ರಾಜ್ಯ ಸೇರಿದಂತೆ ರಾಷ್ಟ ಮಟ್ಟದಲ್ಲಿ ಕಿರಿಕ್ ಮಾಡಿದ್ದ ಮೀಟೂ ಪ್ರಕರಣಗಳು ಇಡಿಯ ದೇಶವನ್ನೇ ತಲ್ಲಣಗೊಳಿಸಿದ್ದವು. ರಾಜ್ಯದ ಮಟ್ಟಿಗೆ ನೋಡುವುದಾದರೆ, ಚಿತ್ರರಂಗದ ಇತಿಹಾಸದಲ್ಲೇ ಈ ವಿಚಾರದ ಭಾರೀ ಕೋಲಾಹಲ ಎಬ್ಬಿಸಿದ್ದು ತಿಳಿದೇ ಇದೆ.. ಈಗ ಇದೇ ವಿಚಾರವನ್ನು ಆಧರಿಸಿದ ಚಿತ್ರ ಸಿದ್ದವಾಗುತ್ತಿದೆ.
ಕೆಲವು ತಿಂಗಳ ಹಿಂದೆ ಯುವ ನಿರ್ದೇಶಕನೊಬ್ಬರಿಗೆ ನಟ ಹುಚ್ಚ ವೆಂಕಟ್ ಬೆದರಿಕೆ ಹಾಕಿದ್ದ ವಿಚಾರ ನೆನಪಿರಬಹುದು. ಹಾಗೆ, ಬೆದರಿಕೆ ಹಾಕಿಸಿಕೊಂಡಿದ್ದ ಯುವ ಪ್ರತಿಭೆಯೇ ಮಲೆನಾಡ ಮೂಲದ ಕಿರಿಕ್ ಹುಡ್ಗ ಕೀರ್ತನ್ ಈ ಮೀಟೂ ಚಿತ್ರದ ನಿರ್ದೇಶಕ.

ಚಿತ್ರದ ಕುರಿತಂತೆ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ಕೀರ್ತನ್, ಕನ್ನಡ ಸಿನಿಮಾ ಇಂಡಸ್ಟ್ರಿಯ ಕರಾಳ ಮುಖ ಬಿಚ್ಚಿಡುವ ಸಿನಿಮಾ ಮಾಡಲು ಮುಂದಾಗಿದ್ದು, ವಿವಾದಾತ್ಮಕ ನಟಿ ಶ್ರೀ ರೆಡ್ಡಿಯನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸುವುದಾಗಿ ತಿಳಿಸಿದ್ದಾರೆ.
ಫೇಸ್ ಬುಕ್ ಲವ್ ಅರ್ಧಕ್ಕೆ ನಿಂತ ವೇಳೆ ತಲೆಗೆ ಬಂದಿದ್ದು ಮೀಟೂ. ಹೀಗಾಗಿ ಈ ಅಭಿಯಾನದ ಕುರಿತಂತೆ ಕಥೆಯನ್ನು ಬರೆದೆ. ಈ ಚಿತ್ರಕ್ಕಾಗಿ ದೊಡ್ಡವರ ಸಹಾಯದಿಂದ ತೆಲುಗು ನಟಿ ಶ್ರೀ ರೆಡ್ಡಿಯನ್ನು ಸಂಪರ್ಕಿಸಿ, ಒಪ್ಪಿಸುವಲ್ಲಿ ಯಶಸ್ವಿಯಾದೆವು. ಈ ಚಿತ್ರದಲ್ಲಿ ಅವರದ್ದು ನಾಯಕಿಯ ಪಾತ್ರ ಅಲ್ಲದಿದ್ದರೂ, ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಲಿದ್ದಾರೆ.
ಶೃತಿ ಹರಿಹರನ್ ಪ್ರಕರಣವೇ?
ಇನ್ನು, ಈ ಚಿತ್ರದಲ್ಲಿ ಶೃತಿ ಹರಿಹರನ್ ಅವರ ಮೀಟೂ ಪ್ರಕರಣವನ್ನು ಹೇಳಲು ನಿರ್ದೇಶಕರು ಹೊರಟಿದ್ದಾರೆಯೇ ಎಂಬ ಅನುಮಾನಗಳು ಗಾಂಧೀನಗರದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿವೆ. ಆದರೆ, ಮಿಟೂ ಅನುಭವಿಸಿರುವ ನಟಿಯರು ಈ ಚಿತ್ರದಲ್ಲಿ ಬಂದು ಹೋಗ್ತಾರೆ ಮತ್ತು ಹಳೆ ನಟ-ನಟಿಯರೊಂದಿಗೆ ಹೊಸ ನಟ-ನಟಿಯರು ಇರುತ್ತಾರೆ ಎನ್ನುತ್ತಾರೆ ಕಿರಿಕ್ ಕೀರ್ತನ್.
ಸಿನಿಮಾದ ಚಿತ್ರೀಕರಣ ಮುಗಿಯುವವರೆಗೂ ಮಾಧ್ಯಮದ ಮುಂದೆ ಸಂಪೂರ್ಣವಾಗಿ ಬರುವುದಿಲ್ಲ ಎನ್ನುವ ನಿರ್ದೇಶಕರು, ‘ಇದೊಂದು ದೊಡ್ಡ ಕಾಂಟ್ರೋವರ್ಸಿ ಚಿತ್ರವಾಗುವುದು ನಿಶ್ಚಿತ ಎನ್ನುತ್ತಾರೆ ಫೇಸ್’ಬುಕ್’ನಲ್ಲಿ.
ಇನ್ನು, ನಿರ್ದೇಶಕರು ಚಿತ್ರದ ಪೋಸ್ಟರ್’ವೊಂದನ್ನು ತಮ್ಮ ಫೇಸ್’ಬುಕ್ ಖಾತೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಇನ್ನು ಈ ಚಿತ್ರದ ಪೋಸ್ಟರ್ ಕುತೂಹಲ ಮೂಡಿಸಿದೆ.












Discussion about this post