊರೋನಾ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಮೇ 24ರವರೆಗೂ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಘೋಷಣೆ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.
- ಮೇ 10ರಿಂದ ಮೇ 24ರವರೆಗೂ ಸಂಪೂರ್ಣ ಲಾಕ್ ಡೌನ್
- ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ
- ನಿಗದಿತ ಅವಧಿಯನ್ನು ಹೊರತುಪಡಿಸಿ ಬೇರೆ ಸಮಯದಲ್ಲಿ ಸಾರ್ವಜನಿಕರು ಹೊರಗಡೆ ಓಡಾಡುವಂತಿಲ್ಲ
- 10 ಗಂಟೆ ನಂತರ ಯಾವುದೇ ರೀತಿಯ ವ್ಯವಹಾರಗಳಿಗೆ ಅವಕಾಶವಿರುವುದಿಲ್ಲ
- ಅಂತರ್ ಜಿಲ್ಲಾ ಹಾಗೂ ಅಂತರ್ ರಾಜ್ಯ ಸಂಚಾರಕ್ಕೆ ತಡೆ
- ತುರ್ತು ಸೇವೆಗೆ ಮಾತ್ರ ಅವಕಾಶ
- ಕಟ್ಟಡ ನಿರ್ಮಾಣ ಕಾಮಗಾರಿಗೆ ಯಾವುದೇ ಅಡೆತಡೆಯಿಲ್ಲ
- ಗಾರ್ಮೆಂಟ್ಸ್’ಗಳು ಕಾರ್ಯ ನಿರ್ವಹಿಸುವಂತಿಲ್ಲ
- ಸರ್ಕಾರಿ, ಖಾಸಗಿ, ಟ್ಯಾಕ್ಸಿ, ಕ್ಯಾಬ್, ಆಟೋ, ಮೆಟ್ರೋ ಸಂಚಾರ ಇರುವುದಿಲ್ಲ
- ಆಸ್ಪತ್ರೆ, ಲ್ಯಾಬ್, ಮೆಡಿಕಲ್ ಶಾಪ್ ಸೇರಿದಂತೆ ತುರ್ತು ಸೇವೆಗಳು ಲಭ್ಯ
- ಕೆಎಸ್’ಆರ್’ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುವುದಿಲ್ಲ
- ಹೊಟೇಲ್’ಗಳಲ್ಲಿ ಪಾರ್ಸಲ್’ಗೆ ಮಾತ್ರ ಅವಕಾಶ, ಸರ್ವಿಸ್ ಇರುವುದಿಲ್ಲ ಹೋಂ ಡೆಲಿವರಿ ಸೇವೆಗಳನ್ನು ಮಾತ್ರ ಒದಗಿಸಲು ಅನುಮತಿಸಲಾಗುವುದು.
- ಹಾಲು ಮಾರಾಟ ಕೇಂದ್ರಗಳಿಗೆ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೂ ಅವಕಾಶ
- 10 ಗಂಟೆ ನಂತರ ಹೊಟೇಲ್, ಹಾಲು ಸೇರಿ ಅಗತ್ಯ ವಸ್ತು ಖರೀದಿಗೆ ಯಾವುದೇ ವಾಹನದಲ್ಲಿ ತೆರಳುವಂತಿಲ್ಲ, ನಡೆದುಕೊಂಡು ಹೋಗಲು ಅವಕಾಶ
- ಬೆಳಗ್ಗೆ 10 ಗಂಟೆಯವರೆಗೂ ಬಾರ್’ಗಳಿಂದ ಮದ್ಯ ಪಾರ್ಸಲ್ ಕೊಂಡೊಯ್ಯಲು ಅವಕಾಶ
- ಚಿತ್ರಮಂದಿರ, ಆಟದ ಮೈದಾನ, ಪಾರ್ಕ್, ಸ್ವಿಮ್ಮಿಂಗ್ ಪೂಲ್, ಯೋಗ, ಮನೋರಂಜನಾ ಕೇಂದ್ರಗಳು ಬಂದ್
- ದೇವಾಲಯ, ಮಸೀದಿ ಹಾಗೂ ಚರ್ಚ್ಗಳಿಗೆ ಸಾರ್ವಜನಿಕರ ಪ್ರವೇಶವಿಲ್ಲ. ಆದರೆ, ಅರ್ಚಕರು ದೈನಂದಿನ ಪೂಜೆ ನಡೆಸಬಹುದು
- ಬ್ಯಾಂಕ್’ಗಳು ಎಂದಿನಂತೆ ಕಾರ್ಯ ನಿರ್ವಹಿಸಬಹುದು
- ಸರಕು ಸಾಗಾಣಿಕಾ ವಾಹನಗಳು ಎಂದಿನಂತೆ ಸಂಚರಿಸಬಹುದು
- ಮದುವೆಗೆ ಅವಕಾಶ(ಗರಿಷ್ಠ 50 ಜನಗಳು ಮಾತ್ರ ಪಾಲ್ಗೊಳ್ಳಬಹುದು)
- ಎಲ್ಲ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿ, ಧಾರ್ಮಿಕ ಕಾರ್ಯಕ್ರಮಗಳು ಮೊದಲಾದ ಹೆಚ್ಚಿನ ಜನ ಸೇರುವ ಕಾರ್ಯಕ್ರಮಗಳು, ಸಮಾವೇಶಗಳನ್ನು ನಿಷೇಧಿಸಲಾಗಿದೆ
- ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಗತ್ಯ ಸೇವೆ ನೀಡುವ ಕಚೇರಿಗಳು ಮಾತ್ರ ಕಾರ್ಯ ನಿರ್ವಹಿಸಲಿವೆ
- ದೂರ ಸಂಪರ್ಕ, ಇಂಟರ್ ನೆಟ್ ಸೇವೆ, ಪ್ರಸಾರ ಮತ್ತು ಕೇಬಲ್ ಸೇವೆಗಳು ಲಭ್ಯವಾಗಲಿವೆ
- ಐಟಿ ಮತ್ತು ಐಟಿಇಎಸ್ ಕಂಪೆನಿಗಳ ಅಗತ್ಯ ಸಿಬ್ಬಂದಿ ಮಾತ್ರ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶವಿದ್ದು, ಇತರ ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸಬೇಕು
- ಸ್ಥಳದಲ್ಲಿಯೇ ಕಾರ್ಮಿಕರು/ ಸಿಬ್ಬಂದಿ ಲಭ್ಯವಿರುವ ಕೈಗಾರಿಕೆಗಳು/ ಉತ್ಪಾದನಾ ಘಟಕಗಳು ಕಾರ್ಯ ನಿರ್ವಹಿಸಬಹುದು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post