ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರದ ಖಾಸಗಿ ಹೋಟೆಲ್ನಲ್ಲಿ ಭಾನುವಾರ ಆಯೋಜಿಸಲಾಗಿದ್ದ ನೈರುತ್ಯ ರೈಲ್ವೆ #SWR ದಿವ್ಯಾಂಗಜನ ವೆಲ್ಫೇರ್ ಅಸೋಸಿಯೇಷನ್ನ ವಾರ್ಷಿಕ ಸಾಮಾನ್ಯ ಸಭೆಯು ಯಶಸ್ವಿಯಾಗಿ ಜರುಗಿತು. ಈ ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಸೋಸಿಯೇಷನ್ನ ಅಧ್ಯಕ್ಷರಾಗಿ ಕಿರಣ್ ಬಿ. ಚಿನ್ನಾ ರಾಥೋಡ್ ಅವರು ಮತ್ತೊಮ್ಮೆ ಸರ್ವಾನುಮತದಿಂದ ಮರು ಆಯ್ಕೆಯಾಗಿದ್ದಾರೆ. ಅದೇ ರೀತಿ, ಪ್ರಧಾನ ಕಾರ್ಯದರ್ಶಿಯಾಗಿ (ಜನರಲ್ ಸೆಕ್ರೆಟರಿ) ಷಣ್ಮುಖಪ್ಪ ಬಿ. ಹಾಗೂ ಖಜಾಂಚಿಯಾಗಿ (ಟ್ರೆಜರರ್) ಎಂ. ಎ. ಅತ್ತಾರ ಅವರು ಮರು ಆಯ್ಕೆಯಾಗುವ ಮೂಲಕ ಸಂಘದ ಜವಾಬ್ದಾರಿಯನ್ನು ಮುಂದುವರೆಸಲಿದ್ದಾರೆ.
ಸಭೆಯಲ್ಲಿ ದಿವ್ಯಾಂಗ ನೌಕರರ ಕ್ಷೇಮಾಭಿವೃದ್ಧಿ ಹಾಗೂ ಸಂಘಟನೆಯ ಮುಂದಿನ ಗುರಿಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಮರು ಆಯ್ಕೆಯಾದ ಪದಾಧಿಕಾರಿಗಳು ಸಂಘದ ಬಲವರ್ಧನೆಗೆ ಶ್ರಮಿಸುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು. ಅಸೋಸಿಯೇಷನ್ನ ಸದಸ್ಯರು ಹಾಗೂ ರೈಲ್ವೆ ಇಲಾಖೆಯ #IndianRailway ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















