ನಾಸ್ತಿಕ ವಾದಿ, ಪಾಷಂಡೀ ಗಂಜಿಗಳೇ ನಿಮಗೆ ಉತ್ತರವನ್ನು ಪ್ರಕೃತಿಯೇ ನೀಡುತ್ತಿದೆ. ಆದರೆ ನಿಮಗೆ ಏನಾದರೇನು ಹೇಳಿ? ನಿಮ್ಮಂತಹ ದರಿದ್ರರನ್ನು ವೇದಿಕೆ, ಮಾಧ್ಯಮಗಳಲ್ಲಿ ಕೂರಿಸಿಕೊಂಡು ಘಂಟೆಗಟ್ಟಳೆ ಕೊರೀತಾರಲ್ಲ ಅವರಿಗೆ ಉಗಿಬೇಕು. ಅದಕ್ಕೆ ತಕ್ಕಂತಹ ಜಾತ್ಯತೀತ ಮಂತ್ರ ಜಪಿಸುವ ಸರಕಾರಗಳು ನಿಮಗೆ ಕೃಪಾಪೋಷಿತ.
ಇಲ್ಲಿ ಕೇಳಿ ನೀವು ವಾದಿಸಿದ ಪಾಷಂಡಿ ವಾದದ ಪ್ರಮುಖಾಂಶಳಿವೆ ಓದಿ ನೋಡಿ:
- ಮೂಢ ನಂಬಿಕೆ ಎಂದು ತಲೆತಲಾಂತರದಿಂದ, ಅನುಭವೀ ವೈಜ್ಞಾನಿಕವಾಗಿ ಬಂದಂತಹ ಕೆಲ ಸಂಪ್ರದಾಯ ಆಚರಣೆಗಳನ್ನು ಖಂಡಿಸಿದ್ದು.
- ಶಬರಿಮಲೈಗೆ ಹೆಂಗಸರು(ಋತುಮಾನ ನಿಲ್ಲದ) ಹೋದರೆ ಏನಾಗುತ್ತೆ?
- ಪುರಾತನ ಕಾಲದಿಂದ ನಡೆದು ಬಂದಂತಹ ಕುಕ್ಕೇ ಸುಬ್ರಹ್ಮಣ್ಯದ ಮಡೆಸ್ನಾನವನ್ನು ಖಂಡಿಸಿದ್ದು.
- ಋಷಿ ಮುನಿಗಳಿಂದ ಪ್ರಣೀತವಾಗಿ ಬಂದಂತಹ ಯಾಗ ಯಜ್ಞಾದಿಗಳನ್ನು ಖಂಡಿಸಿ ಅವಹೇಳನ ಮಾಡಿದ್ದು.
- ಮಹಾಮೂರ್ಖ ಬೊಗಳುವಾನ, ಬಯಲಾದ ನಿಜಗುಣಾಂನಂದನಂತಹ ಮೂರ್ಖರು ಭಗವದ್ಗೀತೆ ಖಂಡಿಸಿ, ಸುಟ್ಟು ಆನಂದ ಪಟ್ಟದ್ದು.
- ಭಯೋತ್ಪಾದಕರನ್ನು ಕೊಂದರೆ ಅವರ ಪತ್ನಿಯರ ಬಗ್ಗೆ ರೋಧಿಸುವವರು.
- ವ್ಯವಹಾರಿಕವಾರಿಕವಾಗಿ ನಿಷ್ಠುರ ಕಟ್ಟಿಕೊಂಡು ಕೊಲೆಗೀಡಾದ ಹಿಂದೂ ದ್ವೇಷಿಗಳ ಸಾವಿಗೆ ಮರುಗಿ ಮೋದಿಯ ವಿರುದ್ಧ ಪ್ರತಿಭಟಿಸುವ ಬುದ್ಧಿಹೀನ ಜೀವಿಗಳು.
