ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅಶ್ವತ್ಥಾಮನ ದುರ್ಬುದ್ಧಿಯಿಂದ, ಮತ್ಸರದಿಂದ ಪಾಂಡವರನ್ನು ನಾಶ ಮಾಡಲು ಒಂದು ದಿವ್ಯಾಸ್ತ್ರ ಪ್ರಯೋಗಿಸುತ್ತಾನೆ. ಅದುವೇ ನಾರಾಯಣಾಸ್ತ್ರ.
ಅದು ಪ್ರಯೋಗಿಸಲು ಇರುವಂತದ್ದಲ್ಲ. ಆದರೆ ಇದನ್ನು ಕಲಿತ ಅಶ್ವತ್ಥಾಮ ಮೊಟ್ಟ ಮೊದಲಬಾರಿಗೆ ಪ್ರಯೋಗಿಸಿದ್ದು ಭಗವಂತನು ಸಾರಥಿಯಾಗಿ ಕುಳಿತಿರುವ ಅರ್ಜುನನ ರಥಕ್ಕೆ. ಇದಕ್ಕೆ ಪ್ರತಿಯಾದ ಅಸ್ತ್ರ ಯಾವುದೂ ಇಲ್ಲ. ಅಲ್ಲದೇ ಅದರ ಉಪಸಂಹಾರವೂ ಅಶ್ವತ್ಥಾಮನಿಗೆ ಗೊತ್ತಿಲ್ಲ. ಎಂತಹ ಮೂರ್ಖ ನೋಡಿ ಅಶ್ವತ್ಥಾಮ.
ಹೇಗೆ ಚೈನಾದವರು ಜೈವಿಕಾಸ್ತ್ರ ಪ್ರಯೋಗಕ್ಕಿಳಿದು ಕರೋನ ವೈರಸ್ಸನ್ನು ಸೃಷ್ಟಿಸಿ ಕೈಕಾಲು ಬಿಟ್ಟರೋ ಹಾಗೆಯೇ ಈ ಅಸ್ತ್ರಪ್ರಯೋಗವೂ ಆಯ್ತು. ಆಗ ಸ್ವತಃ ಕೃಷ್ಣನೇ ಎದು ನಿಂತು, ’ಅಶ್ವತ್ಥಾಮಾ ಏನು ಕೆಲಸ ಮಾಡಿದೆ ಹೇಳು? ಒಂದು ವೇಳೆ ಪಾಂಡವರು ನಾಶವಾದರೂ ನೀನು ಪ್ರಯೋಗಿಸಿದ ಅಸ್ತ್ರ ತನ್ನ ಕೆಲಸ ನಿಲ್ಲಿಸದು. ಅದರ ವಿಚಾರ ನನಗೆ ಗೊತ್ತಿದೆ. ಅದರ ಉಪಸಂಹಾರ ತಿಳಿಯದ ನೀನು ಯಾಕೆ ಪ್ರಯೋಗಿಸಿದೆ ಹೇಳು. ಲಕ್ಷಾಂತರ ಸೈನಿಕರೂ, ಸೇನಾನಿಗಳೂ ಸಾವನ್ನಪ್ಪುತ್ತಿದ್ದಾರೆ ನಿನ್ನ ದುರ್ಬುದ್ಧಿಯಿಂದಾಗಿ.’ ಎಂದು ಕೇಳಿದ.
ನಂತರ ಧರ್ಮರಾಯನಲ್ಲಿ,’ಹೇ ಧರ್ಮನಂದನಾ, ನಾರಾಯಣಾಸ್ತ್ರಕ್ಕೆ ಪ್ರತ್ಯಸ್ತ್ರವಿಲ್ಲ. ಹಾಗಾಗಿ ನೀವೆಲ್ಲರೂ ಶರಣಾಗುವುದೊಂದೇ ದಾರಿ’ ನಾರಾಯಣಾಸ್ತ್ರ ಶತ್ರು ಸಂಹಾರಕ್ಕೆ ಇದ್ದದ್ದಲ್ಲ. ಸ್ವಯಂ ರಕ್ಷಣೆಗೆ ಇರುವಂತದ್ದು ಎಂದನು. ಆದರೆ ಭೀಮಸೇನನು,’ಹೇ ವಾಸುದೇವಾ, ಶರಣಾಗುವುದು ಕ್ಷತ್ರಿಯ ಸಂಸ್ಕಾರವಲ್ಲ. ಯಾರು ಶರಣಾದರೂ ನಾನು ಶರಣಾಗಲಾರೆ’ ಎಂದು ಹೇಳುತ್ತಾ ನಾರಾಯಣಾಸ್ತ್ರಕ್ಕೆ ಮುನ್ನುಗ್ಗಿದ. ಕೊನೆಗೆ ಕೃಷ್ಣನು ಧರ್ಮರಾಯ, ನಕುಲ ಸಹದೇವರೊಂದಿಗೆ ಅರ್ಜುನ ಸಹಿತ ಭೀಮಸೇನನ ಆಯುಧವನ್ನು ಎಳೆದುಕೊಂಡು ನಿರಾಯುಧರಾದರು. ಅಷ್ಟರಲ್ಲಿ ನಾರಾಯಣಾಸ್ತ್ರವು ಗರಗರನೆ ತಿರುಗುತ್ತ, ಭಗವಂತನಾದ ಶ್ರೀಕೃಷ್ಣನೊಳಗೆ ಐಕ್ಯವಾಗುತ್ತದೆ, ರಣಾಂಗಣವು ಶಾಂತವಾಯ್ತು.
