ಬಿಹಾರ: ಬಹುಕೋಟಿ ಮೇವು ಹಗರಣದಲ್ಲಿ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಜೈಲು ಪಾಲಾಗಿದ್ದರೆ, ಐಆರ್’ಸಿಟಿಸಿ ಹಗರಣದಲ್ಲಿ ಲಾಲು ಪತ್ನಿ ರಾಬ್ರಿ ಹಾಗೂ ಪುತ್ರ ತೇಜಸ್ವಿ ಜೈಲು ಸೇರುವ ದಿನಗಳು ದೂರವಿಲ್ಲ.
ಇಡಿಯ ಬಿಹಾರವನ್ನು ತಮ್ಮ ಕಾಲಕಸದಂತೆ ಕಂಡು, ಪ್ರಜಾಪ್ರಭುತ್ವದ ನಾಡಲ್ಲಿ ಸರ್ವಾಧಿಕಾರಿಯಂತೆ ವರ್ತಿಸಿ, ಜನರ ದುಡ್ಡು ಮಾತ್ರವಲ್ಲ, ದನಗಳ ಮೇವನ್ನೂ ತಿಂದು ತೇಗಿದ ಲಾಲು ಕುಟುಂಬ ರಾಜಕೀಯಕ್ಕೆ ಮಾತ್ರವಲ್ಲ ದೇಶದಲ್ಲಿ ವಾಸ ಮಾಡಲೇ ನಾಲಾಯಕ್..
ಇಂತಹ ಲಾಲು ಪುತ್ರ ತೇಜಸ್ವಿ ಯಾದವ್ ಡಿಸಿಎಂ ಆದ ವೇಳೆ ಹೇಗೆ ಜನರ ತೆರಿಗೆ ಹಣದಲ್ಲಿ ಐಷಾರಾಮಿ ಹಡಬೆ ಜೀವನ ನಡೆಸಿದ್ದಾರೆ ಎನ್ನುವುದು ಹೊರಬಿದ್ದಿದೆ.
ತಮ್ಮ ಅಧಿಕಾರವಧಿ ಮುಕ್ತಾಯವಾದರೂ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡದ ತೇಜಸ್ವಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದ್ದು, ಸುಪ್ರೀಂ ಆದೇಶಕ್ಕೆ ಹೆದರಿ ಈಗ ಖಾಲಿ ಮಾಡಿದ್ದಾರೆ. ಆನಂತರ ಸರ್ಕಾರ ಬಂಗಲೆಯನ್ನು ವಶಕ್ಕೆ ತೆಗೆದುಕೊಂಡ ವೇಳೆ, ಇವರ ಐಷಾರಾಮಿ ಜೀವನ ಹೊರಕ್ಕೆ ಬಿದ್ದಿದೆ.
ತಾವು ಡಿಸಿಎಂ ಆಗಿದ್ದ ವೇಳೆ ಸರ್ಕಾರಿ ಬಂಗಲೆಯನ್ನು ತಮಗೆ ಬೇಕಾದ ರೀತಿಯಲ್ಲಿ ನವೀಕರಣ ಮಾಡಿಕೊಂಡಿದ್ದ ತೇಜಸ್ವಿ, ಜನರ ದುಡ್ಡಲ್ಲಿ ಐಷಾರಾಮಿ ಜೀವನ ಮಾಡಿದ್ದಾರೆ. ಸಾಮಾನ್ಯವಾಗಿ ಯಾವುದೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಥವಾ ಸಚಿವರಿಗೆ ಸರ್ಕಾರಿ ಬಂಗಲೆ ಮಂಜೂರಾದಾಗ ತಮ್ಮ ಅಭಿರುಚಿಗೆ ತಕ್ಕಂತೆ ಒಂದಷ್ಟು ನವೀಕರಣ ಮಾಡಿಕೊಳ್ಳುತ್ತಾರೆ. ಇದರ ವೆಚ್ಚ ಸಾಮಾನ್ಯವಾಗಿ 10 ರಿಂದ 50 ಲಕ್ಷ.
ವಾಸ್ತವವಾಗಿ ನೋಡುವುದಾದರೆ, ಪ್ರಜಾಸೇವಕರಾದ ಇವರುಗಳಿಗೆ ಉಚಿತವಾಗಿ ಸರ್ಕಾರಿ ಬಂಗಳೆಗಳನ್ನು ನೀಡುವುದೇ ಸರಿಯಾದ ಕ್ರಮವಲ್ಲ. ಹೋಗಲಿ, ನೀಡಿದರೂ ಹೇಗೆ ಇದೆಯೋ ಹಾಗೆಯೇ ಹೊಂದಿಕೊಂಡು ಇರಬೇಕು. ಆದರೆ, ಪ್ರತಿ ಸಚಿವರು ಒಂದು ಬಂಗಲೆಗೆ ಬಂದಾಗಲೂ ಒಂದಲ್ಲ ಒಂದು ನವೀಕರಣದ ಹೆಸರಿನಲ್ಲಿ ಲಕ್ಷಾಂತರ ರೂ.ಗಳ ಜನರ ತೆರಿಗೆ ಹಣವನ್ನು ವ್ಯರ್ಥ ಮಾಡುವುದು ನಿಜಕ್ಕೂ ನೀಚಕೃತ್ಯ. ಇದೆಲ್ಲಾ ಹೋಗಲಿ ಲಕ್ಷಗಳ ಲೆಕ್ಕದಲ್ಲಿ ವ್ಯಯವಾಗುತ್ತದೆ ಎಂದುಕೊಳ್ಳೋಣ. ಆದರೆ, ತಮ್ಮ ಐಷಾರಾಮಿ ಹಡಬೆ ಜೀವನಕ್ಕಾಗಿ ತೇಜಸ್ವಿ ವ್ಯರ್ಥ ಮಾಡಿರುವ ಹಣ ಎಷ್ಟು ಗೊತ್ತಾ? ಬರೋಬ್ಬರಿ 5.5 ಕೋಟಿಗೂ ಅಧಿಕ.
