ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನವದೆಹಲಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೇಶನದ ಮೇರೆಗೆ ಮಾರ್ಚ್ 8 ರಂದು ಈ ವರ್ಷದ ಮೊದಲ ರಾಷ್ಟ್ರೀಯ ಲೋಕ್ ಅದಾಲತ್ #NationalLokAdalat ನಡೆಯಲಿದೆ ಎಂದು ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯ್ಕ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಾವು ವರ್ಷದಲ್ಲಿ 4 ಮೆಗಾ ಲೋಕ್ ಅದಾಲತ್ ಗಳನ್ನು ನಡೆಸುತ್ತೇವೆ. ಇದು ವರ್ಷದ ಮೊದಲ ಲೋಕ್ ಅದಾಲತ್ ಇದಾಗಿದ್ದು, ಶಿವಮೊಗ್ಗ #Shivamogga ಜಿಲ್ಲಾ ನ್ಯಾಯಾಲಯ ಸೇರಿದಂತೆ ಇತರೆ 6 ತಾಲ್ಲೂಕುಗಳಲ್ಲಿ ಲೋಕ್ ಅದಾಲತ್ ನಡೆಯಲಿದೆ. ಇದಕ್ಕೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ಈಗಾಗಲೇ ನಡೆಸಿದ್ದೇವೆ ಎಂದರು.
Also Read>> ಮಲೆನಾಡಿನ ಎಲೆಚುಕ್ಕಿ ರೋಗ | ಸಂಕಷ್ಟದಲ್ಲಿರುವ ರೈತರ ನೆರವಿಗೆ ಬಜೆಟ್’ನಲ್ಲಿ ಘೋಷಣೆ
ಕಳೆದ ಡಿಸೆಂಬರ್’ನಲ್ಲಿ ರಾಜಿ ಸಂಧಾನದ ಮೂಲಕ 13,300 ರಷ್ಟು ಪ್ರಕರಣವನ್ನು ಬಗೆಹರಿಸಿದ್ದೇವೆ. ಈ ಬಾರಿ ನಡೆಯುವ ಲೋಕ್ ಅದಾಲತ್ ನಲ್ಲಿ ಜಿಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್ ವೈವಾಹಿಕ ಮೋಟಾರು ಪರಿಹಾರ ಪ್ರಕರಣಗಳು ಸೇರಿದಂತೆ ಇತರ 15 ಸಾವಿರ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಪರಿಹರಿಸಬೇಕೆಂದಿದ್ದೇವೆ ಎಂದರು.
ಈ ಬಾರಿ ಲೋಕ್ ಅದಾಲತ್’ನಲ್ಲಿ ಕ್ರಿಮಿನಲ್ ಪ್ರಕರಣಗಳೇ ಹೆಚ್ಚು. ಈ ಬಾರಿಯ ಲೋಕ್ ಅದಾಲತ್’ನಲ್ಲಿ 15 ರಿಂದ 20 ವರ್ಷದ ಹಳೆಯ ಕೇಸ್’ಗಳು ಬಗೆಹರಿಯಲಿದ್ದು, ಇದರಲ್ಲಿ ಹೆಚ್ಚಾಗಿ ಕ್ರಿಮಿನಲ್ ಕೇಸ್’ಗಳಿವೆ. ಈ ಸಂದರ್ಭದಲ್ಲಿ ಕೋರ್ಟ್ ಮಧ್ಯಸ್ಥಿಕೆ ವಹಿಸುವ ಮೂಲಕ ಕುಟುಂಬ ವ್ಯಾಜ್ಯಗಳು ಸೇರಿದಂತೆ ಇನ್ನಿತರೆ ಕೇಸ್’ಗಳನ್ನು ಬಗೆಹರಿಸುತ್ತೇವೆ. ಈ ಲೋಕ್ ಅದಾಲತ್ ನಡೆಸುವುದರಿಂದ ನಾವು ನ್ಯಾಯಾಲಯದ ಸಮಯವನ್ನು ಉಳಿಸಬಹುದು ಎಂದರು.