- ತುಳುನಾಡಿನ ಪರಂಪರಾಗತ ಭೂತ ಕೋಲಗಳನ್ನು ನಿಂದಿಸುವವರು.
- ಸಹಪಂಕ್ತಿ ಭೋಜನಕ್ಕೆ ಆಗ್ರಹಿಸಿ ಗಲಾಟೆ ಗೊಂದಲ ಎಬ್ಬಿಸುವವರು.
- ಮಠ ಮಾನ್ಯಗಳ ಯತಿಗಳನ್ನು ನಿಂದನೆ ಮಾಡುವವರು.
- ರಾಮಕೃಷ್ಣರು ಹೆಚ್ಚೇಕೆ ಸ್ವರ್ಗಸ್ಥರಾದ ವಾಜಪೇಯಿಯವರೂ ಗೋಮಾಂಸ ಭಕ್ಷಣೆ ಮಾಡಿದ್ದಾರೆ ಎನ್ನುತ್ತಾ ಟೌನ್ ಹಾಲಿನೆದುರು ಗಡ್ಡ ಬಿಟ್ಟ ಬುದ್ದಿ(ಹೀನ)ಜೀವಿಗಳಂತಹ ಮಹಾನ್ ಬುದ್ಧಿವಂತರು ಗೋಮಾಂಸ ಜಗಿದು ಚಟ ತೀರಿಸಿಕೊಂಡವರು.
- ಮೋದಿಯವರು ಕರ್ನಾಟಕದಲ್ಲಿ ಏನು ಚಟ ತೀರಿಸಿಕೊಳ್ಳಲು ಬಂದಿದ್ದಾರೆ ಎನ್ನುವ ಪ್ರಕಾಶ್ ರೈಯವರು.
ಇತ್ಯಾದಿ ಪಟ್ಟಿ ಮಾಡಲು ಹೊರಟರೆ ಸಾವಿರಾರು ಪುಟಗಳೇ ಬೇಕಾದೀತು. ಎಲ್ಲಿ ಪ್ರವಾಹ ಪೀಡಿತರಿಗಾಗಿ ಕಣ್ಣೀರು ಸುರಿಸಿದ್ದೀರಿ? ಎಲ್ಲಿ ಸ್ವಚ್ಛತೆಗಾಗಿ ಹೋರಾಡಿದ್ದೀರಿ?
ಅನೇಕ ಚಿತ್ರನಟರು ಸಹಾಯ ಹಸ್ತ ನೀಡಿದ್ದು ನಿಮಗೆ ಕಾಣುವುದಿಲ್ಲ. ಯಶ್ ನಂತಹ ಉತ್ತಮ ನಟರು ಪ್ರಜೆಗಳಿಗಾಗಿ ತನ್ನ ಸ್ವಂತ ಖರ್ಚಿನಲ್ಲಿ ಕೊಪ್ಪಳದಲ್ಲಿ ಕೆರೆಯನ್ನೇ ನಿರ್ಮಿಸಿ ಜನರ ಪ್ರೀತಿ ಸಂಪಾದಿಸಿದ್ದು ನಿಮಗೆ ಆದರ್ಶವೆನಿಸದು. ಜಗ್ಗೇಶರಂತಹ ಸಹೃದಯಿ ನಟರು ತುಳುನಾಡಿನ ಕಂಬಳ ಕಲೆಯನ್ನು ನಿಷೇಧಿಸಿದ್ದಕ್ಕೆ ಧ್ಬನಿ ಎತ್ತಿ ಖಂಡಿಸಿದ್ದು ನಿಮಗೆ ಕಾಣಲಿಲ್ಲ.
