ಕಲ್ಪ ಮೀಡಿಯಾ ಹೌಸ್ | ಕೋಲ್ಕತ್ತಾ |
ಸಲಿಂಗಕಾಮಿಗಳು ಎಂದು ಅನುಮಾನಿಸಿ ಇಬ್ಬರು ಮಹಿಳೆಯರ ಮೇಲೆ ಮೂವರು ಪುರುಷರು ಬಿಸಿ ಕಬ್ಬಿಣದ ರಾಡ್’ನಿಂದ ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ಮಹಿಳೆಯರನ್ನು ಪುರುಷರು ಲೈಂಗಿಕ ಪ್ರವೃತ್ತಿಗಾಗಿ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.

Also read: ಸಾಲ ಮರುಪಾವತಿ ಸಮಸ್ಯೆ ಬಗೆಹರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ: ಯೋಗೇಶ್
ಅಲ್ಲದೇ, ಮೂವರು ಪುರುಷರು ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾರೆ. ಆದರೆ ಇಬ್ಬರು ಸಂತ್ರಸ್ತೆಯರು ಸ್ಥಳದಿಂದ ತಪ್ಪಿಸಿಕೊಂಡು ಹೋಗಿ, ಹೊಲದಲ್ಲಿ ಅಡಗಿ ಕೂತಿದ್ದು, ಇಬ್ಬರ ಮೇಲೆ ಬೆಂಕಿ ಕಡ್ಡಿ ಹಾಗೂ ಮದ್ಯದ ಬಾಟಲಿಗಳಿಂದಲೂ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.












Discussion about this post