ಕಲ್ಪ ಮೀಡಿಯಾ ಹೌಸ್ | ಕೋಲಾರ |
ಕಬ್ಬಿನ ಹಾಲು ತೆಗೆಯುವ ಯಂತ್ರಕ್ಕೆ ಬುರ್ಖಾ ಸಿಲುಕಿ ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆಜಿಎಫ್ ನಗರದ ರಾಬರ್ಟ್‍ಸನ್ ಪೇಟೆಯಲ್ಲಿ ನಡೆದಿದೆ.
ಕೌಸರ್ ಬೇಗ್ (37) ಮೃತ ಮಹಿಳೆಯಾಗಿದ್ದು, ಇಂದು ಮುಂಜಾನೆ ತಮ್ಮದೆ ಕಬ್ಬಿನ ಹಾಲು ಮಾರಾಟ ಮಾಡುವ ಅಂಗಡಿಗೆ ಬಂದಿದ್ದರು. ಈ ವೇಳೆ ಕೌಸರ್ ಬೇಗ್ ಧರಿಸಿದ್ದ ಬುರ್ಖಾ ಕಬ್ಬಿನ ಯಂತ್ರಕ್ಕೆ ಸಿಲುಕಿದ್ದು, ಅದನ್ನು ತೆಗೆಯಲಾದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ರಾಬರ್ಟ್‍ಸನ್ ಪೇಟೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
Also read: ಶಿಕಾರಿಪುರ: ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾರ್ಯ ಮೆಚ್ಚಿ ಬಿಜೆಪಿ ಸೇರ್ಪಡೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post