ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನರ್ಸ್ ರೂಪಾ ಅವರು 9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ಸಹ ಒಂದು ದಿನವೂ ರಜೆ ತೆಗೆದುಕೊಳ್ಳದೇ ತಮ್ಮ ಕರ್ತವ್ಯಪರತೆ ಮೆರೆಯುತ್ತಿದ್ದಾರೆ.
ಇಂತಹ ವಿಚಾರವನ್ನು ಗುರುತಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ನರ್ಸ್ ರೂಪಾ ಅವರಿಗೆ ಸ್ವತಃ ಕರೆ ಮಾಡಿ ಮಾತನಾಡಿದ್ದಾರೆ.
ನಮ್ಮ ಜಿಲ್ಲೆಯವರಾಗಿ ನೀವು ಇಷ್ಟು ಶ್ರಮ ಹಾಕುತ್ತಿದ್ದೀರಿ. ಇದನ್ನು ನೋಡಿ ತುಂಬಾ ಸಂತೋಷವಾಯಿತು. ದಯವಿಟ್ಟು ಇವತ್ತಿನಿಂದ ನೀವು ವಿಶ್ರಾಂತಿ ತೆಗೆದುಕೊಳ್ಳಿ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ.
ಆದರೆ, ಗುತ್ತಿಗೆ ಆಧಾರದಲ್ಲಿ ತಾವು ಕೆಲಸ ಮಾಡುತ್ತಿರುವುದಾಗಿ ನರ್ಸ್ ಹೇಳಿದ ವೇಳೆ, ಅದನ್ನೆಲ್ಲಾ ಆಮೇಲೆ ನೋಡಿ ವ್ಯವಸ್ಥೆ ಮಾಡೋಣ. ದಯಮಾಡಿ ಇಂದಿನಿಂದ ರೆಸ್ಟ್ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯೊಬ್ಬರು ಒಬ್ಬ ನರ್ಸ್‌ಗೆ ಕರೆ ಮಾಡಿ ಈ ರೀತಿ ಕಾಳಜಿ ವಹಿಸುವ ಮಾತನಾಡಿರುವುದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
Get in Touch With Us info@kalpa.news Whatsapp: 9481252093

















