ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ಪಾಸಿಟಿವ್ ಬಂದ ಶಿಕ್ಷಕರ ಪ್ರಾಥಮಿಕ ಸಂಪರ್ಕದಲ್ಲಿರುವ ಶಿಕ್ಷಕರು ಕ್ವಾರಂಟೈನ್’ನಲ್ಲಿರಲು ರಜೆ ನೀಡುವಂತೆ ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚಿಸಿದ್ದಾರೆ.
ಈ ಕುರಿತಂತೆ ಆದೇಶ ಹೊರಡಿಸಿರುವ ಅವರು, ತಾಲೂಕು ವ್ಯಾಪ್ತಿಯಲ್ಲಿ ಕೆಲವು ಶಿಕ್ಷಕರಿಗೆ ಪಾಸಿಟಿವ್ ಪತ್ತೆಯಾಗಿರುವುದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪಾಸಿಟಿವ್ ಶಿಕ್ಷಕರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ಶಿಕ್ಷಕರಿಗೆ ಕ್ವಾರಂಟೈನಲ್ಲಿರಲು ವಿಶೇಷ ಸಾಂದರ್ಭಿಕ ರಜೆ ನೀಡಲು ಸರ್ಕಾರ ಆದೇಶಿಸಿರುತ್ತದೆ. ಇದಕ್ಕೆ ಸದರಿ ಶಿಕ್ಷಕರು ಸಂಬಂಧಿಸಿದ ವೈದ್ಯರಿಂದ/ಇನ್ಸಿಡೆಂಟ್ ಕಮ್ಯಾಂಡರ್/ಪಂಚಾಯತ್ ಪಿಡಿಒ/ನಗರಪಾಲಿಕೆ ಅಧಿಕಾರಿಗಳಿಂದ ದೃಢೀಕರಣ ಪತ್ರ ಸಲ್ಲಿಸುವುದೂ ಸಹ ಅವಶ್ಯವಾಗಿರುತ್ತದೆ. ದೃಢೀಕರಣ ಪತ್ರ ಸಲ್ಲಿಸದೇ ಇರುವ ಶಿಕ್ಷಕರಿಗೆ ಅವರ ಹಕ್ಕಿನಲ್ಲಿರುವ ರಜೆ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
Get In Touch With Us info@kalpa.news Whatsapp: 9481252093
Discussion about this post