ಕಲ್ಪ ಮೀಡಿಯಾ ಹೌಸ್ | ಲಕ್ನೋ |
ಸಾಮಾನ್ಯ ಆಟೋದಲ್ಲಿ ಬರೋಬ್ಬರಿ 27 ಮಂದಿಯನ್ನು ತುಂಬಿಸಿಕೊಂಡು ಸಂಚಾರ ಮಾಡ್ತಿದ್ದ ಘಟನೆ ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಡೆದಿದೆ.
ಬಕ್ರೀದ್ ಹಿನ್ನೆಲೆಯಲ್ಲಿ 6 ಸೀಟ್ ಸಾಮಾರ್ಥ್ಯದ ಆಟೋದಲ್ಲಿ ಬರೋಬ್ಬರಿ 27 ಮಂದಿಯನ್ನು ತುಂಬಿಸಿಕೊಂಡು ನಮಾಜ್ ಮಾಡಲು ಆಟೋದಲ್ಲಿ ಬಿಂಡ್ಕಿಗೆ ಬಂದಿದ್ದರು. ಆಟೋ ಚಾಲಕ ಹೈ ಸ್ಪೀಡ್ ನಲ್ಲಿ ತೆರಳುತ್ತಿದ್ದ ವೇಳೆ ಅನುಮಾನಗೊಂಡ ಪೊಲೀಸರು ಆಟೋವನ್ನು ತಡೆದು ನಿಲ್ಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆಟೋದಲ್ಲಿದ್ದ ಎಲ್ಲಾ ಪ್ರಯಾಣಿಕರು ಮಹಾರಾಷ್ಟ್ರದವರು ಎಂದು ತಿಳಿದುಬಂದಿದ್ದು, ಆಟೋ ತಡೆದು ನಿಲ್ಲಿಸಿದ ಬಳಿಕ ಪೊಲೀಸರು ಪ್ರಯಾಣಿಕರನ್ನು ಕೆಳಗಿಳಿಯುವಂತೆ ಹೇಳಿದ್ದರು. ಈ ವೇಳೆ ಪೊಲೀಸರಿಗೆ ಶಾಕ್ ಕಾದಿತ್ತು. ಏಕೆಂದರೆ ಆಟೋದಿಂದ ಮಕ್ಕಳು ಸೇರಿ ಬರೋಬ್ಬರಿ 27 ಮಂದಿ ಕೆಳಗಿಳಿದಿದ್ದರು. ಆಟೋ ಚಾಲಕನ ವಿರುದ್ಧ ತಕ್ಷಣ ಕ್ರಮಕೈಗೊಂಡು ಪೊಲೀಸರು ಆಟೋವನ್ನು ಸೀಜ್ ಮಾಡಿದ್ದಾರೆ.
Also read: “ಪ್ರಾಮಿಸ್” ಚಿತ್ರದ ಚಿತ್ರೀಕರಣ ಮುಕ್ತಾಯ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post