No Result
View All Result
26 ವರ್ಷದ ಯುವಕನಿಗೆ ಮರುಜೀವ ಕೊಟ್ಟ ಮೆಡಿಕವರ್ ಆಸ್ಪತ್ರೆ | ಏನಾಗಿತ್ತು ಯುವಕನಿಗೆ?
English Articles

Critical Condition Turned Around with Timely Medical Intervention

by ಕಲ್ಪ ನ್ಯೂಸ್
March 27, 2026
0

Kalpa Media House  |  Bengaluru(WhiteFiled)  | A 26-year-old man from West Bengal, who had been suffering from a serious condition...

Read moreDetails
Yogada Satsang Society brings out Kannada version on Kriya Yoga today

Yogada Satsang Society brings out Kannada version on Kriya Yoga today

March 25, 2026
Sagara Engulfed In The Ocean of Music

Sagara Engulfed In The Ocean of Music

March 23, 2026
MAHE Introduces ‘MAGIC’ to Power AI-Driven Academic and Administrative Transformation

MAHE Introduces ‘MAGIC’ to Power AI-Driven Academic and Administrative Transformation

March 23, 2026
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

March 18, 2026
  • Advertise With Us
  • Grievances
  • About Us
  • Contact Us
Friday, March 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಕೊಪ್ಪಳ

ಕೊಪ್ಪಳದ ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ 49 ನೆಯ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
November 7, 2020
in ಕೊಪ್ಪಳ
0
ಕೊಪ್ಪಳದ ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ 49 ನೆಯ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಕೊಪ್ಪಳ: ಇಲ್ಲಿನ ಹೆಸರಾಂತ ಕಾರ್ಖಾನೆಗಳಲ್ಲಿ ಪ್ರಮುಖವಾದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ರಾಷ್ಟ್ರೀಯ ಸುರಕ್ಷತಾ ಸಪ್ತಾಹವನ್ನು ಆಚರಿಸಲಾಯಿತು.

ಕಾರ್ಖಾನೆ ಪ್ರಾರಂಭದಿಂದಲೂ ಕಾರ್ಖಾನೆಯ ಅಭಿವೃದ್ಧಿಯ ಜೊತೆ ಜೂತೆಗೆ ಉದ್ಯೋಗಿಗಳಿಗೆ ಮತ್ತು ಎಲ್ಲಾ ಕಾರ್ಮಿಕರ ಸುರಕ್ಷತೆ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗಾಗಿ ಕೆಲಸ ಮಾಡಲಾಗುತ್ತಿದೆ. ಪ್ರಾರಂಭದಿಂದಲೂ ಅಂದರೆ 1993 ರಿಂದಲೂ ಪ್ರತಿವರ್ಷವೂ ಮಾರ್ಚ್ 4 ರಂದು ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನು ಆಚರಿಸಲಾಯಿತು.

ಕಳೆದ 13 ವರ್ಷದಲ್ಲಿ ಗುಲ್ಬರ್ಗ ವಲಯ ಮತ್ತು ಬಳ್ಳಾರಿ ಕೊಪ್ಪಳ ವಲಯ ಸುರಕ್ಷತಾ ಸಮಿತಿಯ ಸಹಯೋಗದಿಂದ ವಲಯ ಮಟ್ಟದಲ್ಲಿ ಸುರಕ್ಷತಾ ದಿನಾಚರಣೆಯನ್ನು ಆಚರಿಸಲಾಗಿದೆ. 2006 07 ನೇ ಸಾಲಿನಲ್ಲಿ ಮೆ॥ ಜಿಂದಾಲ್ ಕಾರ್ಖಾನೆಯ ಸಹಾಯದಿಂದ ಒಂದು ಬಾರಿ ರಾಜ್ಯ ಮಟ್ಟದ ಸುರಕ್ಷತಾ ದಿನಾಚರಣೆಯನ್ನು ಆಚರಿಸಲಾಗಿದೆ. ಇದರ ಮುಖ್ಯ ಉದ್ದೇಶ ಜನಸಾಮಾನ್ಯರಿಗೆ, ಕಾರ್ಮಿಕರಿಗೆ ಮತ್ತು ಉದ್ಯೋಗಿಗಳಿಗೆ ಸುರಕ್ಷತೆ ಬಗ್ಗೆ ಅರಿವನ್ನು ಮೂಡಿಸುವುದರ ಮೂಲಕ ಜಾಗೃತಿ ಮೂಡಿಸುವ ಒಂದು ಪ್ರಯತ್ನ ಮತ್ತು ಕಾರ್ಖಾನೆಗಳಲ್ಲಿ ಅಪಘಾತವನ್ನು ತಗ್ಗಿಸಿ, ಶೂನ್ಯ ಅಪಘಾತಕ್ಕೆ ತರುವುದು ಮುಖ್ಯ ಉದ್ದೇಶ ಹೊಂದಿದೆ.

