No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Monday, October 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಯುವ ಯಕ್ಷ ಪ್ರತಿಭೆ ವಿದ್ಯಾ ಕುಂಟಿಕ್ಕಾನ ಮಠ ಸಾಧನೆಗೆ ಕರುನಾಡು ಫಿದಾ

kalpa News by kalpa News
May 3, 2019
in Special Articles
0
ಯುವ ಯಕ್ಷ ಪ್ರತಿಭೆ ವಿದ್ಯಾ ಕುಂಟಿಕ್ಕಾನ ಮಠ ಸಾಧನೆಗೆ ಕರುನಾಡು ಫಿದಾ
Share on FacebookShare on TwitterShare on WhatsApp

ಯಕ್ಷರಂಗದಲ್ಲಿ ಅರಳುತ್ತಿರುವ ಪ್ರತಿಭೆ ವಿದ್ಯಾ ಕುಂಟಿಕ್ಕಾನ ಮಠ. 300ಕ್ಕೂ ಹೆಚ್ಚು ವೇದಿಕೆಯಲ್ಲಿ ಜನ ಮೆಚ್ಚುವಂತಹ ಯಕ್ಷಗಾನ ಪ್ರದರ್ಶನವನ್ನು ನೀಡಿ, ನೂರಾರು ಬಹುಮಾನಗಳನ್ನೂ ಗಳಿಸಿಕೊಂಡಿರುವ ಪ್ರತಿಭೆ. ಈಕೆ ಕಲಿಕೆಯಲ್ಲೂ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಕಾಸರಗೋಡಿನ ಪೆರಡಾಲ ಗ್ರಾಮದ ಕುಂಟಿಕ್ಕಾನದಲ್ಲಿ ವಾಸವಾಗಿರುವ ಶಂಕರನಾರಾಯಣ ಭಟ್ ಹಾಗೂ ವಿಜಯಲಕ್ಷ್ಮೀ ದಂಪತಿಗಳ ಮುದ್ದಿನ ಮಗಳಾಗಿರುವ ಈಕೆ ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಭೂಗರ್ಭಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತನ್ನ ಪ್ರಾಥಮಿಕ ಶಿಕ್ಷಣವನ್ನು ಕುಂಟಿಕ್ಕಾನ, ನೀರ್ಚಾಲ್ ಹಾಗೂ ಎಡನೀರು ಎಂಬಲ್ಲಿ ಪಡೆದರು.

ಶಂಕರನಾರಾಯಣ ಭಟ್ ಹಾಗೂ ವಿಜಯಲಕ್ಷ್ಮೀ ದಂಪತಿ

ಯಕ್ಷಗಾನದ ಮುಮ್ಮೇಳ ಹಾಗೂ ಹಿಮ್ಮೇಳ ಶಿಕ್ಷಣವನ್ನು ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕ ಎಂಬ ಸಂಸ್ಥೆಯಲ್ಲಿ ಗುರುಗಳಾದ ಬಾಯಾರು ಸೂರ್ಯನಾರಾಯಣ ಪದಕಣ್ಣಾಯರಿಂದ ಕಲಿಯುತ್ತಿದ್ದಾರೆ. ಕಾಲೇಜಿನ ಕಲೋತ್ಸವದ ಯಕ್ಷಗಾನ ಸ್ಪರ್ಧೆಗಳ ಸಂದರ್ಭದಲ್ಲಿ ದಿವಾಣ ಶಿವಶಂಕರ ಭಟ್ಟರ ಮಾರ್ಗದರ್ಶನನ್ನೂ ಪಡೆದಿದ್ದಾರೆ.


