ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ: ಪರಿಸರ ರಕ್ಷಣೆ, ಆರೋಗ್ಯ ಮತ್ತು ಶಿಕ್ಷಣ ಇದು ಕಿರ್ಲೋಸ್ಕರ್ ಕಾರ್ಖಾನೆಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಉದ್ದೇಶ, ಈ ನಿಟ್ಟಿನಲ್ಲಿ ಒಂದು ಹೆಜ್ಜೆಯನ್ನು ಮುಂದಿಟ್ಟ ಕಿರ್ಲೋಸ್ಕರ್ ಕಂಪನಿ ಇಂದು ಕಡು ಬಡತನ ಅನುಭವಿಸುತ್ತಿರುವ ಕುಟುಂಬಗಳನ್ನು ಆಯ್ಕೆ ಮಾಡಿ, ಕೊಪ್ಪಳದ ಸರ್ವೋದಯ ಟ್ರಸ್ಟ್ ಸಹಕಾರದೊಂದಿಗೆ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ಕೊಪ್ಪಳದ ವಿವಿಧ ವಾರ್ಡಗಳಲ್ಲಿ ಬಡ ಕುಟುಂಬಗಳಿಗೆ ಪ್ರತಿ ದನ ಅನುಕೂಲವಾಗುವ ಪಡಿತರ ಧಾನ್ಯ ವಿತರಣೆ ಮಾಡಲಾಯಿತು.
ಕೊಪ್ಪಳದ ವಾರ್ಡ್ ಸಂಖ್ಯೆ 22, ವಾರ್ಡ್ ಸಂಖ್ಯೆ 5 ಮತ್ತು ವಾರ್ಡ್ ಸಂಖ್ಯೆ 12 ರಲ್ಲಿ ಮೂರು ಪ್ರದೇಶಗಳ ಬಡವರಿಗೆ ಪಡಿತರವನ್ನು ವಿತರಿಸಿರುವುದಾಗಿ ಹಿರಿಯ ಉಪಾಧ್ಯಕ್ಷರಾದ ಪಿ. ನಾರಾಯಣ ತಿಳಿಸಿದರು. ಕಿರ್ಲೋಸ್ಕರ್ ಕಂಪನಿಯ ಉದವ್ ಕುಲಕರ್ಣಿ ಮತ್ತು ಮನೋಜ್ ಶ್ರೀವಾಸ್ ಉಪಸ್ಥಿತರಿದ್ದರು.
ಸರ್ವೋದಯ ಸಂಸ್ಥೆಯ ಕೊಪ್ಪಳ, ಅಧಿಕಾರಿಗಳಾದ ನಾಗರಾಜ್ ದೇಸಾಯಿ, ಎಂ.ಎಸ್. ದೀಪಾ ರಾಜೇಶ್, ಮತ್ತು ಟೌನ್ ಸರ್ಕಲ್ ಇನ್ಸ್‌ಪೆಕ್ಟರ್ ಮೌನೇಶ್ ಪಾಟೀಲ್ ಅವರು ಈ ಸಂಧರ್ಭಲಲು ಉಪಸ್ಥಿತರಿದ್ದರು. ಒಟ್ಟು 200 ಮನೆಗಳಿಗೆ ಪಡಿತರವನ್ನು ವಿತರಿಸಲಾಯಿತು. ಕಳೆದ ನಾಲ್ಕು ದಿನಗಳಿಂದ ಕೂಪ್ಪಳದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಕರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಕಳೆದ ವಾರ ಹೊಸಪೇಟೆಯಲ್ಲಿ ಮೂವರಿಗೆ ಕೊರೊನಾ ವೈರಸ್ ದೃಢಪಡುತ್ತಿದ್ದಂತೆ, ಕೊಪ್ಪಳ ಜಿಲ್ಲೆಯ ಜನತೆಯಲ್ಲಿ ಆತಂಕ ಮೂಡಿ, ಹೊಸಪೇಟೆಯಿಂದ ಬರುವ ವಾಹನಗಳ ತಡೆಯುವುದರ ಮೂಲಕ ಎಲ್ಲಾ ವಾಹನಗಳನ್ನು ಚಕ್ ಮಾಡಿ ಪಾಸ್ ಇದ್ದರೆ ಮಾತ್ರ ಕೊಪ್ಪಳ ಭಾಗಕ್ಕೆ ಬಿಡುವ ವ್ಯವಸ್ಥೆ ಮಾಡಿರುತ್ತಾರೆ. ಜಿಲ್ಲೆಯ ಗಡಿಭಾಗದಿಂದ ಬರೀ 15 ಕಿಮೀ ಅಂತರದ ಹೊಸಪೇಟೆಯಲ್ಲಿ ಮೂವರಿಗೆ ಕೊರೋನಾ ವೈರಸ್ ದೃಢಪಡುತ್ತಿದ್ದಂತೆ ಜಿಲ್ಲೆಯ ಜನತೆಯಲ್ಲಿ ಆತಂಕ ಮನೆಮಾಡಿದೆ. ಬಳ್ಳಾರಿ ಜಿಲ್ಲೆಗೆ ಹೊಸಪೇಟೆ ಸೇರಿದ್ದರೂ ಕೊಪ್ಪಳದ ಜತೆ ಹೆಚ್ವಿನ ಸಂದಂಧ ಹೊಂದಿದೆ. ವ್ಯಾಪಾರ, ವಹಿವಾಟು, ಉದ್ಯೋಗ ಮತ್ತು ಕಾರ್ಮಿಕರು ದಿನ ಪ್ರತಿ ಓಡಾಡುತ್ತಾರೆ. ಈ ಭಾಗದ ಕೈಗಾರಿಕೆ, ವ್ಯಾಪಾರ ಹಾಗೂ ಸರಕಾರಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹೊಸಪೇಟೆಯಲ್ಲಿ ಮನೆ ಮಾಡಿದ್ದಾರೆ.
