ಕಲ್ಪ ಮೀಡಿಯಾ ಹೌಸ್ | ಲೋನವಾಲ(ಮಹಾರಾಷ್ಟ್ರ) |
ಭಾನುವಾರದ ರಜೆಯನ್ನು ಸಂತೋಷವಾಗಿ ಕಳೆಯಲು ತೆರಳಿದ್ದ ಕುಟುಂಬದ ನಾಲ್ವರು ಮಕ್ಕಳ ಸಹಿತ ತಾಯಿ ಕ್ಷಣಮಾತ್ರದಲ್ಲಿ ಕೊಚ್ಚಿಹೋಗಿರುವ ದಾರುಣ ಘಟನೆ ಮಹಾರಾಷ್ಟ್ರದ ಲೋನವಾಲದಲ್ಲಿ ನಡೆದಿದೆ.
ಲೋನವಾಲದ ಭುಶಿ ಡ್ಯಾಮ್ ಪಕ್ಕದ ಪ್ರವಾಸಿ ತಾಣದಲ್ಲಿ ಭಾರಿ ಜನಸಾಗರವೇ ಸೇರಿತ್ತು. ಇಲ್ಲಿನ ಅಣೆಕಟ್ಟೆಯ ಸೌಂದರ್ಯ ಸವಿಯಲು ತೆರಳಿದ್ದರು. ನೀರಿನಿಂದ ಕೆಲಭಾಗದಲ್ಲಿ ಸೃಷ್ಟಿಯಾಗುವ ಜಲಪಾತ ವೀಕ್ಷಿಸುತ್ತಾ, ನೀರಿನಲ್ಲಿ ಆಟವಾಡುತ್ತಾ ಕಾಲ ಕಳೆದಿದ್ದಾರೆ.
A woman with 4 kids of a family drowned in waterfall at Lonavala Bhushi Dam, Maharashtra.
2 bodies have been recovered 3 bodies still missing.
Be careful while visiting waterfalls and dams.#Bhushi #Dam #Lonavala #Drowning pic.twitter.com/6v7HDoAri7— Gary Pike World cup वाले 🇮🇳 (@PikeWala) June 30, 2024
ಈ ಸಂದರ್ಭದಲ್ಲಿ ಅಣೆಕಟ್ಟೆಯ ನೀರು ಏಕಾಏಕಿ ಏರಿಕೆಯಾಗಿ ಉಕ್ಕಿ ಹರಿದಿದ್ದು, ನಾಲ್ವರು ಮಕ್ಕಳೊಂದಿಗೆ ಮಹಿಳೆ ಕೊಚ್ಚಿ ಹೋಗಿದ್ದಾರೆ.
ಈ ಪೈಕಿ ಮಹಿಳೆ ಹಾಗೂ ಇಬ್ಬರ ಮಕ್ಕಳ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರ ಮಕ್ಕಳ ಮೃತದೇಹಕ್ಕೆ ಶೋಧ ಕಾರ್ಯ ಮುಂದುವರೆದಿದೆ.
Also read: ಗುಡ್ ನ್ಯೂಸ್ | ಸತತ ನಾಲ್ಕನೇ ಬಾರಿ ಎಲ್’ಪಿಜಿ ಸಿಲಿಂಡರ್ ಬೆಳೆ ಇಳಿಕೆ | ಎಷ್ಟು ಕಡಿಮೆ ಆಯ್ತು?
ನೀರಿನಲ್ಲಿ ಸಿಲುಕಿದ್ದ ಮಹಿಳೆ ಹಾಗೂ ಮಕ್ಕಳು ಪ್ರಾಣ ಉಳಿಸಿಕೊಳ್ಳಲು ಪುಯತ್ನಿಸಿದ್ದಾರೆ. ಸಹಾಯಕ್ಕಾಗಿ ಕಿರುಚಾಡಿದ್ದಾರೆ. ಆದರೆ ದಡದಲ್ಲಿದ್ದವರು ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದರು. ನೀರಿನ ರಭಸ ಹೆಚ್ಚಾಗುತ್ತಿದ್ದಂತೆ ಮಹಿಳೆ ಸೇರಿ ನಾಲ್ವರು ಮಕ್ಕಳು ಕೊಚ್ಚಿ ಹೋಗಿದ್ದಾರೆ. ಕೊನೆಯ ಕ್ಷಣದ ವಿಡಿಯೋ ಸೆರೆಯಾಗಿದೆ.
ಇನ್ನು, ಲೋನವಾಲ ಅಧಿಕಾರಿಗಳು ಇದೀಗ ಪ್ರವಾಸಿ ತಾಣಕ್ಕೆ ಪ್ರವೇಶ ನಿರ್ಬಂಧ ವಿಧಿಸಿದ್ದಾರೆ. ನೀರು, ಜಲಾಪತದ ಕಡೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post