ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ದಂತ ವೈದ್ಯರ ಮೇಲೆ ಸುಳ್ಳು ಆರೋಪ ನೀಡಿದ ಪ್ರಕರಣದಲ್ಲಿ ಡಾ. ಬಿ.ಪರಮೇಶ್ವರಪ್ಪ ಎಂಬ ದಂತವೈದ್ಯರಿಗೆ ದೂರುದಾರರೇ ರೂ. 5 ಸಾವಿರಗಳನ್ನು ದಂಡದ ರೂಪದಲ್ಲಿ ಪಾವತಿಸಲು ಆದೇಶಿಸಿದೆ.
ಏನಿದು ಪ್ರಕರಣ?
ಎರಡು ವರ್ಷಗಳ ಹಿಂದೆ ಮಲ್ಲಿಕಾರ್ಜುನ ಪಾಟೀಲ್ ಎಂಬ ವ್ಯಕ್ತಿಯು ದಂತವೈದ್ಯ ಬಿ.ಪರಮೇಶ್ವರಪ್ಪ ಎಂಬುವವರ ಬಳಿ ದವಡೆ ಹಲ್ಲು ಹುಳುಕು ಹಿಡಿದು ತುಂಬಾ ನೋವೆಂದು ಚಿಕಿತ್ಸೆಗಾಗಿ ಬಂದಿರುತ್ತಾರೆ. ಅವರನ್ನು ಪರಿಶೀಲಿಸಲಾಗಿ ನೋವಿರುವ ಹಲ್ಲಿನ ಪಕ್ಕದ ಇನ್ನೊಂದು ಹಲ್ಲು ಸಹ ತುಂಬಾ ಹುಳುಕಾಗಿದ್ದು, ಹಲ್ಲು ಕೀಳಲು ತೊಂದರೆಯಾಗುತ್ತಿರುತ್ತದೆ. ಎರಡು ಹಲ್ಲನ್ನು ಕೀಳುವಾಗಿ ರಕ್ತಸ್ರಾವವಾಗಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಹೋಗಲು ಹೇಳಿದರೂ ಆತ ಬೇರೆ ಕಡೆ ಚಿಕಿತ್ಸೆ ಪಡೆದು, ಮೂರು ದಿನ ಅಡ್ಮಿಟ್ ಆಗಿರುವುದಾಗಿ ಸುಳ್ಳು ದಾಖಲೆ ಸೃಷ್ಠಿಸಿ ಹಲ್ಲು ಕಿತ್ತಿದ್ದರಿಂದ ಈಗ ತಲೆನೋವು ಬರುತ್ತಿದೆ ಎಂದು ದಂತವೈದ್ಯರ ಮೇಲೆ ಆಪಾದನೆ ಮಾಡಿದ್ದಾರೆ.
ಈ ಪ್ರಕರಣವನ್ನು ಸಂಪೂರ್ಣ ಪರೀಶೀಲಿದ ಗ್ರಾಹಕರ ವೇದಿಕೆಯ ಅಧ್ಯಕ್ಷೆ ಸಿ.ಎಂ. ಚಂಚಲ ಹಾಗೂ ಸದಸ್ಯರಾದ ಸವಿತ ಬಿ. ಪಟ್ಟಣಶೆಟ್ಟಿ ಮತ್ತು ಪಿ.ವಿ. ಲಿಂಗರಾಜು ಇವರುಗಳು ದಾಖಲೆ ಹಾಗೂ ಪೋಟೋಗಳನ್ನು ಗಮನಿಸಿದಾಗ ಎರಡೂ ಹಲ್ಲುಗಳು ಹುಳುಕಾಗಿದ್ದು, ಒಂದು ಹಲ್ಲಿನ ಬೇರು ಇನ್ನೊಂದು ಹಲ್ಲಿನ ಬೇರಿನೊಂದಿಗೆ ಚಾಚಿಕೊಂಡಿರುತ್ತದೆ. ಹುಳುಕು ಹಲ್ಲನ್ನು ತೆಗೆಯುವಾಗ ಪಕ್ಕದ ಹಳುಕುಹಲ್ಲೂ ಕಿತ್ತು ಬರುವುದು ಸಾಮಾನ್ಯವೆಂದು ಪರಿಗಣಿಸಿ ಮತ್ತು ಇಂತಹ ಸಂದರ್ಭದಲ್ಲಿ ಎದುರುದಾರ ಡಾಕ್ಟರ್ ಹೆಚ್ಚಿನ ಚಿಕತ್ಸೆಗಾಗಿ ತಕ್ಷಣ ಬೇರೆ ಆಸ್ಪತೆಗೆ ರೋಗಿಯನ್ನು ಕಳುಹಿಸುವುದು ವೈದ್ಯಕೀಯ ನಿರ್ಲಕ್ಷ್ಯ ಅಲ್ಲವೆಂದೂ ತೀರ್ಮಾನಿಸಿರುತ್ತಾರೆ. ಘಟನೆ ನಡೆದು ಎರಡು ವರ್ಷಗಳ ನಂತರ ದೂರ ದಾಖಲಿಸಿದ್ದು, ಸರಿಯಾದ ಸಾಕ್ಷ್ಯಾಧಾರಗಳೂ ಇಲ್ಲದ್ದರಿಂದ ಮಲ್ಲಿಕಾರ್ಜುನ ಪಾಟೀಲ್ ಎಂಬ ವ್ಯಕ್ತಿಯು ವೈದ್ಯರಿಂದ ಹಣ ಕೀಳಲು ಗ್ರಾಹಕರ ಆಯೋಗವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ಮನಗಂಡು ಈ ವ್ಯಕ್ತಿಯು ವೈದ್ಯರಿಂದ 5000 ರೂ.ಗಳನ್ನು ದಂಡ ರೂಪದಲ್ಲಿ ಪಾವತಿಸಬೇಕೆಂದು ಆದೇಶ ನೀಡಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post