ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿರುವ ಜಿಲ್ಲಾ ಕಾಂಗ್ರೆಸ್ ಮುಖಂಡ ದೀಪಕ್ ಸಿಂಗ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನಗರ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.
ಈ ಕುರಿತಂತೆ ದೀಪಕ್ ಸಿಂಗ್ ವಿರುದ್ಧ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಲಾಗಿದೆ.
ಹೆಚ್ಚು ಕಾಫಿ ಕುಡಿದರೆ ಗ್ಯಾಸ್ಟ್ರಿಕ್ ಗ್ಯಾರೆಂಟಿ | ಜೀವನಶೈಲಿ ಹೀಗಿರಲಿ | Gastric | Tips For Healthy Life ಆರೋಗ್ಯ ಸಲಹೆ ಕುರಿತಾಗಿ ನಿರಂತರ ಮಾಹಿತಿ ಪಡೆಯಲು ಕಲ್ಪ ಯೂಟ್ಯೂಬ್ ಚಾನಲ್’ಗೆ Free subscribe ಆಗಿ, ಲೈಕ್ ಮಾಡಿ ಹಾಗೂ ಶೇರ್ ಮಾಡಿ
ಕೋವಿಡ್19ರ ವಿರುದ್ದ ಅವಿರತವಾಗಿ ಹೋರಾಡುತ್ತಿರುವ ದೇಶದ ಹೆಮ್ಮೆಯ ನಾಯಕ ಪ್ರಧಾನಿಯವರ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಜಿಲ್ಲಾ ವಕ್ತಾರ, ಮಾಜಿ ಕಾರ್ಪೊರೇಟರ್ ದೀಪಕ್ ಸಿಂಗ್ ಎನ್ನುವವರು ತಮ್ಮ ಫೇಸ್’ಬುಕ್ ಖಾತೆಯಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿ, ನಿಂದಿಸಿದ್ದಾರೆ. ಪ್ರಧಾನಿವರಿಗೆ ಅವಮಾನ ಮಾಡುವ ಒಂದೇ ಉದ್ದೇಶದಿಂದ ಈ ಪೋಸ್ಟ್ ಹಾಕಿದ್ದು, ಇಂತಹ ಪೋಸ್ಟ್’ನಿಂದ ಸಮಾಜದಲ್ಲಿ ಸಾರ್ವಜನಿಕರ ಶಾಂತಿ ಹಾಗೂ ನೆಮ್ಮದಿ ಕದಡುವ ಸಂಭವವಿರುತ್ತದೆ. ಹೀಗಾಗಿ, ದೀಪಕ್ ಸಿಂಗ್ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಗರ ಬಿಜೆಪಿ ಅಧ್ಯಕ್ಷ ಎನ್.ಕೆ. ನಾಗರಾಜ್, ಪ್ರಮುಖರಾದ ಬಳ್ಳೆಕೆರೆ ಸಂತೋಷ್, ಜಿಲ್ಲಾ ಯುವ ಮೋರ್ಚಾ ಪ್ರಭಾರಿ ಹೃಷಿಕೇಶ್ ಪೈ, ನಗರಾಧ್ಯಕ್ಷ ದರ್ಶನ್ ಆರ್.ವಿ. ಜಿಲ್ಲಾ ಉಪಾಧ್ಯಕ್ಷ ಸುಹಾಸ್ ಶಾಸ್ತ್ರಿ, ನಗರ ಪ್ರಧಾನ ಕಾರ್ಯದರ್ಶಿ ಟಿ.ಆರ್. ಜಗನ್ನಾಥ್, ದಿನೇಶ್ ಆಚಾರ್, ರಾಹುಲ್ ಬಿದರೆ, ಅರುಣ್ ಶೆಟ್ಟಿ ಸೇರಿದಂತೆ ಹಲವರು ಇದ್ದರು.
Get In Touch With Us info@kalpa.news Whatsapp: 9481252093
Discussion about this post