ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಸಾಹಸಸಿಂಹ ದಿವಂಗತ ಡಾ.ವಿಷ್ಣುವರ್ಧನ್ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ವಿಷ್ಣು ಸೇವಾ ಸಮಿತಿ ವತಿಯಿಂದ ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು, ಈ ಬಾರಿ ವಿಷ್ಣುವರ್ಧನ್ ಅವರ 70ನೆಯ ಜಯಂತಿ ಇದಾಗಿದ್ದು, ಕೊರೋನಾ ಆತಂಕವಿರುವ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ಬಾರಿ ಸರಳವಾದರೂ ಅರ್ಥಪೂರ್ಣವಾಗಿ ಆಚರಿಸಲು ಇದಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಏನೆಲ್ಲಾ ಕಾರ್ಯಕ್ರಮ ನಡೆಯಲಿದೆ?
- ಈ ಬಾರಿ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಆಚರಣೆ ಆಗಸ್ಟ್ 1ರಿಂದ ಸೆಪ್ಟೆಂಬರ್ 18 ರ ತನಕ ಬರೋಬ್ಬರಿ ಒಂದು ತಿಂಗಳ ಕಾಲ ನಡೆಯಲಿದೆ.
- ಖೈದಿಗಳಿಗೆ ಮರುಜನ್ಮ
ರಾಜ್ಯದಲ್ಲಿ ಸಾವಿರಾರು ಖೈದಿಗಳಿದ್ದಾರೆ. ಅದರಲ್ಲಿ ನೂರಾರು ಜನ ಖೈದಿಗಳ ಶಿಕ್ಷೆಯ ಅವಧಿ ಮುಗಿದಿದೆ. ಆದರೆ ಅವರಿಂದ ದಂಡ ಪಾವತಿಸಲಾಗದ ಕಾರಣಕ್ಕೆ ಶಿಕ್ಷೆಯ ಅವಧಿ ಮುಗಿದರೂ ಇನ್ನೂ ಜೈಲುಗಳಲ್ಲೇ ಇದ್ದಾರೆ. ಅಂತಹ 10 ಖೈದಿಗಳನ್ನು ಗುರುತಿಸಿ ಅವರು ಪಾವತಿಸಬೇಕಾದ ದಂಡವನ್ನು ಸಮಿತಿಯೇ ಭರಿಸಿ, ಡಾ.ವಿಷ್ಣುವರ್ಧನ್ ಅವರ ಜನ್ಮದಿನದಂದು ಖೈದಿಗಳಿಗೆ ಮರುಜನ್ಮ ನೀಡುತ್ತಿದ್ದೇವೆ. - 70000 ಸಸಿ ನೆಟ್ಟು ಪೋಷಿಸುವುದು
ಆಗಸ್ಟ್ 17 ರಿಂದ ಸೆಪ್ಟೆಂಬರ್ 18 ರ ತನಕ ರಾಜ್ಯದಾದ್ಯಂತ ಎಪ್ಪತ್ತು ಸಾವಿರ ಸಸಿ ನೆಡುವ ಗುರಿ ಹೊಂದಿದ್ದೇವೆ. ಪ್ರತಿಯೊಬ್ಬ ಅಭಿಮಾನಿ ತಾನಿರುವ ಜಾಗದಲ್ಲೇ, ತನ್ನ ಸ್ನೇಹಿತರು, ಕುಟುಂಬದವರ ಜೊತೆಗೂಡಿ ಕನಿಷ್ಠ 25 ಗಿಡಗಳನ್ನು ನೆಡುತ್ತಾರೆ. ಈ ರೀತಿ ಗಿಡ ನೆಡಲು ಈಗಾಗಲೇ 2000 ಅಭಿಮಾನಿಗಳು ನೋಂದಾಯಿಸಿಕೊಂಡಿದ್ದಾರೆ. ಗಿಡ ನೆಡುವ ಪ್ರತಿಯೊಬ್ಬರೂ ತಮ್ಮ ಹೆಸರು, ವಿಳಾಸದ ಜೊತೆಗೆ ತಾವು ನೆಟ್ಟ ಗಿಡಗಳ ಫೋಟೋ ಕಳಿಸುವುದನ್ನು ಕಡ್ಡಾಯಗೊಳಿಸಿದ್ದೇವೆ. ಗಿಡ ನೆಡಲು ಪ್ರೋತ್ಸಾಹಿಸುವುದು, ನೆಟ್ಟ ಗಿಡಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸುವುದು, ಆರೈಕೆ ಮಾಡುತ್ತಿದ್ದಾರ ಇಲ್ಲವಾ ಎಂಬುದನ್ನು ಕಾಲ ಕಾಲಕ್ಕೆ ವಿಚಾರಿಸುವುದಕ್ಕಾಗಿ ಡಾ.ವಿಷ್ಣು ಸೇನಾ ಸಮಿತಿಯು ತಂಡವೊಂದನ್ನು ರಚಿಸಿದೆ.