ಮುಖ್ಯಮಂತ್ರಿಗಳ ವೇದಿಕೆಯಲ್ಲೇ ಧರ್ಮದ್ರೋಹಿ ಟಿಪ್ಪುವಿನ ಗುಣಗಾನ ಮಾಡಿದ್ದು ಮಾತ್ರವಲ್ಲದೆ, ನಾಡ ದೊರೆ ಕೆಂಪೇಗೌಡರಿಗೆ ಅವಮಾನ ಮಾಡಿದ ಗಿರೀಶ್ ಕಾರ್ನಾಡರೇ ನಿಮಗೇನು ಕಡಿಮೆ ಮಾಡಿದ್ದಾರೆ ಕರ್ನಾಟಕದ ಸತ್ಪ್ರಜೆಗಳು?
ಯಾರೋ ಎಸೆವ ರೊಟ್ಟಿಗಾಗಿಯೇ ನಿಮ್ಮ ಜೀವನವಲ್ಲದೆ, ಪ್ರಕೃತಿಗಾಗಿ, ಪ್ರಜೆಗಳಿಗಾಗಿ ಖಂಡಿತವಾಗಿಯೂ ಇಲ್ಲ. ಅದೇ ಪ್ರಜೆಗಳಿಂದಾಗಿ ನಿಮಗೆ ಜ್ಞಾನಪೀಠದವರೆಗೂ ಪ್ರಶಂಸೆಗಳು ಬಂದಿದ್ದು ಎಂಬುದನ್ನು ಮರೆತು, ಜನರ ಭಾವನೆಗಳೊಡನೆ ಆಟವಾಡಿದ್ದೀರಿ. ಇದು ನಮ್ಮ ದುರಂತ ಮಾತ್ರವಲ್ಲ, ನಿಮ್ಮ ನಾಶಕ್ಕೂ ಒಂದು ಕಾರಣವೂ ಆಗುತ್ತದೆ. ನಿಮ್ಮ ಕೀರ್ತಿ ಗೌರವಗಳನ್ನು ಪ್ರಜೆಗಳು ಏರಿಸಿದ್ದರೇ ಹೊರತು ಹಾಳುಮಾಡಿಕೊಂಡಿಲ್ಲ. ನೀವೆ ಕೈಯಾರೆ ನಾಶಮಾಡಿಕೊಂಡಿದ್ದೀರಿ. ನಿಮಗೆ ಶಾಶ್ವತವಾಗಿ ಪ್ರಜೆಗಳ ಹೃದಯದಲ್ಲಿ ಇನ್ನು ಸ್ಥಾನ ಕೊಡೋದೇ ಇಲ್ಲ ಬಿಡಿ.
ರಾಷ್ಟ್ರದ್ವಜಕ್ಕೇ ಅವಮಾನ ಮಾಡಿದವರಿಗೆ ಬೆಂಬಲ ನೀಡುವವರು ನೀವು. ವಂದೇಮಾತರಂ ದೇಶಭಕ್ತಿ ಗೀತೆಯನ್ನು ಹಾಡದಂತೆ ಪ್ರೇರೇಪಣೆ ನೀಡುವ ನೀವು ರಾಷ್ಟ್ರಕ್ಕಾಗಿ ಏನು ತ್ಯಾಗ ಮಾಡಿದ್ದೀರಿ ಎಂಬುದನ್ನು ತಿಳಿಸಿಬಿಡಿ.
ಒಬ್ಬ ಲಾಭಿ ಮಾಡಿ ಕಾರಂತ ಪ್ರಶಸ್ತಿ ಕಿತ್ತುಕೊಂಡ. ಇನ್ನೊಬ್ಬ ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡ. ಈ ರೀತಿ ಮಾಡಿದ್ದರಿಂದ ನಿಮ್ಮ ಅಂತರಾತ್ಮವು ತೃಪ್ತಿಪಟ್ಟಿದೆಯೇ? ಅದನ್ನು ತಿಳಿಯುವ ನಿಮ್ಮಂತಹ ಭಿಕ್ಷುಕರಿಗೆ ಏನು ಅರ್ಹತೆ ಇದೆ?
-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post