ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದ ಗುರುಗಳಾದ ರೆ.ಫಾ. ಗಿಲ್ಬರ್ಟ್ ಲೋಬೋ ಅವರ ಆಶೀರ್ವಾದದೊಂದಿಗೆ ಲೀಜನ್ ಆಫ್ ಮೇರಿ ಘಟಕದಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕ್ರೈಸ್ತ ಸಮಾಜದ ಪ್ರತಿಭಾನ್ವಿತೆ ರಿಯಾ ಡಿಸೋಜ ಅವರನ್ನು ಅವರ ಮನೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ, ಅಭಿನಂದಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಲೀಜನ್ ಆಫ್ ಮೇರಿ ಘಟಕದ ಆಧ್ಯಾತ್ಮಿಕ ನಿರ್ದೇಶಕರಾದ ರೆ.ಫಾ. ಜೇಕಬ್ ಅವರು ಮಾತನಾಡಿ, ಬಹುತೇಕ ಪೋಷಕರು ತಮ್ಮ ಮಕ್ಕಳ ಮೇಲೆ ಅತಿಯಾದ ಪ್ರೀತಿ ತೋರಿಸುತ್ತಾ, ಮೌಲ್ಯಯುತ ಜೀವನ ನಡೆಸುವುದು ಹೇಗೆ ಎಂಬುದನ್ನೇ ಕಲಿಸುವುದನ್ನು ಮರೆತುಬಿಡುತ್ತಾರೆ. ಪೋಷಕರ ಅತಿಯಾದ ಪ್ರೀತಿ ಯಿಂದಾಗಿ ಬಹುತೇಕ ಮಕ್ಕಳು ಹಠಮಾರಿಗಳಾಗಿ, ವಿದ್ಯೆಯಲ್ಲಿ ಹಿಂದುಳಿಯುತ್ತಿದ್ದಾರೆ ಎಂದು ಎಚ್ಚರಿಸಿದರಲ್ಲದೇ, ರಿಯಾಳ ಪೋಷಕರು ಈಕೆಗೆ ನೀಡಿದ ಮೌಲ್ಯಯುತ ಸಂಸ್ಕಾರ-ಸಂಸ್ಕೃತಿ ಹಾಗೂ ಉತ್ತಮ ಮಾರ್ಗದಲ್ಲಿ ಮುನ್ನಡೆಸಿರುವುದು ಹಾಗೂ ವಿದ್ಯಾಭ್ಯಾಸದಲ್ಲಿ ಅವಳ ಶ್ರದ್ಧೆ ಮತ್ತು ಗುರಿ ಈ ಸಾಧನೆಗೆ ಮುಖ್ಯ ಕಾರಣ ಎಂದರು.
ಹೆಚ್ಚು ಕಾಫಿ ಕುಡಿದರೆ ಗ್ಯಾಸ್ಟ್ರಿಕ್ ಗ್ಯಾರೆಂಟಿ | ಜೀವನಶೈಲಿ ಹೀಗಿರಲಿ | Gastric | Tips For Healthy Life
ಆರೋಗ್ಯ ಸಲಹೆ ಕುರಿತಾಗಿ ನಿರಂತರ ಮಾಹಿತಿ ಪಡೆಯಲು ಕಲ್ಪ ಯೂಟ್ಯೂಬ್ ಚಾನಲ್’ಗೆ Free subscribe ಆಗಿ, ಲೈಕ್ ಮಾಡಿ ಹಾಗೂ ಶೇರ್ ಮಾಡಿ
ಮಕ್ಕಳು ಕೇವಲ ಅಂಕ ಗಳಿಕೆಯನ್ನಷ್ಟೇ ಗುರಿಯನ್ನಾಗಿಸದೇ ಮೌಲ್ಯಾಧಾರಿತ ಜೀವನ ನಡೆಸುವುದನ್ನು ಕಲಿಯಬೇಕು. ಈ ಮೂಲಕ ಇತರರಿಗೆ ಮಾದರಿಯಾಗಬೇಕೆಂದು ಸಲಹೆ ನೀಡಿದರು.
ಸಂಘಟನೆಯ ಪ್ರಮುಖರಾದ ಜಾನ್ ಬ್ಯಾಪ್ಟಿಸ್ಟ್ ಅವರು ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ತೋರುವ ಮೂಲಕ ರಿಯಾ ಇಡೀ ಕ್ರೈಸ್ತ ಸಮಾಜಕ್ಕೆ ಕೀರ್ತಿ ತಂದಿರುವುದಲ್ಲದೇ, ನಮ್ಮ ಸಮಾಜದ ಎಲ್ಲಾ ಮಕ್ಕಳಿಗೆ ಮಾದರಿಯಾಗಿದ್ದಾಳೆ ಎಂದರಲ್ಲರೇ, ಜೀವನದುದ್ದಕ್ಕೂ ಇನ್ನೂ ಹೆಚ್ಚಿನ ಸಾಧನೆ ಮಾಡಲೆಂದು ಹಾರೈಸಿದರು.
ಪ್ರಮುಖರಾದ ಆಲ್ಬಿನ್ ಕ್ವಾಡ್ರಸ್, ಇರುದಯರಾಜ್, ಆರೋಕ್ಯನಾಥನ್, ವಿಲಿಯಂ, ಸಂದೀಪ್, ಕ್ರಿಸ್ಟೀನಾ, ಇರುದಯಮೇರಿ, ಬೇಬಿ, ಕ್ಲೊಟಿಲ್ಡಾ ರೇಗೋ, ಸ್ಟೀವನ್ ಗೋನ್ಸಾಲ್ವಿಸ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post