ಜಿಲ್ಲೆಗೆ ಈವರೆಗೆ ವಿದೇಶದಿಂದ ಆಗಮಿಸಿದ 79 ಜನರ ಮೇಲೆ ನಿಗಾ ವಹಿಸಲಾಗಿದೆ. ಈ ಪೈಕಿ 45 ಜನರು 14 ದಿನದ ನಿಗಾ ಪೂರ್ಣಗೊಳಿಸಿದ್ದಾರೆ. 17 ಜನ, 28 ದಿನದ ಐಸೋಲೇಶನ್ ಪೂರ್ಣಗೊಳಿಸಿದ್ದು, ಕೊರೊನಾ ಶಂಕಿತ ಇಬ್ಬರ ಗಂಟಲಿನ ದ್ರವ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ ಒಬ್ಬ ಶಂಕಿತನ ವರದಿ ನೆಗಟಿವ್ ಬಂದಿದ್ದು, ಮತ್ತೊಬ್ಬರ ವರದಿಗಾಗಿ ಕಾಯಲಾಗುತ್ತಿದೆ. ಹೋಂ ಕ್ವಾರಂಟೈನ್‌ನಲ್ಲಿ 34 ಜನರಿದ್ದಾರೆ.
ಈ ಸಂಧರ್ಭದಲ್ಲಿ ಕೊಪ್ಪಳ ಜಿಲ್ಲೆಯ ಹೆಸರಾಂತ ಕಾರ್ಖಾನೆಗಳಾದ ಕಿರ್ಲೋರ್ಸ್ಕ, ಹೊಸಪೇಟೆ ಸ್ಟೀಲ್ಸ್, ಅಲ್ಟಾಟೇಕ್ ಸಿಮೆಂಡ್, ಎಕ್ಸ್ ಇಂಡಿಯಾ, ಎಂಎಸ್’ಪಿಎಲ್, ಎಂ.ಎಸ್. ಮೆಟಲ್ ಇನ್ನೂ ಅನೇಕ ಕಾರ್ಖಾನೆಗಳು ಕಾರ್ಖಾನೆಗಳನ್ನು ಸ್ಥಗಿತ ಮಾಡಿ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಯ ಜೂತೆ ಕೈಜೋಡಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಇರುವ ಲಾಕ್ ಡೌನ್ ಮುಂದುವರೆದರೆ ಕಾರ್ಖಾನೆಗಳಿಗೆ ತುಂಬಾ ಕಷ್ಟ ಎದುರಾಗುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಪ್ರೋತ್ಸಾಹ ನೀಡಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ ಎರಡು ಘಂಟೆಗಳ ಕಾಲ ಸ್ವಲ್ಪ ಮಟ್ಟಿಗೆ ಜಿಲ್ಲಾಡಳಿತ ಸಡಿಲ ಗೊಳಿಸಿ ಸಾರ್ವಜನಿಕರಿಗೆ ದಿನಂಪ್ರತಿ ಬೇಕಾಗುವ ಪದಾರ್ಥಗಳನ್ನು ಖರೀದಿಸಲು ಅನುಕೂಲ ಮಾಡಿದ್ದಾರೆ.
ವರದಿ: ಮುರುಳೀಧರ್ ನಾಡಿಗೇರ್, ಕೊಪ್ಪಳ
Get in Touch With Us info@kalpa.news Whatsapp: 9481252093
Discussion about this post