ಇನ್ನು, ಈ ಬಾರಿ ಆಯೋಜಿಸಲಾಗಿದ್ದ 49ನೆಯ ಸುರಕ್ಷತಾ ಸಪ್ತಾಹದ ಸಮಾರೋಪ ವಿಭಿನ್ನ ರೀತಿಯಲ್ಲಿ ನಿನ್ನೆ ನಡೆಯಿತು.

ಪ್ರತಿದಿನ ಸುರಕ್ಷತಾ ಪ್ರತಿಜ್ಞೆ, ಸುರಕ್ಷತಾ ಕಾರ್ಯಸ್ಥಾನದ ಬಗ್ಗೆ ಒಟ್ಟಾಗಿ ಸೇರಿ ಮಾತನಾಡುವುದು, ವಿಭಾಗಗಳಲ್ಲಿ ಅಸುರಕ್ಷಿತ ಕಾರ್ಯ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸುವುದು, ಹಿರಿಯ ಆಡಳಿತ ಅಧಿಕಾರಿಗಳ ಸಮೇತ ವಿಭಾಗಳ ವೀಕ್ಷಣೆ ಮಾಡಿ ಸುರಕ್ಷತೆ ಬಗ್ಗೆ ಸಲಹೆ ಪಡೆಯುವುದರ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಯಿತು.

ಕೊಪ್ಪಳ ವಲಯ ಕಾರ್ಖಾನೆಯ ಸಹಾಯಕ ನಿರ್ದೇಶಕರಾದ ಶ್ರೀ ವಿಜಯಕುಮಾರ್, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯ ಪ್ರೆಸಿಡೆಂಟ್ ಶ್ರೀ ಎನ್.ಬಿ.ಏಕತಾರೆ ಬೀಡುಕಬ್ಬಿಣ ವಿಭಾಗದ ಉಪಾಧ್ಯಕ್ಷರಾದ ಶ್ರೀ ಎಂ.ಜಿ. ನಾಗರಾಜ್, ಎರಕ ವಿಭಾಗದ ಉಪಾಧ್ಯಕ್ಷರಾದ ಶ್ರೀ ಸಿ. ರಮೇಶ್ ಮತ್ತು ಕಾರ್ಮಿಕ ಮುಖಂಡರಾದ ಶ್ರೀ ಶರಣಪ್ಪ ಇವರುಗಳನ್ನು ವಿಶೇಷವಾಗಿ ಆಹ್ವಾನಿಸಿ ರಾಷ್ಟ್ರೀಯ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭ ನಡೆಸಲಾಯಿತು.

ಸಭೆಯಲ್ಲಿ ಎಲ್ಲಾ ವಿಭಾಗದ ಹಿರಿಯ ಅಧಿಕಾರಿಗಳು, ಕಾರ್ಮಿಕ ವರ್ಗ, ಆಡಳಿತ ಮಂಡಳಿಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದರು.

ಸುರಕ್ಷತಾ ವಿಭಾಗದ ಹಿರಿಯ ಅಧಿಕಾರಿಗಳಾದ ಶ್ರೀ ಮುರಳಿಧರ್ ನಾಡಿಗೇರ್ ಅವರು ಕಳೆದ 2019-20 ನೆಯ ಸಾಲಿನ ಸುರಕ್ಷತಾ ವರದಿಯನ್ನು ಮಂಡಿಸಿದರು. ದೀರ್ಘವಾದ ಸುರಕ್ಷತಾ ವರದಿಯಲ್ಲಿ ಕಾರ್ಖಾನೆಯಲ್ಲಿ ಸುರಕ್ಷತೆಗಾಗಿ ಮಾಡಲಾದ ಬದಲಾವಣೆ, ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಸುರಕ್ಷತೆಗೆ ಸಂಬಂಧಿಸಿದಂತಹ ಯೋಜನೆಗಳು ಮತ್ತು ಅಣುಕು ಪ್ರದರ್ಶನ ಹಾಗೂ ಅಪಘಾತಗಳ ಬಗ್ಗೆ ಕೂಲಂಕಷವಾಗಿ ತಿಳಿಸಿಕೊಟ್ಟರು.

