ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟಾರೆಯಾಗಿ ರಾಜ್ಯದಲ್ಲಿ ಶೇ.81.15ರಷ್ಟು ಫಲಿತಾಂಶ ದಾಖಲಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಖ್ಯಸ್ಥರು ಇಂದು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ.
11 ಗಂಟೆಯಿಂದ ಆನ್’ಲೈನ್’ನಲ್ಲಿ ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು ತಮ್ಮ ಕ್ರೆಡನ್ಷಿಯಲ್ಸ್ ಹಾಕಿ ಪಿಯು ಮಂಡಳಿಯ ಅಧಿಕೃತ ವೆಬ್’ಸೈಟ್ https://karresults.nic.in ಮೂಲಕ ದ್ವಿತೀಯ ಪಿಯು ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ.
ಈ ಬಾರಿ ರಾಜ್ಯದಾದ್ಯಂತ ಸುಮಾರು 1,124 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದಿತ್ತು. ಸುಮಾರು 6.98 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದರು.
ಕಳೆದ ಬಾರಿಯಂತೆ ಈ ಬಾರಿ ಕೂಡ ದಕ್ಷಿಣ ಕನ್ನಡ (97.37%) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ (96.80%) ಎರಡನೇ ಸ್ಥಾನ ಪಡೆದಿದೆ. ವಿಜಯಪುರ (94.89%) ತೃತೀಯ ಸ್ಥಾನ ಪಡೆದಿದೆ. ಗದಗ (72.86%) ಕೊನೆಯ ಸ್ಥಾನ ಪಡೆದಿದೆ.
ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳು ಒಟ್ಟ 35
- ಸರ್ಕಾರಿ ಕಾಲೇಜು- 02
- ಅನುದಾನಿತ ಕಾಲೇಜು – 06
- ಅನುದಾನ ರಹಿತ ಕಾಲೇಜು – 26
- ವಿಭಜಿತ ಪದವಿ ಪೂರ್ವ ಕಾಲೇಜು – 01
- ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು – 6,98,378
- ತೇರ್ಗಡೆಯಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 5,52690
- ಶೇ.85% ಹಾಗೂ ಅದಕ್ಕಿಂತ ಹೆಚ್ಚಿನ ಅಂಕ – 1,53,370
- ಶೇ.60% – 2,89733
- ದ್ವಿತೀಯ ದರ್ಜೆ- 72,098
- ತೃತೀಯ ದರ್ಜೆಯಲ್ಲಿ ಉತ್ತೀರ್ಣರಾದವರು – 37,489
ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ
- ಬೆಂಗಳೂರಿನ ಮೇಧಾ ಡಿ-596 ಅಂಕ
- ವಿಜಯಪುರದ ವೇದಾಂತ್-596 ಅಂಕ
- ಬಳ್ಳಾರಿಯ ಕವಿತಾ-596 ಅಂಕ
ವಾಣಿಜ್ಯ ವಿಭಾಗದ ಟಾಪರ್
- ಗಾನವಿ ಎಂ., ವಿದ್ಯಾನಿಧಿ ಪಿಯು ಕಾಲೇಜು, ತುಮಕೂರು (597) ಪ್ರಥಮ ಸ್ಥಾನ
- ಪವನ್ ಎಂ.ಎಸ್, ಕುಮಧ್ವತಿ ಪಿಯು ಕಾಲೇಜು, ಶಿವಮೊಗ್ಗ 596 ದ್ವಿತೀಯ ಸ್ಥಾನ
- ಹರ್ಷಿತಾ, ಪೂರ್ಣ ಪ್ರಜ್ಞಾಪಿಯು ಕಾಲೇಜು, ಉಡುಪಿ 596 ದ್ವಿತೀಯ ಸ್ಥಾನ
- ತುಳಸಿ ಪೈ, ಕೆನರಾ ಕಾಲೇಜು, ಮಂಗಳೂರು, 596 ದ್ವಿತೀಯ ಸ್ಥಾನ
- ತೇಜಸ್ವಿನಿ ಕೆ. ಕಾಲೆ, ಎಂಇಎಸ್, ಮಲ್ಲೇಶ್ವರ, 596 ದ್ವಿತೀಯ ಸ್ಥಾನ
ವಿಜ್ಞಾನ ವಿಭಾಗದ ಟಾಪರ್
- ವಿದ್ಯಾಲಕ್ಷ್ಮೀ- ವಿದ್ಯಾನಿಕೇತನ ಎಸ್.ಸಿ ಪಿಯು ಕಾಲೇಜು -598 ಪ್ರಥಮ ಸ್ಥಾನ
- ಉರ್ವಶಿ ಪ್ರಶಾಂತ್-ಆದಿಚುಂಚನಗಿರಿ ಪಿಯು ಕಾಲೇಜು ತುಮಕೂರು-597 ದ್ವಿತೀಯ ಸ್ಥಾನ
- ವೈಭವಿ ಆಚಾರ್ಯ – ವಿದ್ಯೋಧಯ ಪಿಯು ಕಾಲೇಜು, ಉಡುಪಿ -597 ದ್ವಿತೀಯ ಸ್ಥಾನ
- ಜಾಹ್ನವಿ – ಆರ್’ವಿಪಿಬಿ ಪಿಯು ಕಾಲೇಜು, ಮೈಸೂರು -597 ದ್ವಿತೀಯ ಸ್ಥಾನ
- ಗುಣಸಾಗರ್ – ಎಕ್ಸಲೆಂಟ್ ಪಿಯು ಕಾಲೇಜು, ಮೂಡುಬಿದಿರೆ – 597 ದ್ವಿತೀಯ ಸ್ಥಾನ
ಜಿಲ್ಲಾವಾರು ಫಲಿತಾಂಶ ವಿವರ
- ದಕ್ಷಿಣ ಕನ್ನಡ 97.37
- ಉಡುಪಿ 96.80
- ವಿಜಯಪುರ 94.89
- ಉತ್ತರ ಕನ್ನಡ 92.51
- ಕೊಡಗು 92.13
- ಬೆಂಗಳೂರು ದಕ್ಷಿಣ 89.57
- ಬೆಂಗಳೂರು ಉತ್ತರ 88.67
- ಶಿವಮೊಗ್ಗ 88.58
- ಚಿಕ್ಕಮಗಳೂರು 88.20
- ಬೆಂಗಳೂರು ಗ್ರಾಮಾಂತರ 87.55
- ಬಾಗಲಕೋಟೆ 87.54
- ಕೋಲಾರ 86.12
- ಹಾಸನ 85.83
- ಚಾಮರಾಜನಗರ 84.99
- ಚಿಕ್ಕೋಡಿ 84.10
- ರಾಮನಗರ 83.58
- ಮೈಸೂರು 83.13
- ಚಿಕ್ಕಬಳ್ಳಾಪುರ 82.84
- ಬೀದರ್ 81.69
- ತುಮಕೂರು 81.03
- ದಾವಣಗೆರೆ 80.96
- ಕೊಪ್ಪಳ 80.83
- ಧಾರವಾಡ 80.70
- ಮಂಡ್ಯ 80.56
- ಹಾವೇರಿ 78.3626.
- ಯಾದಗಿರಿ 77.29
- ಬೆಳಗಾವಿ 77.20
- ಕಲಬುರಗಿ 75.48
- ಬಳ್ಳಾರಿ 74.70
- ರಾಯಚೂರು 73.11
- ಚಿತ್ರದುರ್ಗ 72.92
- ಗದಗ 72.86
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post