ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಹಾಮಾರಿ ಕೊರೋನಾ ವೈರಸ್ ಕೋವಿಡ್ 19 ರಾಜ್ಯವನ್ನು ಬಾಧಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಜನರ ಸಹಾಯಾರ್ಥ ಜಿಲ್ಲೆಯ ಪ್ರಮುಖರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.
ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಟಾಸ್ಕ್ ಫೋರ್ಸ್ ಸದಸ್ಯ ಲಕ್ಷ್ಮೀ ನಾರಾಯಣ ಕಾಶಿ ಹಾಗೂ ಅವರ ಪತ್ನಿ ವೈದ್ಯೆ ಡಾ.ಯಶೋಧಾ ಕಾಶಿ ಅವರು, ಸಿಎಂ ಪರಿಹಾರ ನಿಧಿಗೆ 25 ಸಾವಿರ ರೂ. ವೈಯಕ್ತಿಕ ದೇಣಿಗೆ ನೀಡಿದ್ದಾರೆ.
ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್, ಭದ್ರಾವತಿ ವತಿಯಿಂದ 1,01,111.00 ರೂ., ಭದ್ರಾವತಿಯ ಶಿವರುದ್ರಪ್ಪ ಅವರಿಂದ 11,000.00 ರೂ., ಎಸ್.ಎಸ್. ಉಮೇಶ್ ಕುಟುಂಬದಿಂದ 1,00,000.00 ರೂ., ಶಿರಾಳಕೊಪ್ಪದ ಬಿ.ಎಸ್. ಪ್ರಶಾಂತ್ ಅವರು 1,000.00 ರೂ. ದೇಣಿಗೆ ನೀಡಿದ್ದಾರೆ.
Get in Touch With Us info@kalpa.news Whatsapp: 9481252093
















