ಕಲ್ಪ ಮೀಡಿಯಾ ಹೌಸ್
ಕೊಪ್ಪಳ : ಹಿಂದೂ ದೇವಾನು ದೇವತೆಗಳಲ್ಲಿ ಹನುಮನನ್ನು ಅತ್ಯಂತ ಶಕ್ತಿಸಾಲಿ ಎಂದು ದೇಶದಾದ್ಯಂತ ಪೂಜಿಸುತ್ತಾರೆ. ಇಂದು ಮಂಗಳವಾರ ಹನುಮ ಜಯಂತಿಯನ್ನು ಕೊವೀಡ್ ಹಿನ್ನೆಲೆಯಲ್ಲಿ ಮತ್ತು ಸರ್ಕಾರದ ಆದೇಶದಂತೆ ಅಂಜನಾದ್ರಿ ಬೆಟ್ಟದ ಮೇಲೆ ಆಚರಿಸಲಾಯಿತು.
ಹನುಮನಿಗೆ ವಾಯುಪುತ್ರ, ಕಪಿವೀರ, ಅಂಜನೇಯ, ಅಂಜನಿ ಪುತ್ರ, ಭಜರಂಗಬಲಿ ಎಂಬೆಲ್ಲಾ ಹೆಸುರುಗಳಿಂದ ಕರೆಯುತ್ತಾರೆ. ಜಾತಿ, ಮತ, ಪಂಥಗಳ ಬೇಧವಿಲ್ಲದ ಆಂಜನೇಯನಿಗೆ ತುಳಸಿ ಮಾಲೆ ಬಲು ಪ್ರಿಯ. ಹಾಗಾಗಿ ಹನುಮ ಜಯಂತಿಯ ಪ್ರಯುಕ್ತ ಭಕ್ತರು ತುಳಸಿ ಮಾಲೆ ಮಾಡಿ ಪೂಜೆ ಕೈಗೊಳ್ಳುತ್ತಾರೆ. ಈ ವರ್ಷ ಎಲ್ಲಡೆ ಕೊವಿಡ್ ಸಾಂಕ್ರಾಮಿಕ ಆವರಿಸಿರುವುದರಿಂದ ದೇವಸ್ಥಾನಗಳಿಗೆ ಭೇಟಿ ನೀಡಲಾಗುತ್ತಿಲ್ಲ ಎಂಬುದು ಆಂಜನೇಯನ ಭಕ್ತರಿಗುಂಟಾದ ನಿರಾಸೆಯ ಸಂಗತಿ. ಅದರೂ ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಶ್ರೀ ಆಂಜನೇಯನ ಜನ್ಮೋತ್ಸವವನ್ನು ಸರಳವಾಗಿ ಜನ ಸಂದಣೆ ಇಲ್ಲದೆ ಜಿಲ್ಲೆಯ ಗಂಗಾವತಿ ತಾಲೂಕಿನ ಆಂಜನೇಯ ಸ್ವಾಮಿಯ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದ ಮೇಲೆ ಆಚರಿಸಲಾಯಿತು.
ಮಂಗಳವಾರವಾದುದರಿಂದ ಮತ್ತು ಹುಣ್ಣಿಮೆ ಇರುವ ಕಾರಣ ಶ್ರೀ ವಿಷ್ಣುವಿನ ಸಮೇತ ಶ್ರೀ ರಾಮದೇವರಿಗೆ ಪೂಜೆ ಸಲ್ಲಿಸಿ ನಂತರ ಶ್ರೀ ಆಂಜನೇಯನಿಗೆ ಪೂಜೆ ಸಲ್ಲಿಸಲಾಯಿತು. ಹೊರಗಿನಿಂದ ಭಕ್ತರು ಬರುವುದನ್ನು ತಡೆಯಲಾಗಿತ್ತು. ಸಮಿತಿಯ ಸದಸ್ಯರು ಮತ್ತು ಊರಿನ ಜನರ ಸಮ್ಮುಖದಲ್ಲಿ ವಿಶೇಷ ಪೂಜೆಯನ್ನು ಹನುಮ ಜಯಂತಿಯಂದು ಶ್ರೀ ಆಂಜನೇಯ ಸ್ವಾಮಿಗೆ ಶುಭ ಮುಹೂರ್ತದಲ್ಲಿ ಪೂಜೆ ಸಲ್ಲಿಸಲಾಯಿತು.
ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಆಂಜನೇಯ ಜನಿಸಿದ ಸ್ಥಳವೆಂದೇ ಖ್ಯಾತಿ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿದೆ. ಈ ಅಂಜನಾದ್ರಿ ಬೆಟ್ಟದಲ್ಲಿ ಇರುವ ಆಂಜನೇಯ ಸ್ವಾಮಿ ದೇವಾಲಯಕ್ಕೆ ನಾಡಿನ ಎಲ್ಲ ಕಡೆಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಆದರೆ ಈ ಬಾರಿ ಕೊವೀಡ್ ಹಿನ್ನೆಲೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸಲು ಆಗದೆ ಈಬಾರಿ ಈ ಭಕ್ತರಿಲ್ಲದೆ ಬೇಸರ ತಂದಿತು.
ವರದಿ: ಮುರುಳೀಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post