ಇಡಿಯ ಭಾರತದ ಚಿತ್ರರಂಗ ಮಾತ್ರವಲ್ಲ ವಿದೇಶಿ ಚಿತ್ರರಂಗವೂ ಸಹ ತಿರುಗಿ ನೋಡುವಂತೆ ತೆರೆಯ ಮೇಲೆ ಅಬ್ಬರಿಸಿದ್ದ ರಾಖಿ ಬಾಯ್ ಚಾಪ್ಟರ್ 2ರಲ್ಲಿ ಬರಲು ಸಿದ್ದವಾಗುತ್ತಿದ್ದು, ಬಿಡುಗಡೆ ದಿನಾಂಕವನ್ನು ಚಿತ್ರತಂಡ ಫಿಕ್ಸ್ ಮಾಡಿದೆ.
ಯಶ್ ಟ್ವಿಟರ್ ಪೇಜಲ್ಲಿ ಇದನ್ನು ಅಧಿಕೃತವಾಗಿ ಶೇರ್ ಮಾಡಿದ್ದು, ಇದರಂತೆ ಅಕ್ಟೋಬರ್ 23ರಂದು ಬಿಡುಗಡೆ ಮಾಡುವುದಾಗಿ ಹೇಳಿದೆ.
— Yash (@TheNameIsYash) March 13, 2020
ಚಿತ್ರದ ಬಿಡುಗಡೆ ದಿನಾಂಕವನ್ನು ಯಶ್ ಅಧಿಕೃತ ಪೇಜಿನಲ್ಲಿ ಪ್ರಕಟಿಸಿದ್ದು, ಮೇ ಐ ಕಂ ಇನ್ ಎಂಬ ಯಶ್ ಬ್ಯಾಗ್ರೌಂಡ್ ವಾಯ್ಸ್’ನಲ್ಲಿ ಕೆಜಿಎಫ್ ಚಾಪ್ಟರ್ 2 ಪೋಸ್ಟರ್ ಹಾಕಿದ್ದು, ಈಗಾಗಲೇ ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾತ್ರವಲ್ಲ ಯಶ್ ಅಭಿಮಾನಿಗಳಲ್ಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.
Discussion about this post