ಕಲ್ಪ ಮೀಡಿಯಾ ಹೌಸ್ | ಮಂಗಳೂರು |
75 ವರ್ಷ ಮೇಲ್ಪಟ್ಟವರಿಗೆ ಪಕ್ಷದಿಂದ ಟಿಕೇಟ್ ನೀಡುವುದಿಲ್ಲ ಎಂದು ಬಿಜೆಪಿಯು ಎಲ್ಲಿಯೂ ಹೇಳಿಲ್ಲ. ಟಿಕೆಟ್ ಸಿಕ್ಕಿಲ್ಲವೆಂದರೂ ನಾನು ತಲೆಕೆಡಿಸಿಕೊಳ್ಳೋದಿಲ್ಲ ಎಂದು ಮಾಜಿ ಸಚಿವ, ಶಿವಮೊಗ್ಗ ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಮಾಜ ಸೇವೆ ಮಾಡಲು ಶಾಸಕನಾಗುವುದು ಅನಿವಾರ್ಯವಲ್ಲ. ಬಿಜೆಪಿಯಲ್ಲಿ ಇರುವವರಿಗೆ ಯಾರಿಗೂ ವಯಸ್ಸಾಗೋದಿಲ್ಲ. ಇದು ನಮಗೆ ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನ ಎಂದಿದ್ದಾರೆ.
ರಾಜ್ಯದಲ್ಲಿ ಸಮರ್ಥ ಬಿಜೆಪಿ ನಾಯಕರಿದ್ದಾರೆ. ಯಾರಿಗೆ ಟಿಕೇಟ್ ಕೊಡಬೇಕು ಎನ್ನುವುದರ ಬಗ್ಗೆ ಇಡೀ ರಾಜ್ಯವನ್ನು ಸರ್ವೇ ಮಾಡಿ ಕೇಂದ್ರದವರು ತೀರ್ಮಾನ ಮಾಡುತ್ತಾರೆ. ನಮ್ಮ ಪಕ್ಷದಲ್ಲಿ ಕಾರ್ಯಕರ್ತ ಕೂಡ ನಾಯಕನೇ. ಕೇಂದ್ರದಲ್ಲಿ ಪ್ರಧಾನಿ ಯಾರು ಎಂಬ ಪ್ರಶ್ನೆ ಉದ್ಭವಿಸಿದ್ದ ಸಂದರ್ಭದಲ್ಲಿ ಎಲ್ಲರೂ ಮೋದಿ ಹೆಸರನ್ನು ಹೇಳಿದ್ದರು. ಯಾರಲ್ಲಿ ನಾಯಕತ್ವ ಗುಣ ಇದೆ ಅವರೇ ನಾಯಕರಾಗಿ ಆಯ್ಕೆಯಾಗುತ್ತಾರೆ ಎಂದಿದ್ದಾರೆ.
Also read: ಸರ್ಕಾರಿ ಶೌಚಾಲಯ ಕುಸಿದು 5 ವರ್ಷದ ಬಾಲಕ ಜೀವಂತ ಸಮಾಧಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post