ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೇ ಐದನೆಯ ಬಾರಿ ಜೂನ್ 30ರವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಿರುವ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತಂತೆ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದ್ದು, ಇದಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಕೇಂದ್ರದ ಹೊಸ ಮಾರ್ಗಸೂಚಿಯಂತೆ, ಮೊದಲನೆಯ ಹಂತದಲ್ಲಿ ಅಂದರೆ, ಜೂನ್ 8ರಿಂದ ದೇವಸ್ಥಾನ, ಧಾರ್ಮಿಕ ಕೇಂದ್ರಗಳು, ಮಾಲ್ ಹಾಗೂ ಹೊಟೇಲ್’ಗಳನ್ನು ತೆರೆಯಬಹುದಾಗಿದ್ದು, ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯವಾಗಿದೆ ಎಂದಿದೆ.
From 01.06.2020
●Within Containment Zones, #Lockdown restrictions to continue till 30.06.2020
●#Unlock1 All activities to be relaxed in phased manner outside containment zones, as per @MoHFW_INDIA guidelines
●States may impose restrictions/prohibit activities as per assessment pic.twitter.com/LDbmvf6Gfa— Spokesperson, Ministry of Home Affairs (@PIBHomeAffairs) May 30, 2020
ಇನ್ನು, ಎರಡನೆಯ ಹಂತದಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಸರ್ಕಾರದೊಂದಿಗೆ ಚರ್ಚಿಸಿ, ಶಾಲಾ ಕಾಲೇಜುಗಳನ್ನು ಮರು ಆರಂಭಿಸುವ ಕುರಿತಾಗಿ ಚಿಂತಿಸಲಾಗುತ್ತದೆ.
ಇನ್ನು, ಮೂರನೆಯ ಹಂತದಲ್ಲಿ ಅಂದರೆ ಮುಂದಿನ ದಿನಗಳಲ್ಲಿನ ಪರಿಸ್ಥಿತಿ ನೋಡಿಕೊಂಡು ಅಂತಾರಾಷ್ಟ್ರೀಯ ವಿಮಾನ ಸಂಚಾರ, ಮೆಟ್ರೋ ರೈಲು ಸಂಚಾರ, ಸಿನೆಮಾ ಹಾಲ್‌ಗಳು, ಜಿಮ್, ಈಜುಕೊಳಗಳು, ಇತರೆ ಮನರಂಜನಾ ಸ್ಥಳಗಳನ್ನು ತೆರೆಯುವ ಕುರಿತಾಗಿ ಚಿಂತಿಸಲಾಗುವುದು ಎಂದು ತಿಳಿಸಲಾಗಿದೆ.
Get in Touch With Us info@kalpa.news Whatsapp: 9481252093
Discussion about this post