ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಸಂಧ್ಯಾ ಸಿಹಿಮೊಗೆ |
ಪ್ರೀತಿ ಎಂದರೇನು ಅದು ಹೇಗೆ ಹುಟ್ಟುತ್ತೆ ನನಗೆ ಗೊತ್ತಿಲ್ಲ. ಮೊದಲ ನೋಟದಲ್ಲೇ ನನ್ನ ಮನಸು ನಿಮಗೆ ಸೋತು ಹೋಯಿತು. ನಮ್ದು ಅರೆಂಜ್ ಮ್ಯಾರೇಜ್ ಆದ್ರು ನಮ್ಮಿಬ್ಬರ ನಡುವೆ ಪ್ರೀತಿ ಹುಟ್ಟಿದೆ. ಬಾಯ್ಬಿಟ್ಟು ಹೇಳಿಲ್ಲ ಅಂದ್ರು ಕಣ್ಣು ನೋಡಿದ್ರೆ ಸಾಕು ಪ್ರೀತಿ ಭಾಸವಾಗುತ್ತೆ. ಒಂದು ಪವಿತ್ರವಾದ ಸಂಬಂಧ ಹುಟ್ಟುಬೇಕು ಅಂದ್ರೆ ಅಲ್ಲಿ ಪ್ರೀತಿಯ ಹೂವು ಅರಳಬೇಕು ಅಲ್ವಾ ರೀ..!
ನಿಮ್ಮನ್ನ ಯಾಕೆ ಮಂಜಪ್ಪ ಅಂತ ಹೇಳ್ತೀನಿ ಗೊತ್ತಾ…? ನನ್ನ ತಂದೆ ತಾಯಿ ನನ್ನ ರಾಣಿತರ ನೋಡಿಕೊಂಡಿದ್ದಾರೆ ನೀವು ನನ್ನ ಮಹಾರಾಣಿತರ ನೋಡ್ಕೋತಿದ್ದೀರಾ ಪತಿಯಾಗಿದ್ರು ಸ್ನೇಹಿತನಾಗಿ ಸದಾ ಜೊತೆಯಲ್ಲಿ ನಿಲ್ತೀರ ಗಂಡ ಅನ್ನೋ ದರ್ಪ ತೋರದೆ ನನ್ನ ಖುಷಿಯನ್ನು ಬಯಸ್ತೀರಾ ತಪ್ಪು ಸರಿ ಪಾಠ ಮಾಡ್ತೀರಾ ಅಷ್ಟೇ ಅಲ್ಲ ನನ್ ಜೀವನದ ಗುರು ನೀವೇ ರೀ…!!

ಪ್ರೇಮ ಪತ್ರಗಳ ಮೂಲಕ ವ್ಯಕ್ತಪಡಿಸುವ ಪ್ರೀತಿ ಶಾಶ್ವತ ಅಲ್ವಾ ಮಂಜಪ್ಪ ಪ್ರೀತಿಯ ಗಂಡನಿಗೆ ಹೃದಯಸ್ಪರ್ಶಿಸುವ ಪ್ರೇಮ ಪತ್ರವನ್ನು ಬರೆಯಲು ಒಬ್ಬ ಪತ್ನಿ ಕವಿ ಅಥವಾ ಅತ್ಯುತ್ತಮ ಬರಹಗಾರ್ತಿ ಆಗಿರಬೇಕಿಲ್ಲ ಅಲ್ವಾ…!!

ಪ್ರಪಂಚದಲ್ಲಿ ಎಷ್ಟೇ ಜನ ಇದ್ದರೂ ನಾನು ನಿಮ್ಮನ್ನು ಯಾಕೆ ಇಷ್ಟಪಟ್ಟೆ ಗೊತ್ತಾ..? ನನ್ನ ಈ ಪ್ರಪಂಚದಲ್ಲಿ ನೀವು ನನ್ನ ಒಂಟಿಯಾಗಿ ಬಿಟ್ಟು ಹೋಗಲ್ಲ ಅನ್ನು ನಂಬಿಕೆಯಿಂದ ಮಂಜಪ್ಪ..!!

ಪ್ರತಿದಿನ ಸಿಹಿ ನೆನಪುಗಳೇ ಆಗಾಗ ಕೋಪ ಜಗಳಗಳು ಆದರೂ ನಿಮ್ಮ ಜೊತೆ ಇರೋ ಪ್ರತಿಕ್ಷಣವೂ ಅತಿ ಸುಂದರ. ಒಂದ್ ಮಾತ್ನಲ್ಲಿ ಹೇಳ್ಬೇಕು ಅಂದ್ರೆ ನೀವಿಲ್ದೆ ನಾನಿಲ್ಲ ಮಂಜಪ್ಪ..!!

ನಿಜ ದೇವರು ಕೊಟ್ಟಿರುವ ಉಡುಗೊರೆ ನೀವು ಅಂದ ಮೇಲೆ ಏಷ್ಟು ಬೆಲೆ ಬಾಳುವಂತದ್ದು ಎಂದು ಹೇಳಲು ಸಾಧ್ಯವಿಲ್ಲ. ಈ ಜಗತ್ತಿನಲ್ಲಿ ನನ್ನ ಪಾಲಿಗೆ ಬೆಲೆ ಕಟ್ಟೋಕೆ ಆಗದೆ ಇರುವುದು ಏನಾದರೂ ಇದ್ದರೆ ಅದು ನೀವು ಮತ್ತೆ ನಿಮ್ ಪ್ರೀತಿ ಮಂಜಪ್ಪ…!!

ನಿನ್ನೆದೆಯ ಮೇಲೆ ತಲೆಯಿಟ್ಟು ಮಲಗಿದರೆ ನಿನ್ನನೊಮ್ಮೆ ಗಟ್ಟಿಯಾಗಿ ಅಪ್ಪಿಕೊಂಡರೆ ನನ್ನೆಲ್ಲಾ ನೋವು ಆಯಾಸವೆಲ್ಲ ಮಾಯವಾಗಿ ಬಿಡುತ್ತದೆ. ನೀವು ಪ್ರೀತಿ ಮಾಡೋದು ಹೇಳಿ ಕೊಟ್ಟಿದ್ದೀರಾ ಆದರೆ ನಿಮ್ಮನ್ನು ಬಿಟ್ಟಿರೋದು ಹೇಗೆ ಅಂತ ಹೇಳಿ ಕೊಟ್ಟಿಲ್ಲ ನೀವಿಲ್ದೆ ಒಂದು ದಿನ ಕಳೆಯುವುದೇ ಕಷ್ಟ ಇನ್ನೂ ನೀನಿಲ್ಲದ ಜೀವನವನ್ನು ಕನಸಲ್ಲೂ ಉಳಿಸಿಕೊಳ್ಳಲು ಸಾಧ್ಯವಿಲ್ಲ ಮಂಜಪ್ಪ..!!

ನನ್ನ ಬದುಕಿನ ಕಥೆಯಲ್ಲಿ ಮುಗಿಯದ ಬಹುದೊಡ್ಡ ಪಾತ್ರ ನಿನ್ನದು. ನಿನ್ನೊಂದಿಗೆ ಇಡೀ ಜೀವನ ಸಂಭ್ರಮಿಸುವ ಆಸೆ. ನನ್ನ ಕೊರಳಿನ ಕರಿಮಣಿ ಒಡೆಯನೇ…!!
Dear mine thank you for coming in to my life.. you made my life so beautiful.. I want you till my last breath manjappa and my heart is full of you.. happy birthday and l love you ma soulmate…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post