ಕಲ್ಪ ಮೀಡಿಯಾ ಹೌಸ್ | ಕೂನೂರು |
ಇಂದು ಮಧ್ಯಾಹ್ನ ಪಥನಗೊಂಡ ಸೇನಾ ಹೆಲಿಕಾಪ್ಟರ್’ನಲ್ಲಿದ್ದ 14 ಮಂದಿಯಲ್ಲಿ 11 ಮಂದಿ ಅಧಿಕಾರಿಗಳು ಮೃತರಾಗಿದ್ದಾರೆ.
ಈ ಕುರಿತಂತೆ ಅಧಿಕೃತ ಘೋಷಣೆಯಾಗಿದ್ದು, ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರೊಂದಿಗೆ ಸಂಚರಿಸುತ್ತಿದ್ದ 13 ಮಂದಿ ಅಧಿಕಾರಿಗಳಲ್ಲಿ 11 ಮಂದಿ ಧಾರುಣ ಸಾವನ್ನಪ್ಪಿದ್ದಾರೆ. ರಾವತ್ ಸೇರಿ ಇನ್ನುಳಿದ ಮೂವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇವರುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ರಾಜನಾಥ ಸಿಂಗ್ ಭೇಟಿ:
ಇನ್ನು, ಘಟನಾ ವಿಚಾರ ತಿಳಿದ ನಂತರ ಸಂಸತ್’ಗೆ ವಿಷಯ ತಿಳಿಸಿ, ಪ್ರಧಾನಿಯವರೊಂದಿಗೆ ಚರ್ಚಿಸಿದ ನಂತರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಹೆಲಿಕಾಪ್ಟರ್ ಪಥನಗೊಂಡ ಸ್ಥಳಕ್ಕೆ ಭೇಟಿ ನೀಡುವ ಸಲುವಾಗಿ ಹೊರಟಿದ್ದಾರೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post