ಬೀಡುಕಬ್ಬಿಣ ವಿಭಾಗದ ಉಪಾಧ್ಯಕ್ಷರಾದ ಎಂ.ಜಿ. ನಾಗರಾಜ್ ಅವರು ಮಾತನಾಡಿ, ತಮ್ಮ ವಿಭಾಗದ ವ್ಯಾಪ್ತಿಯಲ್ಲಿ ಹಾಗೂ ಹೊಸದಾಗಿ ರೂಪಿತವಾದಂತಹ ಪ್ರಾಜೆಕ್ಟ್‌’ಗಳಲ್ಲಿ ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಿರುವುದರ ಬಗ್ಗೆ, ಅಭಿವೃದ್ಧಿ ಕಾರ್ಯಗಳು ಹಾಗೂ ಸುರಕ್ಷತಾ
ರೀತಿನೀತಿಗಳನ್ನು ಕೂಲಂಕಶವಾಗಿ ತಿಳಿಸಿಕೊಟ್ಟರು ಹಾಗೂ ಕೆಲವು ಅಪಘಾತಗಳನ್ನು ವಿವರಿಸಿ ತಿಳಿಸಿದರು.

ಎರಕ ವಿಭಾಗದ ಉಪಾಧ್ಯಕ್ಷರಾದ ಸಿ. ರಮೇಶ್ ಮಾತನಾಡಿ, ತಮ್ಮ ಫೌಂಡ್ರಿ ವಿಭಾಗದಲ್ಲಿ ಕಳೆದ ವರ್ಷ ಮಾಡಲಾದ ಬದಲಾವಣೆಗಳು ಸುರಕ್ಷತಾ ಯೋಜನೆಗಳು ಹಾಗೂ ಹೊಸ ಹೊಸ ಯೋಜನೆಗಳನ್ನು ವಿವರವಾಗಿ ತಿಳಿಸುವುದರ ಮೂಲಕ ಆ ಭಾಗದಲ್ಲಿ ಮಾಡಲಾದ ಯೋಜನೆಗಳನ್ನು ತಿಳಿಸಿಕೊಟ್ಟರು.

ಕೊಪ್ಪಳ ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಸ್ವಾಸ್ಥ್ಯ ಯೋಜನೆಗಳ ಸಹಾಯಕ ನಿರ್ದೇಶಕ ಶ್ರೀ ವಿಜಯ್ ಕುಮಾರ್ ಮಾತನಾಡಿ, ಸರ್ಕಾರದ ಯೋಜನೆಗಳು ಮತ್ತು ಕಾರ್ಖಾನೆಗಳಲ್ಲಿ ಆಗುವಂತಹ ಅಪಘಾತಗಳ ಬಗ್ಗೆ ಮನವರಿಕೆ ಮಾಡಿಕೊಡುವುದರ ಮೂಲಕ ಭಾಗವಹಿಸಿದ ಎಲ್ಲರಿಗೂ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.

ಕಾರ್ಖಾನೆಯ ಪ್ರೆಸಿಡೆಂಟ್ ಶ್ರೀ ಎನ್.ಬಿ. ಏಕತಾರೆ ಅವರು ಮಾತನಾಡಿ, ಕಾರ್ಖಾನೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ನಿಟ್ಟಿನಲ್ಲಿ ಸುರಕ್ಷತೆಗೆ ಮಹತ್ವವಾದ ಸ್ಥಾನವನ್ನು ನೀಡಲಾಗಿದೆ. ಅಪಘಾತಗಳ ಪ್ರಮಾಣ ಕಡಿಮೆಯಾಗಿದೆ. ಆದರೂ ಅದನ್ನು ಶೂನ್ಯ ಅಪಘಾತಕ್ಕೆ ತರುವ ಜವಾಬ್ದಾರಿ ಎಲ್ಲರ ಮೇಲೆ ಇರುತ್ತದೆ. ಕಾರಣ ತಾವುಗಳು ಶ್ರಮಿಸಬೇಕು, ಸುರಕ್ಷಿತವಾಗಿ ಕಾರ್ಯನಿರ್ವಹಿಸಿ ಕಂಪನಿಯನ್ನು ಉತ್ತುಂಗಕ್ಕೇರಿಸಲು ಹೋರಾಡಬೇಕು ಎಂದರು.

ಈ ಸಂದರ್ಭದಲ್ಲಿ ಕಾರ್ಮಿಕರಿಗೆ ಹಾಗೂ ಗುತ್ತಿಗೆ ಕಾರ್ಮಿಕರಿಗೆ ಮತ್ತು ಶಿಶಿಕ್ಷುಕರಿಗೆ ಉತ್ತಮ ಸುರಕ್ಷ ಪ್ರಶಸ್ತಿಗಳನ್ನು ನೀಡಲಾಯಿತು, ಪ್ರಾಜೆಕ್ಟ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆದಾರರ ಸುರಕ್ಷತಾ ಅಧಿಕಾರಿಗಳಿಗೆ ಪ್ರಶಂಸಾ ಪತ್ರವನ್ನು ನೀಡಲಾಯಿತು.