ಪಾಟ್ನಾದಲ್ಲಿರುವ ಸರ್ಕಾರಿ ಬಂಗಲೆಯನ್ನು ಇವರು ಹೇಗೆ ನವೀಕರಣ ಮಾಡಿದ್ದಾರೆ ಎಂದರೆ ಯಾವುದೇ 7 ಸ್ಟಾರ್ ರೆಸಾರ್ಟ್ ಅಥವಾ ಹೊಟೇಲನ್ನೇ ಮೀರಿಸುತ್ತದೆ. ಇದರ ಐಷಾರಾಮಿತ್ವದ ಮುಂದೆ ಈ ಹೊಟೇಲ್ ಹಾಗೂ ರೆಸಾರ್ಟ್ಗಳೂ ಏನೂ ಇಲ್ಲ.
ಇಡಿಯ ಬಂಗಲೆಯ ಪ್ರಮುಖ ಸ್ಥಳಗಳಲ್ಲಿ ರೆಡ್ ಕಾರ್ಪೆಟ್ ಅಳವಡಿಸಲಾಗಿದ್ದು, ನೆಲಕ್ಕೆ ಹೆಚ್ಚು ವ್ಯಯವಾಗುವ ಇಟಾಲಿಯನ್ ಮಾರ್ಬಲ್ ಹಾಕಲಾಗಿದೆ. ಅಡುಗೆ ಕೋಣೆಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ಮಾದರಿಯಲ್ಲಿ ಅತ್ಯಾಧುನಿಕವಾಗಿ ನಿರ್ಮಾಣ ಮಾಡಲಾಗಿದ್ದು, ಮಲಗುವ ಕೋಣೆಗಳನ್ನಂತೂ ರಾಜಮಹಾರಾಜರ ಕಾಲದಲ್ಲಿತ್ತು ಎಂದು ಹೇಳುವ ರೀತಿಯಲ್ಲಿ ಐಷಾರಾಮಿಯಾಗಿ ವಿನ್ಯಾಸಗೊಳಿಸಲಾಗಿದೆ. ಬಾತ್ ರೂಂ ಹೇಗಿದೆ ಗೊತ್ತಾ? ನೀವು 5 ಸ್ಟಾರ್ ಹೊಟೇಲ್’ನಲ್ಲಿ ಒಮ್ಮೆ ಉಳಿದುಕೊಂಡಿದ್ದರೆ ಐಷಾರಾಮಿ ಬಾತ್ ರೂಂ ಅನುಭವ ನಿಮಗೆ ಆಗಿರುತ್ತದೆ. ಅಂತಹ 5 ಸ್ಟಾರ್ ಅಲ್ಲ 7 ಸ್ಟಾರ್ ಹೊಟೇಲ್ ಬಾತ್ ರೂಂಗಳು ಇಲ್ಲಿನ ಬಾತ್ ರೂಂ ಮುಂದೆ ಏನೂ ಇಲ್ಲ.
ಇಡಿಯ ನಿವಾಸಕ್ಕೆ ಹವಾನಿಯಂತ್ರಣ ಅಳವಡಿಸಲಾಗಿದ್ದು, ಅತ್ಯಾಧುನಿಕ ವಿನ್ಯಾಸದ ಈಜುವ ಕೊಳ ನಿರ್ಮಾಣ ಮಾಡಲಾಗಿದೆ.
ಈ ಬಂಗಲೆಯನ್ನು ಸರ್ಕಾರ ವಶಕ್ಕೆ ಪಡೆದ ನಂತರ ಪರಿಶೀಲನೆ ನಡೆಸಿರುವ ಬಿಹಾರ ಡಿಸಿಎಂ ಸುಶೀಲ್ ಮೋದಿ, ನವೀಕರಣಕ್ಕೆ 10 ರಿಂದ 20 ಲಕ್ಷದವರೆಗೂ ಪರವಾಗಿಲ್ಲ. ಆದರೆ, ತಮ್ಮ ಐಷಾರಾಮಿ ಜೀವನಕ್ಕಾಗಿ ಜನರ ತೆರಿಗೆಯ 5.5 ಕೋಟಿ ರೂ.ಗೂ ಅಧಿಕ ಮೊತ್ತವನ್ನು ವ್ಯಯ ಮಾಡಿರುವುದು ನಿಜಕ್ಕೂ ಹೇಯಕೃತ್ಯ. ಜನಸೇವಕರಾದ ನಾವುಗಳು ಸಾಮಾನ್ಯ ಜನರಂತೆಯೇ ಬದುಕಬೇಕು. ಹೀಗೆ, ಜನರ ದುಡ್ಡನ್ನು ವ್ಯರ್ಥ ಮಾಡುವ ಬದಲಾಗಿ, ಜನೋಪಕಾರಿ ಕೆಲಸಗಳಿಗೇ ಬಳಸಬಹುದು ಎಂದಿದ್ದಾರೆ.
Discussion about this post