9ನೇ ತರಗತಿಯಲ್ಲಿ ಇದ್ದಾಗ ಯಕ್ಷಗಾನ ರಂಗ ಪ್ರವೇಶ ಮಾಡಿದ ವಿದ್ಯಾ, ಈಗಾಗಲೇ ಮಂಗಳೂರು, ಬೆಂಗಳೂರು, ಕೊಯಂಬತ್ತೂರು ಹಾಗೂ ಉತ್ತರ ಕೇರಳದ ಹಲವಾರು ಕಡೆಗಳನ್ನೂ ಸೇರಿ 300ಕ್ಕೂ ಹೆಚ್ಚು ವೇದಿಕೆಯಲ್ಲಿ ಕಲಾಪ್ರದರ್ಶನ ನೀಡಿದ್ದಾಳೆ. ಅವುಗಳಲ್ಲಿ ಹಲವಾರು ಪ್ರಸಂಗ- ಕಥನಕಗಳಿಂದ ಆರಿಸಿದ ಪಾತ್ರಗಳನ್ನು ಅಭಿನಯಿಸುವುದರ ಮೂಲಕ ಪ್ರದರ್ಶಿಸಿದ ಏಕ ವ್ಯಕ್ತಿ ದ್ವಿವ್ಯಕ್ತಿ ಕಾರ್ಯಕ್ರಮಗಳು ಪ್ರೇಕ್ಷಕರ ಮನಗೆದ್ದಿದೆ. ಜೊತೆಗೆ 2019 ಎಪ್ರಿಲ್ 23 ರಂದು ದುರ್ಗಾಪೂಜೆಯ ದಿನದಂದು ಕುಂಟಿಕ್ಕಾನ ಶಂಕರ ನಾರಾಯಣ ದೇವರ ಸನ್ನಿಧಿಯಲ್ಲಿ ಮೊದಲ ಬಾರಿ ಭಾಗವತಿಕೆಯನ್ನು ಮಾಡುವುದರ ಮೂಲಕ ಯಕ್ಷಗಾನದ ಭಾಗವತಿಕೆ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ.

ಭೂಗರ್ಭಶಾಸ್ತ್ರ ಪದವಿಯಲ್ಲಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ 2ನೆಯ ರಾಂಕ್’ನ್ನು ಪಡೆದಂತಹ ಇವರು ಹವ್ಯಕ ವಿದ್ಯಾರತ್ನ ಪ್ರಶಸ್ತಿ, ಹನುಮಾನ್ ಫ್ರೆಂಡ್ಸ್‌ ಕ್ಲಬ್ ವಾಂತಿಚಾಲು ಇವರ ವತಿಯಿಂದ ಯಕ್ಷ ಯುವಪ್ರತಿಭೆ, ವರುಣ ಕಲಾ ಸಂಸ್ಥೆ ಸವಣೂರು ಇವರ ವತಿಯಿಂದ ಯುವಸಾಧಕಿ ಪ್ರಶಸ್ತಿ, ಪಡೆದು ಸಾಧನೆಯನ್ನು ಮಾಡಿದ್ದಾರೆ.
ವಿದ್ಯಾರವರು ಯಕ್ಷಗಾನದಲ್ಲಿ ಪ್ರಮುಖವಾಗಿ ಕೃಷ್ಣ, ಸತ್ಯಭಾಮ, ಜಾಂಬವಂತ, ಸುದರ್ಶನ, ಸುಧನ್ವ, ದೇವೆಂದ್ರ, ವಿಷ್ಣು, ಮಾಲಿನಿ, ಶಿವ, ಲಕ್ಷ್ಮಣ, ಹು ಹು ಗಂಧರ್ವ, ಹನೂಮಂತ, ರಾಮ, ಮಾಯಾ ಶೂರ್ಪನಖಿ, ಮಾಯಾ ಪೂತನಿ ಎಂಬೀ ಪಾತ್ರಗಳಿಗೆ ತಮ್ಮದೇ ಆದ ಶೈಲಿಯಲ್ಲಿ ಜೀವವನ್ನು ತುಂಬಿದ್ದಾರೆ. ಇವುಗಳ ಪೈಕಿ ಸುದರ್ಶನನ ಪಾತ್ರವು ತನಗೆ ಅಚ್ಚುಮೆಚ್ಚು ಎನ್ನುತ್ತಾರೆ.


ಪ್ರಸ್ತುತ ಮಂಗಳೂರು ಆಕಾಶವಾಣಿಯ ಮಹಿಳಾ ಯಕ್ಷಗಾನ ತಂಡದ ಬಿ ಗ್ರೇಡ್ ಕಲಾವಿದೆ ಮತ್ತು ಹಾಗೂ ಪೆರ್ಲ ನಲಾಂದ ಕಾಲೇಜನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಸಾಧನೆಗೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನ ಪುರಸ್ಕಾರಗಳು ನೀಡಿ ಗೌರವಿಸಿದ ಕ್ಷಣಗಳನ್ನೂ, ಪ್ರಚೋದನೆ ನೀಡುವ ರಂಗಸಿರಿ ಸ್ಥಾಪಕರಾದ ಶ್ರೀಶ ಕುಮಾರ ಪಂಜಿತಡ್ಕ, ನಾಟ್ಯಾಭ್ಯಾಸ ಕಲಿಸಿದ ಗುರುಗಳನ್ನೂ, ಪ್ರೋತ್ಸಾಹಿಸುವ ಗೆಳೆಯರನ್ನೂ ಸದಾ ನೆನಪಿಸಿಕೊಳ್ಳುತ್ತಾರೆ.


