ಇಡುಕ್ಕಿ: ಈಗಾಗಾಲೇ ಕಂಡು ಕೇಳರಿಯದ ರೀತಿಯಲ್ಲಿ ಪ್ರವಾಹಕ್ಕೆ ತತ್ತರಿಸಿ, ಈಗಷ್ಟೇ ಬದುಕು ಕಟ್ಟಿಕೊಳ್ಳುವಲ್ಲಿ ಚಿಂತಿಸುತ್ತಿರುವ ಕೇರಳದ ಹಲವೆಡೆ ಈಗ ಮತ್ತೆ ಭಾರೀ ಮಳೆ ಭೀತಿ ಎದುರಾಗಿದೆ.
ಇಡುಕ್ಕಿ, ಮಲ್ಹಾಪುರಂ ಜಿಲ್ಲೆ ಸೇರಿದಂತೆ ಕೇರಳದ ಹಲವೆಡೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಹೇಳಿದೆ.
Kerala Meteorological department withdraws red alert issued for Idukki and Malappuram districts of the state.
— ANI (@ANI) October 6, 2018
ಇಡುಕ್ಕಿ ಡ್ಯಾಂನಿಂದ ನೀರನ್ನು ಹೊರಕ್ಕೆ ಬಿಡಲಾಗುತ್ತಿದ್ದು, ಈ ಭಾಗದಲ್ಲಿ ಎಚ್ಚರಿಕೆ ವಹಿಸುವಂತೆಯೂ ಸಹ ಸೂಚಿಸಲಾಗಿದೆ. ಅಲ್ಲದೇ ತತಕ್ಷಣದ ಪ್ರವಾಹವನ್ನು ತಪ್ಪಿಸುವ ಸಲುವಾಗಿ, ಈಗಾಗಲೇ ಸುಮಾರು 14 ಡ್ಯಾಂಗಳಿಂದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.
ಅಲ್ಲದೇ, ಈ ಭಾಗದಲ್ಲಿ ಕೆಲವು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ, ಎಂತಹುದ್ದೇ ಪರಿಸ್ಥಿತಿಯನ್ನು ಎದುರಿಸಲು ಕೇರಳ ಸರ್ಕಾರ ಸಿದ್ದತೆ ನಡೆಸಿದೆ.
Discussion about this post