49 ನೆಯ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯ ಅಂಗವಾಗಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ಉದ್ಯೋಗಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ನೀಡಲಾಯಿತು.

ಅಚ್ಚುಕಟ್ಟಾದ ಸಭೆಯನ್ನು ಸುರಕ್ಷತಾ ವಿಭಾಗದ ಅಧಿಕಾರಿಗಳು ಮತ್ತು ಮಾನವ ಸಂಪನ್ಮೂಲ ವಿಭಾಗದವರು ಆಯೋಜಿಸಿದ್ದರು.

(ವರದಿ: ಮುರಳೀಧರ್ ನಾಡಿಗೇರ್, ಕೊಪ್ಪಳ)

Get in Touch With Us info@kalpa.news Whatsapp: 9481252093

Tags: Bayalu Seeme NewsFactoryKannada News Websitekirloskar ferrous industries limitedKoppalLatestNewsKannadaNational Safety Weekಕಾರ್ಖಾನೆಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ಕೊಪ್ಪಳರಾಷ್ಟ್ರೀಯ ಸುರಕ್ಷತಾ ಸಪ್ತಾಹ
Share213Tweet123Send
Previous Post

ಕೊರೋನಾ ಭೀತಿ: ಮಾರ್ಚ್ 23ರೊಳಗೆ ಎಲ್ಲ ವಾರ್ಷಿಕ ಪರೀಕ್ಷೆ ಮುಕ್ತಾಯಕ್ಕೆ ಆದೇಶ, ನಾಳೆಯಿಂದಲೇ ಆರಂಭ

Next Post

ರಸ್ತೆ ಕಳಪೆ ಕಾಮಗಾರಿ ವಿರುದ್ಧ ಭದ್ರಾವತಿಯಲ್ಲಿ ಭುಗಿಲೆದ್ದ ಆಕ್ರೋಶ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ರಸ್ತೆ ಕಳಪೆ ಕಾಮಗಾರಿ ವಿರುದ್ಧ ಭದ್ರಾವತಿಯಲ್ಲಿ ಭುಗಿಲೆದ್ದ ಆಕ್ರೋಶ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಶ್ರೀ ರಾಮನವಮಿ | ಭಕ್ತರಿಗೆ ಕೋಸಂಬರಿ, ಪಾನಕ ವಿತರಣೆ

ಶ್ರೀ ರಾಮನವಮಿ | ಭಕ್ತರಿಗೆ ಕೋಸಂಬರಿ, ಪಾನಕ ವಿತರಣೆ

March 27, 2026
ಮಾ.30ರಂದು ರಾಷ್ಟ್ರೀಯ ಯೋಗೋತ್ಸವ ವಿಶೇಷ ಕಾರ್ಯಕ್ರಮ: ಡಾ. ರಾಘವೇಂದ್ರ ಪೈ

ಮಾ.30ರಂದು ರಾಷ್ಟ್ರೀಯ ಯೋಗೋತ್ಸವ ವಿಶೇಷ ಕಾರ್ಯಕ್ರಮ: ಡಾ. ರಾಘವೇಂದ್ರ ಪೈ

March 27, 2026
ಏ.4 | ವಾಸವಿ ಮಹಿಳಾ ಸಂಘದ 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮ

ಏ.4 | ವಾಸವಿ ಮಹಿಳಾ ಸಂಘದ 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮ

March 27, 2026
ಲೋಕಕಲ್ಯಾಣರ್ಥ ಮಾ.30ರಂದು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ

ಲೋಕಕಲ್ಯಾಣರ್ಥ ಮಾ.30ರಂದು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ

March 27, 2026
ಉದ್ಯೋಗಖಾತ್ರಿ ಯೋಜನೆ ರದ್ದು | ಗ್ರಾಪಂ ಮಟ್ಟದಿಂದ ಕಾಂಗ್ರೆಸ್ ಹೋರಾಟ | ಸಚಿವ ಮಧುಬಂಗಾರಪ್ಪ

SSLC ಪರೀಕ್ಷೆ ಅಂತಿಮ ಅಂಕ ಕುರಿತು ಶಿಕ್ಷಣ ಸಚಿವರ ಬಿಗ್ ಸ್ಟೇಟ್ಮೆಂಟ್

March 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL