ಕಲ್ಪ ಮೀಡಿಯಾ ಹೌಸ್ | ಕಿನ್ನಿಗೋಳಿ |
ಇಲ್ಲಿನ ಪಕ್ಷಿಕೆರೆ ಎಂಬಲ್ಲಿ ಜ್ವರದಿಂದ ಬಳಲುತ್ತಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗಿದೇ ಮೃತನಾಗಿದ್ದಾನೆ.
ಪಕ್ಷಿಕೆರೆ ಜುಮಾ ಮಸೀದಿ ಬಳಿಯ ನಿವಾಸಿ ಇಸ್ಮಾಯೀಲ್ ಅವರ ಪುತ್ರ 10ನೆಯ ತರಗತಿ ವಿದ್ಯಾರ್ಥಿ ಹಿಲಾಲ್(16)ಮೃತ ಬಾಲಕ.
ಹಿಲಾಲ್’ಗೆ ಕೆಲದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಆತನನ್ನು ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
Also read: ಬಸವರಾಜ ಬೊಮ್ಮಾಯಿಗೂ ತಟ್ಟಿದ ನೀತಿ ಸಂಹಿತೆ ಬಿಸಿ: ಚೆಕ್ ಪೋಸ್ಟ್’ನಲ್ಲಿ ಸಿಎಂ ಕಾರು ತಪಾಸಣೆಬಸವರಾಜ ಬೊಮ್ಮಾಯಿಗೂ ತಟ್ಟಿದ ನೀತಿ ಸಂಹಿತೆ ಬಿಸಿ: ಚೆಕ್ ಪೋಸ್ಟ್’ನಲ್ಲಿ ಸಿಎಂ ಕಾರು ತಪಾಸಣೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post