ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದೇಶದ ಬೆಳಕು ನೀನು
ಸ್ಫೂರ್ತಿದಾಯಕ ನೀನು
ನಮಗೆ ಅನ್ನದಾತನು
ಯಾರಿಗೂ ಹೆದರದೆ ದುಡಿಯುವೆ ನೀನು
ನಮ್ಮಯ ಪಾಲಿಗೆ
ದೇವರು ನೀನು
ನಿಮ್ಮ ಸಾಧನೆಯು ಎಂದಿಗೂ ಮರೆಯಲಾರೆವು
ಗೌರವ ನೀಡುವೇವು
ಕೈಯನು ಮುಗಿವೇವು
ನಿಮ್ಮ ಸಾಧನೆಗೆ ಸೋತು ತಲೆಯಬಾಗುವೆವು .
ಬಿಸಿಲೇ ಇರಲಿ
ಮಳೆಯೇ ಇರಲಿ
ಕೆಲಸವು ನಿಲ್ಲದು
ನಿಮ್ಮ ಕೆಲಸವು ನಿಲ್ಲದು
ಮಣ್ಣಲಿ ಹುಟ್ಟಿ ಮಣ್ಣಲಿ ಬೆಳೆದು
ಕಾಯಕ ಮಾಡುವಿರಿ
ನೀವು ಕಾಯಕ ಮಾಡುವಿರಿ
ರಾಜಭೋಗವ ಬಯಸಿದೆ ನೀವು
ದುಡಿಯುತಲಿರುವಿರಿ
ಕೈ ಕೆಸರಾದರೆ ಬಾಯಿ ಮೊಸರೆಂಬ
ನೀತಿಯ ಸಾರುವಿರಿ
ನೀನು ಇರಾದೆ ಲೋಕವೇ ಇಲ್ಲಾ
ನಮ್ಮಯ ಬಾಳಿಗೆ ನೀನೇ ಎಲ್ಲಾ
ದೇಶದ ಬೆನ್ನೆಲುಬು ನಿಮಗೆ ಕೋಟಿ ನಮನವು.
ದೇಶದ ಬೆಳಕು ನೀನು
ಸ್ಫೂರ್ತಿದಾಯಕ ನೀನು
ನಮಗೆ ಅನ್ನದಾತನು.
ರೈತರು ಯೋಧರು ನಮಗೆ ಎರಡು ಕಣ್ಣುಗಳಿವರು
ನಮಗೆ ಜೀವವ ತುಂಬುವುದು
ಕಷ್ಟವೋ ಸುಖವೋ ಎನ್ನದೆ ಇವರು ನಿರಂತರ ದುಡಿಯುವುದು
ನಮ್ಮ ಪಾಲಿನ ದೇವರು
ಜಗಕ್ಕೆಲ್ಲಾ ಅನ್ನುವ ನೀಡುವ
ದೊರೆಯು ನೀನಾದೆ
ಕಣ್ಣಿಗೆ ಕಾಣದ ದೇವರನ್ನು
ನಿನ್ನಲಿ ನಾ ಕಂಡೆ
ಉಳುವ ಯೋಗಿಯು ನಮ್ಮೀ ದೊರೆಯು
ನಿನ್ನನು ಮರೆತರೆ
ಸಾವೆ ಗತಿಯು
ಎಷ್ಟು ವರ್ಣನೆ ಮಾಡಿದರು
ಪದಗಳೇ ಸಾಲದು
ಗೌರವ ನೀಡುವೆವು
ಕೈಯನು ಮುಗಿವೇವು
ನಿಮ್ಮ ಸಾಧನೆಗೆ ಸೋತು ತಲೆಯಬಾಗುವೆವು.
ದೇಶದ ಬೆಳಕು ನೀನು
ಸ್ಫೂರ್ತಿದಾಯಕ ನೀನು
ನಮಗೆ ಅನ್ನದಾತನು.
ಸಾಹಿತ್ಯ: ಶ್ರೀಮತಿ ಮಂಜುಳಾ ಪಕ್ಕಿರೇಶ ಕೊಪ್ಪದ
ನೆಗಳೂರು, ಹಾವೇರಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post