ತಮ್ಮನಾದ ಶಂಕರನಾರಾಯಣ ಶರ್ಮಾ, ಅಕ್ಕಂದಿರಾದ ವಸುಧ, ವಂದನ, ಹಾಗೂ ಚಿಕ್ಕಪ್ಪ ವೆಂಕಟೇಶ್ವರ ಭಟ್ ಸದಾ ಬೆಂಬಲಿಗರಾಗಿದ್ದಾರೆ.
ಕಲೀತಾ ಕಲೀತಾ ಯಾವುದೇ ವಿದ್ಯೆಯೂ ಕೂಡಾ ನಮ್ಮ ಕೈ ಸೇರಿ ಬಾಳ ಬೆಳಗಲು ಸಾಧ್ಯ ಎಂಬ ಮಾತೊಂದಿದೆ. ಖಂಡಿತವಾಗಿಯೂ ನಂಬಲೇಬೇಕಾದ್ದು. ಏಕೆಂದರೆ ನಾವು ಆಸಕ್ತಿ ವಹಿಸಿ ಪ್ರಯತ್ನಪಟ್ಟು ಕಲಿತ ವಿದ್ಯೆಗಳೇ ಮುಂದೆ ನಮ್ಮನ್ನೊಂದು ಪಥದಲ್ಲಿ ಚಲಿಸುವಂತೆ ಪ್ರೇರೇಪಿಸುವಂತಹವುಗಳು. ಯಕ್ಷಗಾನ ರಂಗದಲ್ಲಿ ತನ್ನ ಇನ್ನಷ್ಟು ಸಾಧನೆಯನ್ನು ಮಾಡುವುದರ ಜೊತೆ ಜೊತೆಗೆ ಇವರು ಕಟ್ಟಿಕೊಂಡಿರುವ ಎಲ್ಲಾ ಕನಸುಗಳು ಆದಷ್ಟು ಬೇಗ ನನಸಾಗಲಿ ಎಂದು ಶುಭ ಹಾರೈಸುತ್ತಿದ್ದೇವೆ.

ಲೇಖನ: ಅಭಿಷೇಕ್ ನಾಯಕ್ ಮಲೆನಾಡು
ಚಿತ್ರಕೃಪೆ/ವೀಡಿಯೋ/ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ

Tags: BhagavathyKannada ArticleSpecial Articleಕಾಸರಗೋಡುಭಾಗವತಿಕೆಮಂಗಳೂರುಮಹಿಳಾ ಯಕ್ಷಗಾನಯಕ್ಷಗಾನಯಕ್ಷರಂಗವಿದ್ಯಾ ಕುಂಟಿಕ್ಕಾನ ಮಠಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Share198Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಗಮನಿಸಿ! ಶಿವಮೊಗ್ಗ-ಬೆಂಗಳೂರು ಇಂಟರ್’ಸಿಟಿ ರೈಲು ಸಂಚಾರ ವೇಳೆ ಬದಲಾಗಿದೆ

Next Post

ಫನಿ ಅಬ್ಬರಕ್ಕೆ ಒಡಿಶಾ ಅಲ್ಲೋಕಕಲ್ಲೋಲ: 1 ಸಾವಿರ ಕೋಟಿ ರೂ. ಪರಿಹಾರ ಘೋಷಿಸಿದ ಮೋದಿ

kalpa News

kalpa News

Next Post
ಫನಿ ಅಬ್ಬರಕ್ಕೆ ಒಡಿಶಾ ಅಲ್ಲೋಕಕಲ್ಲೋಲ: 1 ಸಾವಿರ ಕೋಟಿ ರೂ. ಪರಿಹಾರ ಘೋಷಿಸಿದ ಮೋದಿ

ಫನಿ ಅಬ್ಬರಕ್ಕೆ ಒಡಿಶಾ ಅಲ್ಲೋಕಕಲ್ಲೋಲ: 1 ಸಾವಿರ ಕೋಟಿ ರೂ. ಪರಿಹಾರ ಘೋಷಿಸಿದ ಮೋದಿ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL