ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಒಟಿಟಿ ಪ್ಲಾಟ್ ಫಾರ್ಮ್ ನೆಟ್ ಅನ್ನು ಹೊಂದಿರುವ ಬೆಂಗಳೂರು ಮೂಲದ ಪ್ರೈಮ್ ಒರಿಜಿನಲ್ ಪ್ರೈವೇಟ್ ಲಿಮಿಟೆಡ್, ತಮ್ಮ ಮೊದಲ ಚಲನಚಿತ್ರ ಲೆಗಸಿ ಆಫ್ ಲೈಸ್’ ಅನ್ನು ಎಪ್ರಿಲ್ 2ರಂದು ಭಾರತದಾದ್ಯಂತ ಇಂಗ್ಲಿಷ್, ಹಿಂದಿ, ತಮಿಳು ತೆಲುಗು ಭಾಷೆಯ ಮೂಲಕ ವಿತರಿಸಲು ಸಜ್ಜಾಗಿದೆ.
ಪ್ರಖ್ಯಾತ ಹಾಲಿವುಡ್ ನಟ ಸ್ಕಾಟ್ ಆಡ್ಕಿನ್ಸ್ ನಟಿಸಿರುವ ಲೆಗಸಿ ಆಫ್ ಲೈಸ್ ಚಿತ್ರ ನೆಟ್ 5ರಲ್ಲಿ ಇದೇ ಮೊದಲ ಬಾರಿಗೆ ಬಿಡುಗಡೆಯಾಗಲಿದೆ.
ಪ್ರೈಮ್ ಒರಿಜಿನಲ್ಸ್ ತಮ್ಮದೇ ಆದ ಒಟಿಟಿ ಪ್ಲಾಟ್ ಫಾರ್ಮ್ ನೆಟ್ 5 ಗಳನ್ನು ಹೊಂದಿದ ಕಂಪೆನಿಯಾಗಿದ್ದರೂ, ತಮ್ಮ ಕೆಲವು ಆ್ಯಕ್ಷನ್, ಬ್ಲಾಕ್ ಬಾಸ್ಟರ್ ಚಲನಚಿತ್ರಗಳನ್ನು ಮೊದಲು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ ನಂತರ ತಮ್ಮ ಪ್ಲಾಟ್ ಫಾರ್ಮ್‌ನಲ್ಲಿ ಬಿಡುಗಡೆ ಮಾಡುತ್ತಿದೆ.ಲೆಗೆಸಿ ಆಫ್ ಲೈಸ್ ಚಿತ್ರದ ಬಗ್ಗೆ
ಸುಂದರವಾದ ಉಕ್ರೇನಿಯನ್ ಪತ್ರಕರ್ತೆಯಾದ ಸಶಾ ಸ್ಟೆಪನೆಂಕೊ ರಷ್ಯಾದ ರಹಸ್ಯ ಕಾರ್ಯಾಚರಣೆಗಳ ಬಗ್ಗೆ ಅಘಾತಕಾರಿ ಸತ್ಯವನ್ನು ಬಹಿರಂಗಪಡಿಸಲು X- M16 ಏಜೆಂಟ್ ಮಾರ್ಟಿನ್ ಬ್ಯಾಕ್ಸ್ಟರ್ ಅವರ ಸಹಾಯವನ್ನು ಕೇಳಿದಾಗ ಬೇಹುಗಾರಿಕೆ ಹಾಗೂ ಅದರ ಕುರಿತು ಹೆಚ್ಚಿನ ಮಾಹಿತಿ ಹೊರಜಗತ್ತಿಗೆ ತಿಳಿಯುವಂತಾಗುತ್ತದೆ.
