ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕರ್ನಾಟಕದಲ್ಲಿ ಯುಗಾದಿ ಹಬ್ಬ ಆಚರಿಸಲಾಗುತ್ತದೆ. ಹೀಗಾಗಿ ಮನೆಯಲ್ಲಿ ಹಬ್ಬವನ್ನು ಯಾವ ರೀತಿ ಆಚರಣೆ ಮಾಡಬೇಕು ಎಂಬುದರ ಜೊತೆ ಯಾವ ಸಿಹಿತಿನಿಸು ಮಾಡುವುದು ಎಂದು ಸಾಮಾನ್ಯವಾಗಿ ಹೆಂಗಸರು ತಲೆಕೆಡಿಸಿಕೊಂಡಿರುತ್ತಾರೆ. ಅವರಿಗಾಗಿ ಇಲ್ಲಿ ಸುಲಭ ಹಾಗೂ ಅತೀ ಬೇಗನೆ ಬಿಸಿ ಬಿಸಿ ಸಿಹಿ ಮಾಲ್ಪುವಾ/ ಕಜ್ಜಾಯ ಮಾಡುವ ವಿಧಾನವನ್ನು ಸುಮೇರು ಮುಖ್ಯಸ್ಥ ಚೆಫ್ ಇಂದ್ರಜಿತ್ ಸಿಂಗ್, ಚೀಫ್ ಇನ್ಚಾರ್ಜ್ ಇನ್ನೋವೇಶನ್ಸ್, ಇನ್ನೋವೇಟಿವ್ ಫುಡ್ಸ್ ಲಿ. ಸುಮೇರು ಬ್ರಾಂಡ್ ತಿಳಿಸಿದ್ದಾರೆ.ಮಾಲ್ಪುವಾ/ಕಜ್ಜಾಯ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ. ಆದ್ರೆ ಅದನ್ನ ಮಾಡೋಕೆ ಮಾತ್ರ ಕಷ್ಟ, ಮಾಡಿದ್ರೂ ಸರಿಯಾಗಿ ಪಾಕ ಬರಬೇಕು ಅಂತೆಲ್ಲಾ ಯೋಚಿಸ್ತಿದ್ರಾ? ಹಾಗಿದ್ರೆ ಇಲ್ಲಿದೆ ರುಚಿಕರವಾದ ಸುಮೇರು ಪನೀರ್ ಕಜ್ಜಾಯ (ಮಾಲ್ಪುವಾ) ಮಾಡುವ ಸರಳ ವಿಧಾನ.
ರುಚಿಕರವಾದ ಸುಮೇರು ಪನೀರ್ ಕಜ್ಜಾಯ (ಮಾಲ್ಪುವಾ)ಗೆ ಪದಾರ್ಥಗಳು:
ಸುಮೇರು ಫ್ರೋಜನ್ ಪನೀರ್ 200 ಗ್ರಾಂ |
ಮೈದಾ ಹಿಟ್ಟು 60 ಗ್ರಾಂ |
ಕಾರ್ನ್ ಪ್ಲೋರ್ 60 ಗ್ರಾಂ |
ಹುರಿಯಲು ತುಪ್ಪ ಅಥವಾ ಸಂಸ್ಕರಿಸಿದ ಎಣ್ಣೆ 250 – 300 ಮಿಲಿ |
ಹಾಲು 240 ಎಂ.ಎಲ್ |
ಉಪ್ಪು 1ಚಿಟಿಕೆ |
ಸಕ್ಕರೆ 250 ಗ್ರಾಂ |
ಕೇವ್ರಾ ನೀರು 3 ಹನಿಗಳು |
ನೀರು (ಬಳಕೆಯ ಪ್ರಕಾರ) |
ಕತ್ತರಿಸಿದ ಬಾದಾಮಿ, ಗೋಡಂಬಿ ಬೀಜಗಳು ಸರಿಸುಮಾರು 60 ಗ್ರಾಂ |
ಸಿದ್ಧಪಡಿಸುವ ವಿಧಾನ :
- ಮಧ್ಯಮ ಗಾತ್ರದ ಬಟ್ಟಲಿನಲ್ಲಿ ಸುಮೇರು ಅವರ ಹೆಪ್ಪುಗಟ್ಟಿದ ಪನೀರ್ ಅನ್ನು ತುರಿದುಕೊಳ್ಳಿ
- ಅದಕ್ಕೆ ಮೈದಾ ಮತ್ತು ಕಾರ್ನ್ ಫ್ಲಾರ್ ನ ಹಾಕಿ ಕಲಿಸಿಕೊಳ್ಳಿ.
