ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಸೋಮವಾರ ಮುಂಜಾನೆ 6 ಗಂಟೆಯಿಂದ ರಾಜ್ಯದಲ್ಲಿ ಕಠಿಣ ಲಾಕ್ ಡೌನ್ ಜಾರಿಯಾಗಲಿರುವ ಹಿನ್ನೆಲೆಯಲ್ಲಿ ನಗರದಲ್ಲೂ ಇಂದು ರಾತ್ರಿಯಿಂದಲೇ ಪೊಲೀಸರು ಜಾಗ್ರತೆ ವಹಿಸಿದ್ದಾರೆ.
ಇಂದು ಸಂಜೆ ನಂತರ ನಗರದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಬೀಟ್ ನಡೆಸಿದ್ದು, ನಾಗರಿಕರಿಗೆ ಎಚ್ಚರಿಕೆ ಸಂದೇಶ ನೀಡುವ ಜೊತೆಯಲ್ಲಿ ಜಾಗೃತಿಯನ್ನೂ ಸಹ ಮೂಡಿಸಿದರು.
ರಾತ್ರಿಯೂ ಸಹ ಪೊಲೀಸ್ ಬೀಟ್ ಮುಂದುವರೆದಿದ್ದು, ಮೈಕ್ ಮೂಲಕ ಸಂದೇಶ ನೀಡಲಾಗುತ್ತಿತ್ತು. ಸೋಮವಾರದಿಂದ ಜಾರಿಗೆ ಬರಲಿರುವ ಲಾಕ್ ಡೌನ್ ಅವಧಿಯಲ್ಲಿ ಯಾವೆಲ್ಲಾ ಅಗತ್ಯ ವಸ್ತು ಖರೀದಿಗೆ ಇರುವ ಅವಕಾಶ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಅತ್ಯಂತ ಪ್ರಮುಖವಾಗಿ ಖಾಸಗಿ ವಾಹನ ಸಂಚಾರಕ್ಕೆ ನಿಷೇಧವಿರುವ ವಿಚಾರವನ್ನು ಪ್ರಚುರಪಡಿಸಲಾಗುತ್ತಿತ್ತು.
ಕೊರೋನಾ ಸೋಂಕು ತಡೆಗಟ್ಟಲು ಸರ್ಕಾರ ಜಾರಿಗೊಳಿಸಿರುವ ನಿಯಮಗಳನ್ನು ಪಾಲಿಸುವ ಮೂಲಕ ಸಹಕಾರ ನೀಡಬೇಕು ಎಂದು ವಿನಂತಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post