ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂ’ಗೆ ರಾಜ್ಯದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ರಾಜ್ಯ ಸಂಪೂರ್ಣ ಸ್ಥಗಿತವಾಗುವ ಸಾಧ್ಯತೆ ಇದೆ.
ಮೊದಲು ಕೊರೋನಾ ವೈರಸ್ ನಾಶ ಮಾಡಿ ನಮ್ಮ ಬದುಕನ್ನು ಹಸನು ಮಾಡಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಡಲು ಅಣಿಯಾಗೋಣ. ಕೊರೋನಾ ವೈರಸ್’ನಿಂದ ಒಳಿತು ಆಯಿತು ಎಂಬ ಅರ್ಥವಿಲ್ಲದ ಸಂದೇಶ್’ಗಳು ವಾಟ್ಸಪ್’ನಲ್ಲಿ ಮಿಂಚಿನ ವೇಗದಲ್ಲಿ ಹರಿದಾಡುತ್ತಿದೆ. ಅಂತಹ ಸಂದೇಶವನ್ನು ಹಂಚಿಕೊಳ್ಳದೆ ರಾಕ್ಷಸ ವೈರಸ್ ಕೊರೋನಾವನ್ನು ನಾಶ ಮಾಡುವ ಬಗ್ಗೆ ಭಗವಂತನ ಉಪಾಸನೆ ಮಾಡುತ್ತಾ ವೈಜ್ಞಾನಿಕವಾಗಿ ಅದನ್ನು ಹಿಮ್ಮೆಟ್ಟಿಸುವ ಪ್ರಯತ್ನ ಮಾಡೋಣ.
ದೇಶದ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ನಾಳೆ ಕರ್ಪ್ಯೂವನ್ನು ದೇಶದ ಪ್ರಜೆಯಾಗಿ ಪಾಲಿಸುವ ನಿಟ್ಟಿನಲ್ಲಿ ಎಲ್ಲರೂ ಹೆಜ್ಜೆ ಇಡೋಣ. ದೇಶವ್ಯಾಪ್ತಿ ನಮ್ಮೆಲ್ಲರ ರಕ್ಷಣೆಯ ಹೊಣೆ ಹೊತ್ತು ನಿಂತಿರುವ ಆಸ್ಪತ್ರೆಗಳು, ವೈದ್ಯರು, ನರ್ಸ್‌ಗಳು ವೈದ್ಯಕೀಯ ಚಿಕಿತ್ಸೆ ನೀಡಲು ಸಜ್ಜಾಗಿ ನಿಂತಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು ಅರ್ಪಿಸೋಣ.
ದೇಶಕ್ಕೆ ಕೊರೋನಾ - ಸಿಲಿಕಾನ್ ಸಿಟಿಗೆ ಕಾಲರ ಬಂತು - ಬಂತು ಕೊರೋನಾ ಬಂತು ದೇಶದ ತುಂಬಾ ಹರಡುತ್ತಿದೆ ಬಾರಿಸುತ್ತಿದೆ ಮರಣ ಮೃದಂಗ ದೇಶದ ತುಂಬಾ॥ ಬಂತು - ಬಂತು ಬಂತು - ಬಂತು ಕಾಲರ ಬಂತು ಸಿಲಿಕಾನ್ ಸಿಟಿಗೆ ಏಕೆ ಬಂತು ಏಕೆ ಬಂತು ಮರೆತೆವು ನಾವು ಸಿಲಿಕಾನ್ ಸಿಟಿ ಯ ಸಿಟಿಜನ್ ನಾವು ಪರಿಸರ ಸ್ವಚ್ಛತೆಯ॥ ಎಸೆದೆವು ಕಸವಾ ಅಲ್ಲಿ - ಇಲ್ಲಿ ಕಂಡಲ್ಲಿ ಎಸೆದೆವು ಕಸವಾ ವೃಷಭಾವತಿಯ ಒಡಲಿಗೆ ಎಸೆದೆವು ಕಸವಾ॥ ಸ್ವಚ್ಛತೆ ಮರೆತೆವು ಬಂದಿತು ಕಾಲರ ಮರೀಚಿಕೆ ಆಯಿತು ಪರಿಸರ ಸ್ವಚ್ಛತೆ ಬಂದಿತು ಕಾಲರ ಪರಿಸರ ಮಾಲಿನ್ಯ ತಡೆಯೋಣ ಸಂಕ್ರಾಮಿಕ ರೋಗವಾ ಹೊಡೆದೋಡಿಸೋಣ॥ ಬನ್ನಿರಿ ಅಣ್ಣ ಬನ್ನಿರಿ ಅಕ್ಕಾ ನಗರದ ಸ್ವಚ್ಛತೆ ಕಾಪಾಡೋಣ ಉಳಿಸುವ ನಾವು ವೃಷಭಾವತಿಯ ಮುಂದಿನ ಪೀಳಿಗೆಗೆ ಕುಡಿಯುವ ನೀರು॥ ಬನ್ನಿರಿ ಅಣ್ಣ ಬನ್ನಿರಿ ಅಕ್ಕಾ ನಗರದ ಸ್ವಚ್ಛತೆ ಕಾಪಾಡೋಣ ಕಸದ ಗಾಡಿಗೆ ಕಸವಾ ಹಾಕಿ ಅಲ್ಲಿ ಇಲ್ಲಿ ಕಸವಾ ಎಸೆಯದೆ ವೃಷಭಾವತಿಯ ಒಡಲಿಗೆ ಕಸವಾ ಎಸೆಯದೆ ಸಿಲಿಕಾನ್ ಸಿಟಿಗೆ ಬಂದ ಕಾಲರವಾ ಹೊಡೆದೋಡಿಸೋಣ ಸಂಕ್ರಾಮಿಕ ರೋಗವಾ ಹೊಡೆದೋಡಿಸೋಣ॥ ಸಾಹಿತ್ಯ: ತೀರ್ಥಹಳ್ಳಿ ಅನಂತ ಕಲ್ಲಾಪುರ
ನಾಳೆ ಸಂಜೆ 5 ಗಂಟೆಗೆ ಎಲ್ಲರೂ ಕರತಾಡನ ಮಾಡೋಣ, ಭಗವಂತನ ನಾಮಸ್ಮರಣೆ ಮಾಡೋಣ, ಶಂಖ ಊದಿ, ಜಾಗಂಟೆ ಬಾರಿಸೋಣ, ತಟ್ಟೆ ಹಾಗೂ ಲೋಟದ ಮೂಲಕ ಶಬ್ದ ಮಾಡೋಣ.
ಒಟ್ಟಿನಲ್ಲಿ ನಾಳೆ ಭಾರತದ ಎಲ್ಲಾ ಪ್ರಜೆಗಳೂ ಕೊರೋನಾ ಹಿಮ್ಮೆಟ್ಟಿಸುವ ಪ್ರಯತ್ನ ಮಾಡೋಣ. ಆಸ್ಪತ್ರೆಗಳು, ಔಷಧ ಮಳಿಗೆ, ಅಗ್ನಿಶಾಮಕ ದಳ ಸೇರಿ ತುರ್ತು ಸೇವೆಗಳು ಮಾತ್ರ ಅಂದು ಲಭ್ಯವಾಗಲಿವೆ. ಹಾಲು, ಪತ್ರಿಕೆ ಸರಬರಾಜು ಎಂದಿನಂತೆ ಇರಲಿದೆ. ತರಕಾರಿ, ಹಣ್ಣು ಸೇರಿದಂತೆ ಬಹುತೇಕ ವಸ್ತುಗಳ ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಲಿವೆ.
ಕೊರೋನಾ ಭಾರತದಲ್ಲಿ ಸಮುದಾಯದ ಮೇಲೆ ದಾಳಿ ಮಾಡಲು ಸಂಚು ಮಾಡುತ್ತಿದೆ. ಈ ಮೂರನೆಯ ಹಂತ ಎದುರಿಸಿ ನಿಲ್ಲುವುದು ಬಹಳ ಮಹತ್ವದ್ದಾಗಿದೆ. ಚೀನಾ, ಇಟಲಿ, ಸ್ಪೈನ್, ಇರಾನ್’ನಂತಹ ದೇಶಗಳು ಇಲ್ಲಿ ಸೋತಿವೆ. ಅವರ ಸೋಲು ನಮಗೆ ಗೆಲುವಿನ ಪಾಠವಾಗಬೇಕು. ನಾವು ಗೆಲ್ಲಬೇಕೆಂದರೆ ನಮ್ಮ ನಮ್ಮ ಜವಾಬ್ದಾರಿಗಳನ್ನು ಗಂಭೀರವಾಗಿ ನಿಭಾಯಿಸಬೇಕು.
ಇದು ಆರಂಭ. ಕೊರೋನಾ ವೈರಸ್’ಅನ್ನು ಹಿಮ್ಮೆಟ್ಟಿಸುವ ಪ್ರಯತ್ನ ನಿರಂತರ ಹಲವು ವಾರಗಳು ನಡೆಯುವ ಅಗತ್ಯವಿದೆ. ನಾವೆಲ್ಲರೂ ದೃಢ ಸಂಕಲ್ಪ ಮಾಡಿ ಕೊರೋನಾ ವೈರಸ್ ಅನ್ನು ನಾಶ ಮಾಡುವ ದಿಕ್ಕಿನಲ್ಲಿ ಸಾಗೋಣ.
Get in Touch With Us info@kalpa.news Whatsapp: 9481252093
Discussion about this post