- ನಂತರ, ಒಂದು ಮಿಕ್ಸರ್ ನಲ್ಲಿ ಹಾಲು ಮತ್ತು ಪನೀರ್ ಮಿಶ್ರಣವನ್ನು ನಯವಾದ ಇಡ್ಲಿ ಹಿಟ್ಟಿನ ಹದಕ್ಕೆ ಮಿಶ್ರಣ ಮಾಡಿಕೊಳ್ಳಿ.
- ಮತ್ತೊಂದು ನಾನ್-ಸ್ಟಿಕ್ ಕಡಾಯಿಯಲ್ಲಿ ಕರಿಯಲು ತುಪ್ಪ / ಎಣ್ಣೆಯನ್ನು ತಾಪಮಾನವು 160 * C ತಲುಪುವವರೆಗೆ ಕಾಯಿಸಿಕೊಳ್ಳಿ.
- ಸುಮಾರು 50 ಮಿಲಿಯಷ್ಟು ಮಿಕ್ಸಿ ಮಾಡಿಟ್ಟು ಕೊಂಡ ಸುಮೇರು ಪನೀರ್ ಮಿಶ್ರಣದ ಹಿಟ್ಟುನ್ನು ಚಿಕ್ಕ ಹಪ್ಪಳದ ಆಕಾರ ಮಾಡಿಕೊಂಡು ಎಣ್ಣೆಗೆ ಕರಿಯಲು ಹಾಕಿ. ಚಿನ್ನದ/ ಕಂದು ಬಣ್ಣ ಬರುವವರೆಗೆ ಅದನ್ನು ನಿಧಾನವಾಗಿ ತಿರುಗಿಸಿ ಡೀಪ್ ಫ್ರೈ ಮಾಡಿಕೊಳ್ಳಿ.
- ಎಣ್ಣೆಯನ್ನು ಹೀರಿಕೊಳ್ಳಲುಕಜ್ಜಾಯ/ಮಾಲ್ಪುವಾಗಳನ್ನು ಹುರಿದ ನಂತರ ಟಿಶ್ಯು ಪೇಪರ್ ಮೇಲೆ ಹಾಕಿ.
- ಅಷ್ಟರಲ್ಲಿ ಸಕ್ಕರೆ, ನೀರು ಬೆರೆಸಿ ನಾನ್-ಸ್ಟಿಕ್ ಪ್ಯಾನ್‌ನಲ್ಲಿ ಸಕ್ಕರೆ ಪಾಕವನ್ನು ತಯಾರಿಸಿಕೊಳ್ಳಿ, ಅದಕ್ಕೆ ಕೆವ್ರಾ ನೀರನ್ನು ಸೇರಿಸಿ.
- ಸಕ್ಕರೆ ಪಾಕ ಸಿದ್ಧವಾದ ನಂತರ, ಕಜ್ಜಾಯ/ಮಾಲ್ಪುವಾಗಳನ್ನುಸಕ್ಕರೆ ಪಾಕಕ್ಕೆ ಹಾಕಿ ಕನಿಷ್ಠ 30 ನಿಮಿಷಗಳ ಕಾಲ ಬಿಡಿ. ಕತ್ತರಿಸಿದ ಬಾದಾಮಿ, ಗೋಡಂಬಿ ಬೀಜಗಳಿಂದ ಅಲಂಕರಿಸಿಮತ್ತು ರುಚಿಯಾದ ಆಕರ್ಷಕವಾದ ಕಜ್ಜಾಯ/ಮಾಲ್ಪುವಾ ಸೇವಿಸಿ.
ಲೇಖಕರು: ಇಂದ್ರಜಿತ್ ಸಿಂಗ್, ಸುಮೇರು ಮುಖ್ಯಸ್ಥ ಚೆಫ್
ಚೀಫ್ ಇನ್ಚಾರ್ಜ್ ಇನ್ನೋವೇಶನ್ಸ್, ಇನ್ನೋವೇಟಿವ್ ಫುಡ್ಸ್ ಲಿ. ಸುಮೇರು ಬ್ರಾಂಡ್
Get in Touch With Us info@kalpa.news Whatsapp: 9481252093
Discussion about this post