ಇಲ್ಲಿ ಒಂದು ತತ್ವವಿದೆ. ರಾಜಧರ್ಮ ಸಿಎಎ ವಿರುದ್ಧ ಮುಸ್ಲಿಮರನ್ನು ಎತ್ತಿಕಟ್ಟಿ ಮಾಡಬಾರದ್ದನ್ನು ಮಾಡಿಸಿದರು. ಶವಗಳು ಉರುಳಿದವು. ಪ್ರತಿಭಟನೆ ತಾರಕ್ಕೇರಿತು. ಇದನ್ನು ನಿಯಂತ್ರಿಸಲು ಕರೋನ ವ್ಯಾಧಿ ಚೈನಾದಿಂದ ಭಾರತಕ್ಕೂ ಇಳಿಯಿತು. ಅಂದರೆ ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗಿ ಹೋಗುತ್ತದೆ. ವ್ಯಾಪಾರವನ್ನೇ ಅವಲಂಭಿಸಿ ಬದುಕುವ ಕೋಟ್ಯಂತರ ಜನರ ಹೊಟ್ಟೆಗೆ ಘಾತವಾಗುತ್ತಿದೆ. ಈಗ?
ಭಾರತೀಯ ಸಂಸ್ಕಾರಗಳನ್ನು ಮೂಢನಂಬಿಕೆ ಎಂದವರು, ಹಿಂದೂ ದೇವತೆಗಳನ್ನು ನಿಂದಿಸಿದವರು, ಹಿಂದೂ ದೇವಾಲಯ(ಅಯೋಧ್ಯೆ, ಕಾಶಿ, ಮಧುರಾ ಇತ್ಯಾದಿ) ಏನು ಉತ್ತರ ಕೊಡುತ್ತಾರೆ? ಯಾವ ಔಷಧಿ ನೀಡಲು ಸಾಧ್ಯವಿದೆ? ಈಗ ಉಳಿದಿರುವುದು ಒಂದೇ ದಾರಿ. ಭಗವಂತನಿಗೇ ಶರಣಾಗೋದು ಮಾತ್ರ. ಶರಣಾಗದಿದ್ದರೆ ಉಳಿಗಾಲವೂ ಇಲ್ಲ. ಒಣಗಿದ ಕಸದೊಂದಿಗೆ ಹಸಿಯೂ ಉರಿಯುವ ಸೂಚನೆ ಇದು. ಆದರೆ ಹಿಂದುಗಳಿಗೆ ಸನಾತನ ಸಂಸ್ಕಾರವಾದರೂ ಇದೆ. ಹಿಂದುವೇತರರಿಗೆ? ಮುಂದಿನ ಭವಿಷ್ಯದಲ್ಲಿ ನಮ್ಮ ಪ್ರಾರ್ಥನೆ ಇಷ್ಟೆ.
ಸರ್ವೇ ಜನಾಃ ಸುಖಿನೋ ಭವಂತು ಎಂಬ ವೇದವಾಕ್ಯ ನಮ್ಮಲ್ಲಿ ಮಾತ್ರ ಇರೋದು. ಇಸ್ಲಾಮಿಗರಲ್ಲಿ ಕಾಫೀರರನ್ನು ಕೊಲ್ಲಿರಿ, ಮೂರ್ತಿ ಆರಾಧಕರನ್ನು ಕೊಲ್ಲಿ ಎಂಬ ಧ್ಯೇಯ ವಾಕ್ಯ ಎಂದು ನಾನು ಹೇಳುತ್ತಿಲ್ಲ. ಅವರ ಗುರುಗಳೇ ಹೇಳುತ್ತಿದ್ದಾರೆ.
ಶಡಾನನಂ ಕುಂಕುಮ ರಕ್ತವರ್ಣಾಂ
ಮಹಾಮತಿಂ ದಿವ್ಯ ಮಯೂರವಾಹನಂ
ರುದ್ರಸ್ಯ ಸೂನುಂ ಗುಹಂ ಸದಾಂ ರಕ್ಷ ರಕ್ಷಮಾಂ ಶರಣಂ ಪ್ರಪದ್ಯೇ.
ಈ ಸಮಸ್ಯೆಗೆ ಸುಬ್ರಹ್ಮಣ್ಯನ ಆರಾಧನೆಯೊಂದೇ ಪರಿಹಾರ…
Get in Touch With Us info@kalpa.news Whatsapp: 9481252093
Discussion about this post