ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಬಳ್ಳಾರಿ-ವಿಜಯನಗರ-ಕೊಪ್ಪಳ ವಲಯ ಸುರಕ್ಷತಾ ಸಮಿತಿಯಿಂದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟಡ್ ಕಾರ್ಖಾನೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಸುರಕ್ಷತೆ ಕುರಿತಾಗಿ ಒಂದು ದಿನದ ಸೆಮಿನಾರ್ ಸಂಪನ್ನಗೊಂಡಿತು.
ಸೆಮಿನಾರ್’ನಲ್ಲಿ ಟೊಯೋಟಾ ಕಿಲೋಸ್ಕರ್ ಮೋಟಾರ್ ಲಿಮಿಟೆಡ್ ನಿವೃತ್ತ ಇಎಚ್’ಎಸ್ ವಿಭಾಗದ ಮುಖ್ಯಸ್ಥರು, ರಾಷ್ಟೀಯ ಸುರಕ್ಷತಾ ಸಂಸ್ಥೆ ಕರ್ನಾಟಕ ಪ್ರಾಂತ್ಯದ ಸದಸ್ಯರಾದ ರಾಮಮೂರ್ತಿ ಅವರು, Safety Culture & Effective Leadership’ ಈ ವಿಷಯವಾಗಿ ಉಪನ್ಯಾಸ ನೀಡಿದರು.

ಬಳ್ಳಾರಿ, ವಿಜಯನಗರ, ರಾಯಚೂರು, ಗದಗ ಮತ್ತು ಕೊಪ್ಪಳ ಜಿಲ್ಲೆಯ ವಿವಿಧ ಕಾರ್ಖಾನೆಗಳಿಂದ ಉದ್ಯೋಗಿಗಳು ಮತ್ತು ಸುರಕ್ಷತಾ ವಿಭಾಗದ ಅಧಿಕಾರಿಗಳು ಹಾಜರಾಗಿ ಪ್ರಯೋಜನವನ್ನು ಪಡೆದರು.

ಭಾಗವಹಿಸಿದಂತಹ ಉದ್ಯೋಗಗಳು ಉತ್ತಮವಾದ ಪ್ರತಿಕ್ರಿಯೆಯನ್ನು ನೀಡುವುದರ ಮೂಲಕ ಮುಂಬರುವ ದಿನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಸುರಕ್ಷತೆಯನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಬೆಳೆಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸೆಮಿನಾರ್ ಕೊನೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಯಿತು. ಎಲ್ಲಾ ಕಾರ್ಖಾನೆಗಳ ಆಡಳಿತ ಮಂಡಳಿಗೆ ಕಿರ್ಲೋಸ್ಕರ್ ಮತ್ತು ಬಿ ಕೆ ರೈಸ್ ವತಿಯಿಂದ ಧನ್ಯವಾದವನ್ನು ಅರ್ಪಿಸಲಾಯಿತು.
ಕಾರ್ಯಕ್ರಮ ಯಶಸ್ಸಿನ ಹಿಂದೆ ಶ್ರಮವಹಿಸಿ ಈ ಕಾರ್ಯಕ್ರಮದ ಆತಿಥ್ಯತೆ ವಹಿಸಿಕೊಂಡಿದ್ದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಆಡಳಿತ ಮಂಡಳಿಗೆ ಮತ್ತು ಸುರಕ್ಷತಾ ವಿಭಾಗದ ಅಧಿಕಾರಿಗಳಿಗೆ ಮತ್ತು ಎಸ್’ಎಲ್’ಆರ್ ಕಾರ್ಖಾನೆಯ ಸುರಕ್ಷತಾ ವಿಭಾಗದ ಅಧಿಕಾರಿಗಳಿಗೆ ಅಭಿನಂದನೆಯನ್ನು ಕಾರ್ಖಾನೆಗಳು, ಬಾಯ್ಲರ್’ಗಳ ಸ್ವಾಸ್ಥ್ಯಯ ಇಲಾಖೆಯ ಜಂಟಿ ನಿರ್ದೇಶಕರಾದ ರವೀಂದ್ರನಾಥ್ ಎನ್. ರಾಥೋಡ್ ತಿಳಿಸಿದರು. ಕಾರ್ಯಕ್ರಮ ಗ್ರೂಪ್ ಫೋಟೋ ಮೂಲಕ ಮುಕ್ತಾಯವಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post