ಪ್ರಮುಖವಾಗಿ ಈ ಅದಾಲತ್ ನಲ್ಲಿ ಪತಿ-ಪತ್ನಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು. ದಂಪತಿಗಳನ್ನು ಒಟ್ಟಾಗಿ ಇರಲು ಪ್ರೇರೇಪಿಸಲಾಗುವುದು. ಕೌಟುಂಬಿಕ ಆಸ್ತಿಗೆ ಸಂಬಂಧಿಸಿದಂತೆ ಬಗೆಹರಿಯಬಹುದಾದ ಕೇಸ್ ಗಳನ್ನು ಕೂಡ ಲೋಕ್ ಅದಾಲತ್ ನಲ್ಲಿ ಇತ್ಯರ್ಥಪಡಿಸಲಾಗುವುದು. ಲೋಕ್ ಅದಾಲತ್ ಎನ್ನುವುದು ಕೇವಲ ವ್ಯಾಜ್ಯಗಳನ್ನು ಬಗೆಹರಿಸುವುದಷ್ಟೇ ಅಲ್ಲ, ಆ ಮೂಲಕ ಸಾಮಾಜಿಕ ಸ್ವಾಸ್ಥö್ಯವನ್ನು ಕಾಪಾಡುವುದೇ ಆಗಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು 55 ಸಾವಿರ ಪ್ರಕರಣಗಳು ಬಾಕಿ ಇದ್ದು, ಈ ಲೋಕ್ ಅದಾಲತ್ ನಲ್ಲಿ 13,800ರಿಂದ 14 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥಗೊಳ್ಳುವ ನಿರೀಕ್ಷೆ ಇದೆ ಎಂದರು.
Also Read>> ಮೇಕೆದಾಟು, ಕಳಸ-ಬಂಡೂರಿ ಯೋಜನೆ ಬಗ್ಗೆ ಸಿಎಂ ಹೇಳಿದ್ದೇನು? ನೀರಾವರಿಗೆ ಬಜೆಟ್’ನಲ್ಲಿ ಸಿಕ್ಕಿದ್ದೇನು?
ಮಾರ್ಚ್ 8 ರಂದು ಮಹಿಳಾ ದಿನಾಚರಣೆ ಆಗಿರುವುದರಿಂದ ಕಲಾಪಗಳ ಸಂಧಾನವನ್ನು ಮಾಡಿಸಲು 38 ಮಹಿಳಾ ವಕೀಲರನ್ನೇ ಸಂಧಾನಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಹಾಗೆಯೇ ಇಲ್ಲಿರುವ ಮಹಿಳಾ ಕೇಸ್’ಗಳ ಬಗ್ಗೆ ಎಂದಿನಂತೆ ಸೂಕ್ಷ್ಮವಾಗಿ ಗಮನಹರಿಸಲಾಗಿದೆ ಎಂದರು.
ಕೋರ್ಟ್ ಕಪಾಲ ನೇರ ಪ್ರಸಾರ
ಈವರೆಗೂ ದೊಡ್ಡ ಕೋರ್ಟ್’ಗಳ ಕಲಾಪಗಳನ್ನು ಯೂಟ್ಯೂಬ್’ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿತ್ತು. ಆದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮೂರು ಕೋರ್ಟ್’ಗಳಲ್ಲಿ ನಡೆಯುವ ಕಲಾಪವನ್ನು ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತಿದೆ.
ಅತಿ ಶೀಘ್ರದಲ್ಲೇ ಲೈವ್ ಸ್ಟ್ರೀಮಿಂಗ್ ಆರಂಭವಾಗಲಿದ್ದು, ಇದಕ್ಕಾಗಿ ನ್ಯಾಯಾಲಯದಲ್ಲಿ ಎಲ್ಲ ಸಿದ್ದತೆಗಳನ್ನು ಮಾಡಲಾಗುತ್ತಿದೆ.
ಇದಕ್ಕೆ ಅಗತ್ಯವಾಗಿರುವ ಎಲ್ಲ ರೀತಿಯ ತಾಂತ್ರಿಕ ಹಾಗೂ ಸಿಬ್ಬಂದಿಗಳ ಸಿದ್ದತೆ ನಡೆದಿದ್ದು, ಯೂಟ್ಯೂಬ್ ಮೂಲಕ ಶೀಘ್ರದಲ್ಲೇ ನೇರ ಪ್ರಸಾರ ಆಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ನ್ಯಾಯಾಧೀಶರಾದ ಎಂ.ಎಸ್. ಸಂತೋಷ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post