ಕಲ್ಪ ಮೀಡಿಯಾ ಹೌಸ್ | ಲಕ್ನೋ |
ಸರ್ಕಾರಿ ಶೌಚಾಲಯ ಕುಸಿದುಬಿದ್ದ ಪರಿಣಾಮ 5 ವರ್ಷದ ಬಾಲಕನೊಬ್ಬ ಜೀವಂತ ಸಮಾಧಿಯಾಗಿರುವ ಘೋರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಜಖಿಂಪುರ ಖೇರಿ ಲ್ಲೆಯ ಮಗಲ್ಗಂಜ್ ಚಪರ್ತಾಲಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಸರ್ಕಾರ ನಿರ್ಮಿಸಿದ ಶೌಚಾಲಯ ಕುಸಿದ ಪರಿಣಾಮ ಅಲ್ಲಿಯೇ ಆಟವಾಡುತ್ತಿದ್ದ ಬಾಲಕ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾನೆ.
2016ರಲ್ಲಿ ಗ್ರಾಮದ ಮುಖಂಡರು ಹಾಗೂ ಗ್ರಾಪಂ ಕಾರ್ಯದರ್ಶಿ ಸೇರಿ ಕಳಪೆ ವಸ್ತುಗಳನ್ನು ಬಳಸಿ ಶೌಚಾಲಯ ನಿರ್ಮಿಸಿದ್ದರು. ಕಳಪೆ ಗುಣಮಟ್ಟದ ಶೌಚಾಲಯ ನಿರ್ಮಿಸಿರುವುದರಿಂದಲೇ ಮಗನ ಸಾವಾಗಿದೆ ಎಂದು ಬಾಲಕನ ಕುಟುಂಬದವರು ಆರೋಪಿಸಿದ್ದಾರೆ.
Also read: ಅರಣ್ಯಭೂಮಿ ಕಬಳಿಕೆ ತಡೆಯುವಂತೆ ಆಗ್ರಹಿಸಿ ಸಾಗರ ಎಸಿಗೆ ಮನವಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post