ದಶಕಗಳ ಹಿಂದೆ ಮಾರಣಾಂತಿಕ ತಪ್ಪು ನಿರ್ಣಯವು ಮಾರ್ಟಿನ್ ಬ್ಯಾಕ್ಸ್ಟರ್ M16ಗೆ ರಾಜೀನಾಮೆ ನೀಡುವಂತಾಯಿತು. ತನ್ನ 12 ವರ್ಷದ ಮಗಳು ಲಿಸಾಳೊಂದಿಗೆ ಯುರೋಪಿನಾದ್ಯಂತ ಸಂಚರಿಸುತ್ತಿರುತ್ತಾನೆ. ಒಂದು ರಾತ್ರಿ ಮಾರ್ಟಿನ್ ಅವರನ್ನು ಉಕ್ರೇನಿಯನ್ ಯುವ ಪತ್ರಕರ್ತೆ ಸಾಶಾ ಸ್ಟೆಪನೆಂಕೊ ಸಂಪರ್ಕಿಸಿ ರಹಸ್ಯ ಏಜೆಂಟ್ ಆಗಿ ಮಾರ್ಟಿನ್ ವಿಫಲವಾದ ವಿಷಯವನ್ನು ಅವರಿಂದ ಕೇಳಲು ಪ್ರಯತ್ನಿಸುತ್ತಾಳೆ. ಆದರೆ ಮಾರ್ಟಿನ್ ಅವಳಿಗೆ ಸಹಾಯ ಮಾಡಲು ನಿರಾಕರಿಸುತ್ತಾನೆ. ಹಾಗೇ ಗೂಡಚರ್ಯೆ ಕುರಿತು ಜಗತ್ತಿಗೆ ತಿಳಿಸಲು ಭಯಪಡುತ್ತಾನೆ.ಮಾರ್ಟಿನ್ ಮನೆಯಿಂದ ನಿರ್ಗಮಿಸುತ್ತಿದ್ದಂತೆ ಕಪ್ಪು ಸೂಟ್ ಧಾರಿಯಾದ ಇಬ್ಬರು ಪುರುಷರು ಅವನಿಗಾಗಿ ಕಾಯುತ್ತಿರುತ್ತಾರೆ. ಅವನು ಅಲ್ಲಿಗೆ ಬಂದಾಗ ರಷ್ಯಾದ ರಹಸ್ಯ ಸೇವೆಯ ಏಜೆಂಟ್ ಟಟಯಾನಾ ಮತ್ತು ಅವನ ಮಗಳು ಲಿಸಾಳನ್ನು ನೋಡುತ್ತಾನೆ. ಟಟಯಾನಾ ಮಾರ್ಟಿನ್ ಗೆ ಅಲ್ಟಿಮೇಟಮ್ ಅನ್ನು ನೀಡುತ್ತಾನೆ ಅಥವಾ ಅವನು ಸಶಾ ಹಾಗೂ ಅವಳ ಫೈಲ್ ಗಳನ್ನು ತರಲು ಹೇಳುತ್ತಾನೆ. ಅಲ್ಲಿ ಸಶಾ ಹಾಗೂ ಅವನ ಮಗಳು ಕಣ್ಮರೆಯಾಗಿರುತ್ತಾರೆ. ಮಾಜಿ ಎಂಐ 6 ಏಜೆಂಟ್ ತನ್ನ ಮಿಷನ್ ಪೂರ್ಣಗೊಳಿಸಲು 24 ಗಂಟೆಗಳ ಕಾಲ ಅವಕಾಶವಿರುತ್ತದೆ.
ಪಾತ್ರ ಹಾಗೂ ಸಿಬ್ಬಂದಿ ವಿವರಗಳು:
ನಿರ್ದೇಶಕ: ಆಡ್ರಿಯನ್ ಬೋಲ್
ಲೇಖಕ: ಆಡ್ರಿಯಲ್ ಬೋಲ್
ನಟರು: ಸ್ಕಾಟ್ ಆಡ್ಕಿನ್ಸ್, ಅನ್ನಾ ಬಟ್ಕೆ ವಿಚ್, ಯುಲಿಯಾ ಸೊಬೋಲ್
ಬಿಡುಗಡೆಯ ದಿನಾಂಕ: ಎಪ್ರಿಲ್ 2, 2021
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post