ಇಡುಕ್ಕಿ(ಕೇರಳ): ತಾಯಿಯ ಎದೆ ಹಾಲು ಕುಡಿಯುವ ವೇಳೆಯೇ ಎರಡೂವರೆ ತಿಂಗಳ ಶಿಶು ಉಸಿರುಗಟ್ಟಿ ಅಸುನೀಗಿರುವ ಮನಕಲುಕುವ ಘಟನೆ ಕೇರಳದ ಇಡುಕ್ಕಿಯಲ್ಲಿ ನಡೆದಿದೆ.

ಇಡುಕ್ಕಿ ಜಿಲ್ಲೆಯ ನೆಡುಂಕಂಡಂ ಕರುಣಪುರಂದಲ್ಲಿ ಘಟನೆ ನಡೆದಿದ್ದು, ಜಿಜಿನ್-ತಿನೋಲ್ ದಂಪತಿಯ ಎರಡೂವರೆ ತಿಂಗಳ ಮಗು ಎದೆ ಹಾಲು ಕುಡಿಯುತ್ತಿರುವ ಸಂದರ್ಭದಲ್ಲಿ ಏಕಾಏಕಿ ಮೂರ್ಛೆ ಹೋಗಿದೆ. ಇದರಿಂದ ಗಾಬರಿಗೊಂದ ಪೋಷಕರು ತತಕ್ಷಣವೇ ಶಿಶುವನ್ನು ಮಕ್ಕಳ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಮಗುವನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ. ಎಳೆಯ ಕಂದನನ್ನು ಕಳೆದುಕೊಂಡು ದಂಪತಿಯ ರೋಧನ ಮುಗಿಲುಮುಟ್ಟಿದೆ.
ಹಾಲುಣಿಸುವ ವೇಳೆ ಉಸಿರುಗಟ್ಟಿದ್ದೇ ಮಗು ಅಸುನೀಗಲು ಕಾರಣ ಎಂದು ಹೇಳಲಾಗಿದೆ.

















