ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಐ ಆಮ್ ಬ್ಲೆಸ್ಡ್ ಬೈ ಬೆಸ್ಟ್ ಫ್ಯಾನ್ಸ್… ಇದು ಕ್ಯಾನ್ಸರ್’ಗೆ #Cancer ಅಮೆರಿಕಾದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ತವರಿಗೆ ಮರಳಿದ ನಂತರ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಫಸ್ಟ್ ರಿಯಾಕ್ಷನ್…
ಬೆಂಗಳೂರಿಗೆ ಮರಳಿದ ನಂತರ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಣ್ಣ, #Shivarajkumar ಬೆಸ್ಟ್ ಫ್ಯಾನ್ಸ್’ನಿಂದ ನಾನು ಬ್ಲೆಸ್ಡ್ ಆಗಿದ್ದು, ಅಭಿಮಾನಿಗಳ ಹಾರೈಕೆಯೇ ನನ್ನನ್ನು ಇಂದು ಕಾಪಾಡಿದೆ ಎಂದು ಧನ್ಯವಾದ ಹೇಳಿದರು.
Also Read>> ಕಾರವಾರ | ಹಸುವಿನ ತಲೆ ಕತ್ತರಿಸಿ ಗರ್ಭದಲ್ಲಿದ್ದ ಕರು ಹೊತ್ತೊಯ್ದಿದ್ದ ಆರೋಪಿ ತೌಫಿಕ್ ಅಹ್ಮದ್ ಅಂದರ್
ಏನು ಹೇಳಿದರು ಶಿವಣ್ಣ
ಆಪರೇಶನ್ ಆದ 2-3 ದಿನ ಕೇವಲ ಲಿಕ್ವಿಡ್ ಆಹಾರ ತೆಗೆದುಕೊಂಡು ಆನಂತರ ತಿಳಿ ಸಾರು ಹಾಗೂ ಅನ್ನ ಮಾತ್ರ ಸೇರಿಸುತ್ತಿದ್ದೆ. ಆಹಾರ ತೀರಾ ಕಡಿಮೆಯಿದ್ದರೂ, ದೇಹ ಹಾಗೂ ಮನಸ್ಸಿನಲ್ಲಿ ಶಕ್ತಿ ಹೆಚ್ಚಾಗಿತ್ತು. ಅಲ್ಲಿಯೇ ಅಡುಗೆ ಮನೆ ಸೆಟ್ ಮಾಡಿಕೊಂಡು ಗೀತಾ ಅಡುಗೆ ಮಾಡುತ್ತಿದ್ದರು ಎಂದರು.
ಸರ್ಜರಿ ಆದ ಎರಡು ದಿನ, ಮೂರು ದಿನದ ಬಳಿಕ ನಿಧಾನವಾಗಿ ನಡೆಯಲು ಶುರು ಮಾಡಿದೆ. ಜೀವನವೇ ಒಂದು ಪಾಠ, ಜೀವನದಲ್ಲಿ ಇದೆಲ್ಲ ತಾನಾಗಿ ಬರುತ್ತೆ. ನಾನು ಎಲ್ಲವನ್ನೂ ಧೈರ್ಯವಾಗಿ ಮಾಡಿದೆ. 131 ಸಿನಿಮಾ ಬಗ್ಗೆ ಪ್ಲ್ಯಾನ್ ಇದೆ. ರಾಮ್ ಚರಣ್ #Ramcharan ಅವರ ಸಿನಿಮಾ ಮಾಡುತ್ತೇನೆ ಎಂದರು.
ಅಮೆರಿಕಾಗೆ #USA ಹೋಗಬೇಕಿದ್ದರೆ ಬಹಳ ಎಮೋಷನ್ ಆದ್ದೆ. ಏನೇ ಇದ್ದರೂ ಫೇಸ್ ಮಾಡಬೇಕಿತ್ತು. ಧೈರ್ಯವಾಗಿ ಹೋಗಬೇಕಿತ್ತು, ಹೋಗಿ ಬಂದೆ. ಹೋಗಬೇಕಿದ್ದರೆ ಸ್ವಲ್ಪ ಭಯ ಇತ್ತು. ಅಭಿಮಾನಿಗಳ ಆಶೀರ್ವಾದದಿಂದ ಹೋಗಿಬಂದೆ. ಅಮೆರಿಕಾಗೆ 20-22 ಗಂಟೆ ವಿಮಾನ ಪ್ರಯಾಣ ಆಯಿತು. ಏರ್ಪೋಟ್ ಇಳಿದು ಆಸ್ಪತ್ರೆ ಮುಂದೆ ಹೋಗಬೇಕಿದ್ದಾಗಲೇ ಧೈರ್ಯ ಬಂತು. ಆಪರೇಷನ್ ಮುಗಿದ ಮೇಲೆ ಬಂದು ಹೇಳಿದ ಮೇಲೆ ಎಲ್ಲವೂ ಆಗಿದೆ ಅಂತ ಗೊತ್ತಾಯ್ತು ಎಂದರು.
ಅಲ್ಲಿ, ಆರು ಗಂಟೆ ಕಾಲ ಸರ್ಜರಿ ನಡೆಯಿತು. ಎರಡನೇ ದಿನದಿಂದಲೇ ವಾಕ್ ಶುರು ಮಾಡಿದೆ. ಆ ಎನರ್ಜಿ ಎಲ್ಲಿಂದ ಬಂತೋ ಗೊತ್ತಿಲ್ಲ. ಅಭಿಮಾನಿಗಳಷ್ಟೇ ಅಲ್ಲ, ಇಂಡಸ್ಟ್ರಿ ಅವರು ಧೈರ್ಯ ತುಂಬಿದರು. ಗೀತನ ಬಗ್ಗೆ ಮಾತಾಡಲ್ಲ. ಗೀತಾ #GeethaShivarajkumar ಹೆಂಡತಿನೂ ಹೌದು, ತಾಯಿನೂ ಹೌದು. ಈ ಬಾರಿ ಮಗಳು ನಿವೇದಿತಾ ತಾಯಿಗಿಂತ ಹೆಚ್ಚು ನೋಡಿಕೊಂಡಿದ್ದಾಳೆ. ನಿವೇದಿತಾ ಗೆಳತಿ ಅನು ಒಂದು ತಿಂಗಳು ನಮ್ಮ ಜೊತೆ ಇದ್ದರು ಎಂದು ತಿಳಿಸಿದರು.
ಅಲ್ಲಿನ ವೈದ್ಯರು ಪ್ರತಿ ಹಂತದಲ್ಲೂ ಸಹ ನನಗೆ ಸಹಾಯ ಮಾಡಿ, ಧೈರ್ಯ ತುಂಬಿದ್ದಾರೆ. ಅಲ್ಲಿನ ತಂಡಕ್ಕೆ ಧನ್ಯವಾದಗಳು ಎಂದರು.
ಯಾವಾಗಿನಿಂದ ಶೂಟಿಂಗ್ ಆರಂಭ
ವೈದ್ಯರ ಬಳಿ ಮಾತನಾಡಿದ್ದೇವೆ. ವಿಶ್ರಾಂತಿ ಹೇಳಿದ್ದರೂ, ನಾರ್ಮಲ್ ಕೆಲಸ ಮಾಡುತ್ತೇನೆ. ಮತ್ತೊಮ್ಮೆ ವೈದ್ಯರನ್ನು ಕೇಳಿ ಆನಂತರ ಅಂದರೆ ಮಾರ್ಚ್ ಬಳಿಕ ಆಕ್ಷನ್ ವರ್ಕ್ ಆರಂಭಿಸುತ್ತೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post