ಕಲ್ಪ ಮೀಡಿಯಾ ಹೌಸ್ | ಕಾರವಾರ |
ಹಸುವಿನ ತಲೆಯಲ್ಲಿ #Cow ಕತ್ತರಿಸಿ ಅದರ ಗರ್ಭದಲ್ಲಿದ್ದ ಕರುವನ್ನು ಹೊತ್ತೊಯ್ದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹೊನ್ನಾವರ #Honnavara ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಹೊನ್ನಾವರ ತಾಲೂಕಿನ ವಲ್ಕಿಯ ತೌಫಿಕ್ ಅಹ್ಮದ್ ಜಿದ್ದಾ ಎಂದು ಗುರುತಿಸಲಾಗಿದೆ.
Also Read>> 15ರಿಂದ ತಿಂಗಳೊಳಗೆ ವಿದ್ಯುತ್ ಸರಬರಾಜು ಬಿಲ್ ಹಣ ಪಾವತಿಸಿ: ಮುರುಗೇಶ್ ನಿರಾಣಿ ಆಗ್ರಹ
ಆರೋಪಿ ತೌಫಿಕ್ ಜ.19ರಂದು ಹೊನ್ನಾವರದ ಸಾಲ್ಕೋಡು ಗ್ರಾಮದಲ್ಲಿ ಹಸುವೊಂದನ್ನುಹತ್ಯೆ ಮಾಡಿದ್ದ. ಹಸುವಿನ ತಲೆ ಕತ್ತರಿಸಿ ಅದರ ರುಂಡ ಹಾಗೂ ಕಾಲುಗಳನ್ನು ಬಿಟ್ಟು ಗೋಮಾಂಸವನ್ನು ಹೊತ್ತೊಯ್ಯುವ ಜೊತೆಯಲ್ಲಿ ಗರ್ಭದಲ್ಲಿದ್ದ ಕರುವನ್ನೂ ಸಹ ಹೊತ್ತೊಯ್ದಿದ್ದ.
ಬಂಧಿತ ಆರೋಪಿ, ಗೋವಿನ ವಧೆಗೆ ಸಹಕರಿಸಿ, ಬೈಕ್ ಮೂಲಕ ಮಾಂಸವನ್ನು ಕೊಂಡೊಯ್ದಿದ್ದ. ಕೃತ್ಯದಲ್ಲಿ ಭಾಗಿಯಾದ ಮೂರು ಜನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಈ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಪಿ ಎಂ. ನಾರಾಯಣ್ ಅವರು ಆರು ವಿಶೇಷ ತಂಡ ರಚಿಸಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ತಲೆತಪ್ಪಿಸಿಕೊಂಡಿರುವ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post