Sri Huccharaya Swamy Temple, Shikaripura | ಶ್ರೀ ಹುಚ್ಚರಾಯ ಸ್ವಾಮಿ ದೇವಾಲಯ, ಶಿಕಾರಿಪುರ
ದೇವಾಲಯ ಪರಿಚಯ ಕುರಿತಾಗಿ ನಿರಂತರ ಮಾಹಿತಿ ಪಡೆಯಲು ಕಲ್ಪ ಯೂಟ್ಯೂಬ್ ಚಾನಲ್’ಗೆ Free subscribe ಆಗಿ, ಲೈಕ್ ಮಾಡಿ ಹಾಗೂ ಶೇರ್ ಮಾಡಿ
- ಶಾಲಾ ಮಕ್ಕಳಿಗಾಗಿ ಸ್ಪರ್ಧೆ
1 ರಿಂದ 10 ನೇ ತರಗತಿ ಮಕ್ಕಳಿಗಾಗಿ ಡಾ.ವಿಷ್ಣುವರ್ಧನ್ ಅವರ ವೇಷಭೂಷಣ, ಅಭಿನಯ, ಗಾಯನ ಸ್ಪರ್ಧೆಯನ್ನು ಆಯೋಜಿಸಿದ್ದೇವೆ. ಇಲ್ಲಿ ವಿಜೇತರಾದ ಮಕ್ಕಳಿಗೆ ಮೊದಲನೇ ಬಹುಮಾನ ರೂ.20000/- ಎರಡನೇ ಬಹುಮಾನ ರೂ. 15000 ಮತ್ತು ಮೂರನೇ ಬಹುಮಾನ ರೂ. 10000 ಗಳನ್ನು ಘೋಷಿಸಲಾಗಿದೆ. ಮಕ್ಕಳು ತಮ್ಮ ವಿಡಿಯೋಗಳನ್ನು 99722 19267 ಗೆ ಕಳುಹಿಸಬಹುದು. ಕೊನೇ ದಿನಾಂಕ: ಸೆಪ್ಟೆಂಬರ್ 10. - ರಾಜ್ಯದಲ್ಲಿನ ರಕ್ತದ ಕೊರತೆ ನೀಗಿಸಲು 700 ಯುನಿಟ್ ರಕ್ತದಾನ
ಪ್ರಸ್ತುತ ರಾಜ್ಯದಲ್ಲಿ ರಕ್ತದ ಕೊರತೆ ಬಹಳ ದೊಡ್ಟಮಟ್ಟದಲ್ಲಿದೆ. ಆದ್ದರಿಂದ ರಾಜ್ಯದಾದ್ಯಂತ ಇರುವ ಡಾ.ವಿಷ್ಣು ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಕನಿಷ್ಠ 700 ರಿಂದ ಗರಿಷ್ಠ 7000 ಯುನಿಟ್ ತನಕ ರಕ್ತದಾನ ಮಾಡುವ ನಿರ್ಧಾರವನ್ನು ತಾಳಿದ್ದೇವೆ. ಹೀಗೆ ರಕ್ತದಾನ ಮಾಡಲು ಈಗಾಗಲೇ ಸುಮಾರು 300 ಜನ ನೋಂದಾಯಿಸಿಕೊಂಡಿದ್ದಾರೆ. - ಪದ್ಮಭೂಷಣ ಪ್ರಶಸ್ತಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು
ಈಗಾಗಲೇ ಕೇಂದ್ರ ಸರ್ಕಾರವು ಪದ್ಮಭೂಷಣ ಪ್ರಶಸ್ತಿಗೆ ಅರ್ಹವ್ಯಕ್ತಿಗಳನ್ನು ನಾಮಿನೇಟ್ ಮಾಡಲು ಕರೆ ನೀಡಿದೆ. ಅದರಂತೆ ಡಾ.ವಿಷ್ಣು ಸೇನಾನಿಗಳು ಈ ಬಾರಿ ಡಾ.ವಿಷ್ಣುವರ್ಧನ್ ಅವರ ಹೆಸರನ್ನು ನಾಮಿನೇಟ್ ಮಾಡುವುದರ ಜೊತೆಗೆ ಸೆಲೆಬ್ರೆಟಿ/ಗಣ್ಯರಿಂದಲೂ ಮಾಡಿಸುತ್ತಿದ್ದಾರೆ. ಈ ಅಭಿಯಾನ ಸಹ ದಿನಾಂಕ 19.08.2020ರಿಂದ ಕಾರ್ಯರೂಪಕ್ಕೆ ಬರಲಿದೆ. - ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್
ಇವತ್ತಿನಿಂದ ಡಾ.ವಿಷ್ಣುವರ್ಧನ್ ಅವರಿಗೆ ಸಂಬಂಧಿಸಿದ ಯಾವುದೇ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಮಾಡಿದರೂ 70thBDayOfLegendDrVishnuvardhan ಎನ್ನುವ ಹ್ಯಾಷ್ ಟ್ಯಾಗ್ ಜೊತೆಗೆ ಪೋಸ್ಟ್ ಮಾಡಲಾಗುತ್ತಿದೆ. ಜೊತೆಗೆ ಸೆಪ್ಟೆಂಬರ್ 18 ರಂದು ಸುಮಾರು 5 ಲಕ್ಷ ಹುಟ್ಟುಹಬ್ಬದ ಟ್ವೀಟ್ಸ್ ಮಾಡಿಸುವ ಗುರಿಯನ್ನು ಡಾ.ವಿಷ್ಣು ಸೇನಾ ಸಮಿತಿ ಹಮ್ಮಿಕೊಂಡಿದೆ.
Get In Touch With Us info@kalpa.news Whatsapp: 9481252093
Discussion about this post